For Quick Alerts
ALLOW NOTIFICATIONS  
For Daily Alerts

ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿರುವ ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ

By ಅನಿಲ್ ಆಚಾರ್
|

ಯುಎಸ್ ಡಾಲರ್ ಪ್ರಬಲವಾಗುತ್ತಿರುವ ಕಾರಣಕ್ಕೆ ಭಾರತದ ಮಾರುಕಟ್ಟೆಯಲ್ಲಿ ಗುರುವಾರ (ಜನವರಿ 28, 2021) ಚಿನ್ನ ಮತ್ತು ಬೆಳ್ಳಿ ದರದ ಕುಸಿತ ವಿಸ್ತರಣೆ ಆಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 0.33% ಕುಸಿದು, ಪ್ರತಿ 10 ಗ್ರಾಮ್ ಗೆ 48,702 ರುಪಾಯಿಯನ್ನು ತಲುಪಿತು. ಆ ಮೂಲಕ ಸತತ ಐದನೇ ದಿನ ಕುಸಿತವನ್ನು ಕಂಡಿತು.

 

ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಏಕಿಷ್ಟು ಮಹತ್ವ?ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಏಕಿಷ್ಟು ಮಹತ್ವ?

ಇನ್ನು ಬೆಳ್ಳಿ ಬೆಲೆಯಲ್ಲಿ 1% ಕರಗಿ, ಕೇಜಿಗೆ 65,866 ರುಪಾಯಿ ಇದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರವು 0.11% ಹಾಗೂ ಬೆಳ್ಳಿ 0.64% ಕುಸಿತ ಕಂಡಿತ್ತು. ಆಗಸ್ಟ್ ನಲ್ಲಿ ಪ್ರತಿ ಹತ್ತು ಗ್ರಾಮ್ ಗೆ 56,300 ರುಪಾಯಿಯಲ್ಲಿ ಇದ್ದ ಚಿನ್ನದ ದರವು ಅಲ್ಲಿಂದ ರು. 7500 ಇಳಿಕೆ ಕಂಡಂತಾಗಿದೆ.

ಇತರ ಕರೆನ್ಸಿ ಇರುವವರಿಗೆ ಚಿನ್ನ ದುಬಾರಿ

ಇತರ ಕರೆನ್ಸಿ ಇರುವವರಿಗೆ ಚಿನ್ನ ದುಬಾರಿ

ಯು.ಎಸ್. ಡಾಲರ್ ಬಲಗೊಂಡ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ದರ ಕುಸಿತ ಕಂಡಿತು. ಸ್ಪಾಟ್ ಗೋಲ್ಡ್ ದರವು 0.3% ಕುಸಿದು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1839.21ರಲ್ಲಿ ಇದೆ. ಡಾಲರ್ ಮೌಲ್ಯ ಹೆಚ್ಚಾಗುತ್ತಿದ್ದಂತೆ ಇತರ ಕರೆನ್ಸಿಗಳನ್ನು ಹೊಂದಿರುವವರ ಪಾಲಿಗೆ ಚಿನ್ನದ ಖರೀದಿ ದುಬಾರಿಯಾಗುತ್ತದೆ. ಡಾಲರ್ ಸೂಚ್ಯಂಕ 0.12% ಏರಿಕೆ ಕಂಡು, 90.745ರಲ್ಲಿ ಇದೆ. ಕಳೆದ ರಾತ್ರಿ, ಯುಎಸ್ ಫೆಡರಲ್ ರಿಸರ್ವ್ ಪ್ರಮುಖ ಬಡ್ಡಿ ದರವನ್ನು ಶೂನ್ಯಕ್ಕೆ ಸಮೀಪದಲ್ಲಿ ಇರಿಸಿತು. ತಿಂಗಳ ಬಾಂಡ್ ಖರೀದಿಯನ್ನು ಹಾಗೇ ಉಳಿಸಿತು. ಇತ್ತ, ಇತರ ಬೆಲೆ ಬಾಳುವ ಲೋಹಗಳು ಸಹ ಒತ್ತಡದಲ್ಲಿವೆ. ಬೆಳ್ಳಿ 0.2% ಕುಸಿದು, ಔನ್ಸ್ ಗೆ $ 25.18 ಇದ್ದರೆ, ಪ್ಲಾಟಿನಂ 0.2% ಇಳಿಕೆ ಕಂಡು, $ 1,063.76 ರಲ್ಲಿದೆ.

