ಅಂತರರಾಷ್ಟ್ರೀಯ ಮಾರ್ಕೆಟ್ ಅನುಸರಿಸಿ ಚಿನ್ನದ ದರದಲ್ಲಿ ಇಳಿಕೆ

ಭಾರತದ ನಗರಗಳಲ್ಲಿ ಗುರುವಾರ (ಜನವರಿ 7, 2021) ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದ ಬೆನ್ನಿಗೇ ದೇಶೀಯ ಮಾರ್ಕೆಟ್ ನಲ್ಲೂ ಇಳಿದಿದೆ. ಬೆಂಗಳೂರಿನಲ್ಲಿ 10 ಗ್ರಾಮ್ ಸ್ಪಾಟ್ ಗೋಲ್ಡ್ ದರ 47,500 ರುಪಾಯಿ ಇದೆ. ಚೆನ್ನೈ ಮತ್ತು ದೆಹಲಿಯಲ್ಲಿ ಕೂಡ 22 ಮತ್ತು 24 ಕ್ಯಾರೆಟ್ ಚಿನ್ನದ ದರ ಇಳಿಕೆ ಆಗಿದೆ.

ಬುಧವಾರದಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು 2%ಗಿಂತ ಹೆಚ್ಚು ಕುಸಿತ ಕಂಡಿತು. ಯುಎಸ್ ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದರಿಂದ ಈ ಬೆಳವಣಿಗೆ ಆಯಿತು. ಇನ್ನು ಜಾರ್ಜಿಯಾದಲ್ಲಿ ಡೆಮಾಕ್ರಟ್ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಹೂಡಿಕೆದಾರರು ವಿಶ್ವಾಸ ಇರಿಸಿಕೊಂಡಿರುವುದರಿಂದ ಟ್ರೆಷರಿ ರಿಟರ್ನ್ಸ್ ಹೆಚ್ಚಾಗಿದೆ.

ಸ್ಪಾಟ್ ಗೋಲ್ಡ್ 2.0% ಇಳಿಕೆ ಕಂಡು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1907ರಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ಯುಎಸ್ ಗೋಲ್ಡ್ ಫ್ಯೂಚರ್ಸ್ ಹತ್ತಿರಹತ್ತಿರ 2.03% ಇಳಿಕೆ ಕಂಡಿದೆ. ಕಳೆದ ವರ್ಷ ಚಿನ್ನದ ದರದಲ್ಲಿ ಭರ್ಜರಿ ಏರಿಕೆ ಕಂಡಿದ್ದರೂ ಈ ವರ್ಷ ಹೇಳಿಕೊಳ್ಳುವಂಥ ಗಳಿಕೆಯನ್ನೇನೂ ಚಿನ್ನ ಕಂಡಿಲ್ಲ. ಇಂತಿಷ್ಟು ಬೆಲೆ ಮಿತಿಯೊಳಗೆ ಚಿನ್ನದ ವಹಿವಾಟು ನಡೆಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಅಂತರರಾಷ್ಟ್ರೀಯ ಮಾರ್ಕೆಟ್ ಅನುಸರಿಸಿ ಚಿನ್ನದ ದರದಲ್ಲಿ ಇಳಿಕೆ

ಕಳೆದ ಕೆಲ ತಿಂಗಳಿಂದ ಚಿನ್ನದ ದರ ಸ್ಥಿರವಾಗಿಯೇ ಇದೆ. ಹೂಡಿಕೆದಾರರು ಈ ಹಂತದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಚಿನ್ನದ ಬೆಲೆಯಲ್ಲಿ ತೀಕ್ಷ್ಣವಾದ ಇಳಿಕೆ ನಿರೀಕ್ಷೆ ಮಾಡಕ್ಯ್ ಸಾಧ್ಯವಿಲ್ಲ. ಆದ್ದರಿಂದ ಚಿನ್ನದ ಬೆಲೆ ಸ್ಥಿರವಾಗಿಯೇ ಇರಲಿದೆ ಎಂದು ಆಭರಣ ವರ್ತಕರು ಅಭಿಪ್ರಾಯ ಪಡುತ್ತಾರೆ. ಪ್ರತಿ ಸಲ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಾಗಲೂ ಅದು ಖರೀದಿಯ ಅವಕಾಶ ಆಗಬಹುದು ಎನ್ನುತ್ತಾರೆ.

ಇದರ ಜತೆಗೆ ಹೂಡಿಕೆದಾರರು ಯುಎಸ್ ನಲ್ಲಿ ಹೆಚ್ಚಿನ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಹೀಗಾದಲ್ಲಿ ಚಿನ್ನದ ಬೆಲೆ ಮೇಲೇರಬಹುದು. ಆಗ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+