ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಹಳದಿ ಲೋಹದ ಬೆಲೆ ಕುಸಿತಗೊಂಡಿದೆ. ಫೆಬ್ರವರಿಯಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.02ರಷ್ಟು ಇಳಿಕೆಯಾಗಿ, 49,250 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.2ರಷ್ಟು ಏರಿಕೆಗೊಂಡು ಕೆಜಿಗೆ 63,635 ರೂಪಾಯಿಗೆ ತಲುಪಿದೆ.
ಕಳೆದ ದಿನದ ವಹಿವಾಟಿನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 1.8ರಷ್ಟು ಅಥವಾ 920 ರೂಪಾಯಿ ಇಳಿಕೆಗೊಂಡರೆ, ಬೆಳ್ಳಿಯು ಕೆಜಿಗೆ ಶೇಕಡಾ 2.7ರಷ್ಟು ಅಥವಾ 1,800 ರೂಪಾಯಿನಷ್ಟು ಕುಸಿದಿದೆ.
ಇನ್ನು ಸ್ಥಿರವಾದ ಅಮೆರಿಕಾ ಡಾಲರ್ ಮಧ್ಯೆ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿಕೆಯಾಗಿದ್ದು 1,835.11 ಡಾಲರ್‌ಗೆ ತಲುಪಿದೆ. ಬೆಳ್ಳಿ ಔನ್ಸ್‌ಗೆ ಶೇಕಡಾ 0.3ರಷ್ಟು ಕುಸಿದು 23.85 ಡಾಲರ್‌ಗೆ ಮುಟ್ಟಿದೆ. ಪ್ಲಾಟಿನಂ ಶೇಕಡಾ 0.2ರಷ್ಟು ಏರಿಕೆ ಕಂಡು 1,003.07 ಡಾಲರ್ ಮತ್ತು ಪಲ್ಲಾಡಿಯಮ್ ಶೇಕಡಾ 0.7ರಷ್ಟು ಏರಿಕೆಯಾಗಿ 2,279.83 ಡಾಲರ್‌ಗೆ ತಲುಪಿದೆ.

ಅಮೆರಿಕಾ ಟೆಕ್ ಷೇರುಗಳಲ್ಲಿ ಮಾರಾಟದ ಮಧ್ಯೆ ಏಷ್ಯಾದ ಇಕ್ವಿಟಿ ಮಾರುಕಟ್ಟೆಗಳು ಇಂದು ದಾಖಲೆಯ ಗರಿಷ್ಠ ಮಟ್ಟದಿಂದ ದುರ್ಬಲಗೊಂಡಿವೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇಕಡಾ 1ರಷ್ಟು ಇಳಿಕೆಗೊಂಡಿದೆ.


Click it and Unblock the Notifications