ಇಟಿಎಫ್ ಹೂಡಿಕೆದಾರರ ಆಸಕ್ತಿ ದುರ್ಬಲ

ಇಟಿಎಫ್ ಹೂಡಿಕೆದಾರರ ಆಸಕ್ತಿ ದುರ್ಬಲ

ಚಿನ್ನದ ಇಟಿಎಫ್ ಹರಿವು ಗಮನಿಸಿದರೆ ಹೂಡಿಕೆದಾರರ ಆಸಕ್ತಿ ದುರ್ಬಲವಾಗಿರುವುದು ಕಂಡುಬರುತ್ತದೆ. ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಫಂಡ್ ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ಬುಧವಾರ 0.3% ಇಳಿದು, 1169.17 ಟನ್ ತಲುಪಿತು. ಈ ಮಧ್ಯೆ ಜಾಗತಿಕ ಷೇರು ಮಾರುಕಟ್ಟೆಗಳು ಸಾರ್ವಕಾಲಿಕ ದಾಖಲೆ ಎತ್ತರವನ್ನು ತಲುಪಿದ ನಂತರ ಇಳಿಕೆ ಕಾಣುತ್ತಿವೆ. ಅವುಗಳ ಮೌಲ್ಯಮಾಪನದ ಬಗೆಗಿನ ಅತಂಕ ಇಂಥ ಸನ್ನಿವೇಶ ಸೃಷ್ಟಿಸಿದೆ.

ಯು.ಎಸ್. ನಾಲ್ಕನೇ ಜಿಡಿಪಿ ದತ್ತಾಂಶ ಬಿಡುಗಡೆ
 

ಯು.ಎಸ್. ನಾಲ್ಕನೇ ಜಿಡಿಪಿ ದತ್ತಾಂಶ ಬಿಡುಗಡೆ

ಚಿನ್ನದ ವರ್ತಕರು ಯು.ಎಸ್.ನ ನಾಲ್ಕನೇ ಜಿಡಿಪಿ, ಉದ್ಯೋಗ ನಷ್ಟ ಮತ್ತು ಮನೆ ಮಾರಾಟದ ಸಂಖ್ಯೆಯನ್ನು ಎದುರು ನೋಡುತ್ತಿದ್ದಾರೆ. ಈ ದಿನದ ಕೊನೆಗೆ ವರದಿ ಬಿಡುಗಡೆ ಆಗಲಿದೆ. "ವೈರಸ್ ಸಂಬಂಧಿತ ಬೆಳವಣಿಗೆಯನ್ನು ಹೊರತುಪಡಿಸಿದಂತೆ ಮಾರ್ಕೆಟ್ ಭಾವನೆಗಳಿಗೆ ಹೊಡೆತ ನೀಡುತ್ತಿರುವುದು ಪ್ರಮುಖ ಆರ್ಥಿಕ ವ್ಯವಸ್ಥೆಯ ಆರ್ಥಿಕತೆ ದತ್ತಾಂಶಗಳು ಮತ್ತು ಯು.ಎಸ್. ಆರ್ಥಿಕ ಉತ್ತೇಜನದ ಅನಿಶ್ಚಿತತೆ. ಏಕೆಂದರೆ, ಹೆಚ್ಚುವರಿ ಉತ್ತೇಜನ ಪ್ಯಾಕೇಜ್ ಮಾರುಕಟ್ಟೆಗಳ ಸಮಯ ಹಾಗೂ ವಾಸ್ತವ ಗಾತ್ರಕ್ಕಿಂತ ಬೇರೆ ಆಗಲಿದೆ," ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ.

ದಶಕದಲ್ಲೇ ಚಿನ್ನದ ಅತಿ ಕೆಟ್ಟ ಪ್ರದರ್ಶನ

ದಶಕದಲ್ಲೇ ಚಿನ್ನದ ಅತಿ ಕೆಟ್ಟ ಪ್ರದರ್ಶನ

ಜಾಗತಿಕ ಮಾರುಕಟ್ಟೆಯಲ್ಲಿ ಈ ತಿಂಗಳು ಇಲ್ಲಿಯ ತನಕ ಚಿನ್ನದ ಬೆಲೆಯಲ್ಲಿ 3% ಇಳಿಕೆ ಆಗಿದೆ. 2011ರಿಂದ ಈಚೆಗೆ ಜನವರಿ ತಿಂಗಳಲ್ಲಿ ಕಂಡುಬಂದ ಚಿನ್ನದ ಬೆಲೆಯ ಅತಿ ಕೆಟ್ಟ ಪ್ರದರ್ಶನ ಇದು. ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಚಿನ್ನದ ದರದ ಈ ರೀತಿ ಪ್ರದರ್ಶನ ಮುಂದುವರಿಯಬಹುದು. ಮುಂದಿನ ಕೆಲವು ವಾರಗಳ ಕಾಲ $ 1800ರ ಹಂತವನ್ನು ಹಿಡಿದಿಟ್ಟುಕೊಂಡಲ್ಲಿ ಹೂಡಿಕೆದಾರರು ಆಸಕ್ತಿ ಇಟ್ಟುಕೊಂಡಿರುತ್ತಾರೆ.

English summary

Gold Price Fall Straight 5th Day; Now Down Rs 7500 From All Time High

Gold price fall straight 5th day on January 28, 2021. By this Rs 7500 down from all time high.
Story first published: Thursday, January 28, 2021, 10:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X