For Quick Alerts
ALLOW NOTIFICATIONS  
For Daily Alerts

Gold Price In India: ಚಿನ್ನದ ದರದಲ್ಲಿ ಕುಸಿತ

By ಅನಿಲ್ ಆ‌ಚಾರ್
|

ಭಾರತದಲ್ಲಿ ಗುರುವಾರ (ಸೆಪ್ಟೆಂಬರ್ 17, 2020) ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ದರ ಇಳಿಕೆ ಆಗಿರುವ ಪರಿಣಾಮ ಇದು. ಎಂಸಿಎಕ್ಸ್ ನಲ್ಲಿ ಅಕ್ಟೋಬರ್ ತಿಂಗಳ ಚಿನ್ನದ ಡೆಲಿವರಿ ದರವು 400 ರುಪಾಯಿಗಿಂತ ಹೆಚ್ಚು ಕೆಳಗೆ ಇಳಿದು, ಪ್ರತಿ ಹತ್ತು ಗ್ರಾಮ್ ಗೆ 51,380 ರುಪಾಯಿಯಂತೆ ವಹಿವಾಟು ನಡೆಸಿತು.

ಹಣ ಹೂಡಿಕೆಯಲ್ಲಿ ಸೋತವರಿಂದಲೂ ಪಾಠ ಕಲಿಯಲು ಇಲ್ಲಿವೆ 4 ಕಾರಣಹಣ ಹೂಡಿಕೆಯಲ್ಲಿ ಸೋತವರಿಂದಲೂ ಪಾಠ ಕಲಿಯಲು ಇಲ್ಲಿವೆ 4 ಕಾರಣ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು ಎರಡು ವಾರಗಳ ಗರಿಷ್ಠ ಮಟ್ಟದಿಂದ ಕುಸಿದಿದೆ. ಫೆಡ್ ನಿಂದ ಬಡ್ಡಿ ದರವನ್ನು ಕನಿಷ್ಠ ಮೂರು ವರ್ಷಕ್ಕೆ ಕಡಿಮೆ ಮಟ್ಟವನ್ನು ಇಡಲಾಗುವುದು ಮತ್ತು ಡಾಲರ್ ಸೂಚ್ಯಂಕದಲ್ಲಿ ಏರಿಕೆ ಕಂಡ ಹಿನ್ನೆಲೆಯಲ್ಲಿ ಚಿನ್ನದ ದರ ಇಳಿಕೆಯಾಗಿದೆ.

ಕೊರೊನಾ ಬಿಕ್ಕಟ್ಟಿನಿಂದ ಚೇತರಿಕೆ ಆತಂಕ

ಕೊರೊನಾ ಬಿಕ್ಕಟ್ಟಿನಿಂದ ಚೇತರಿಕೆ ಆತಂಕ

ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಚೇತರಿಕೆ ಆಗಬಹುದಾ ಎಂಬ ಬಗ್ಗೆ ಆತಂಕ ಇದ್ದೇ ಇದೆ. ಬುಧವಾರದಂದು ಸ್ಪಾಟ್ ಚಿನ್ನದ ಬೆಲೆ 0.3% ಇಳಿದು, ಪ್ರತಿ ಔನ್ಸ್ ಗೆ 1954.42 ಅಮೆರಿಕನ್ ಡಾಲರ್ ನಂತೆ ವಹಿವಾಟು ನಡೆಸಿತು. ಸೆಪ್ಟೆಂಬರ್ 2ನೇ ತಾರೀಕು ದಾಖಲೆ ಗರಿಷ್ಠ ಮಟ್ಟ $ 1973.16 ಮುಟ್ಟಿತ್ತು.

ಹಣದುಬ್ಬರದ ನಿರ್ವಹಣೆ

ಹಣದುಬ್ಬರದ ನಿರ್ವಹಣೆ

ನಿರುದ್ಯೋಗ ದರದಲ್ಲಿ ಕುಸಿತ ಕಂಡಿರುವುದರಿಂದ ಆರ್ಥಿಕ ಚೇತರಿಕೆ ಶೀಘ್ರವಾಗಿ ಆಗುವುದನ್ನು ನಿರೀಕ್ಷಿಸುವುದಾಗಿ ಯುಎಸ್ ಹೇಳಿದೆ. ಜತೆಗೆ ಹಣದುಬ್ಬರವು ಹಳಿಗೆ ಬರುವ ತನಕದಿಂದ ಒಂದು ಮಟ್ಟವನ್ನು ದಾಟುವವರೆಗೆ ದರವನ್ನು ಕೂಡ ಶೂನ್ಯ ಮಟ್ಟದಲ್ಲಿ ಇರಿಸಲಾಗುವುದು. ಇನ್ನೂ ಕೆಲ ಕಾಲ ಹಣದುಬ್ಬರ ದರದ ಗುರಿಯು 2% ಆಗಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
 

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?

ಈ ಮಧ್ಯೆ ಜಪಾನ್ ಆರ್ಥಿಕ ನೀತಿಯ ನಿಲುವನ್ನು ಗಮನಿಸಬೇಕಾಗಿದೆ. ಆರ್ಥಿಕತೆ ಚೇತರಿಕೆಗಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ನಿಂದ ಇನ್ನಷ್ಟು ಆರ್ಥಿಕ ಉತ್ತೇಜನವನ್ನು ಒದಗಿಸುವ ಸಾಧ್ಯತೆ ಇದೆ. ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ, ಚಿನ್ನದ ದರವು ಪ್ರತಿ 10 ಗ್ರಾಮ್ ಗೆ 24 ಕ್ಯಾರೆಟ್ ಗೆ 51,580 ರುಪಾಯಿ ಹಾಗೂ 22 ಕ್ಯಾರೆಟ್ ಗೆ 50,580 ರುಪಾಯಿಯಲ್ಲಿ ವಹಿವಾಟು ನಡೆಸಿತು.

English summary

Gold Price Drop In India's MCX On September 17, 2020

There is a sharp drop in gold price in Inda's MCX on September 17, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X