ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ವಾರದ ಮೊದಲ ದಿನವೇ ಬಂಗಾರ ಇಳಿಕೆ ಕಂಡಿದೆ. ಹೌದು, ಚಿನ್ನ ಮಾರುಕಟ್ಟೆ ನಾರಿಯರಿಗೆ ಸಿಹಿ ಸುದ್ದಿ ಕೊಟ್ಟಿದ್ದು, ಚಿನ್ನಾಭರಣ ಖರೀದಿದಾರರಿಗೆ ಕೊಂಚ ಸಮಾಧಾನ ತಂದಿದೆ.ಆದರೆ ಬೆಳ್ಳಿಯ ಬೆಲೆ ಸಹ ಇಂದು ಯಾವುದೇ ಬದಲಾವಣೆ ಕಂಡಿಲ್ಲ. ಬೆಂಗಳೂರಿನಲ್ಲಿ ಬಹು ದಿನಗಳಿಂದ ಆಭರಣ ಖರೀದಿಗಾಗಿ ಕಾಯುತ್ತಿದ್ದವರಿಗೆ ಚಿನ್ನದ ಇಳಿಕೆ ಅವರ ಖುಷಿ ದುಪ್ಪಟ್ಟಾಗಿದೆ. ಹಾಗಿದ್ರೆ ಬೆಂಗಳೂರಿನಲ್ಲಿ ಸೋಮವಾರದಂದು (ಫೆ.03) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಬೆಂಗಳೂರಿನಲ್ಲಿ ಬಂಗಾರದ ಮಾರುಟ್ಟೆಯಲ್ಲಿ ಇಂದು ಇಳಿಕೆ ಕಂಡಿದೆ.ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 77,050 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 84,050 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಚಿನ್ನದಲ್ಲಿ ಇಂದು ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ದರ ಇಂದು ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,705 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,405 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 77,050 ರೂ.ಗಳು ವ್ಯಾಪಾರವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 84,050 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.
ಇನ್ನೂ 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,70,500 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,40,500 ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 4,400 ರೂ.ಗಳ ಇಳಿಕೆ ಕಂಡಿದೆ.18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 63,040 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಿಲ್ಲ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 99,500 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 99.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 995 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,950 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಇದು ಸ್ಥಿರವಾಗಿ ಇದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಗೋಲ್ಡ್ ರೇಟ್ ಏಪ್ರಿಲ್ 4, 2025 ರಂದು ಪಕ್ವವಾಗಲಿರುವ ಚಿನ್ನದ ಫ್ಯೂಚರ್‌ಗಳು ಸಹ ಕುಸಿತವನ್ನು ಅನುಭವಿಸಿ, ಶೇ.0.05 ಕುಸಿತದ ನಂತರ 82,262ಕ್ಕೆ ವಹಿವಾಟು ನಡೆಸಿದವು. ಅದೇ ರೀತಿ, ಮಾರ್ಚ್ 5, 2025 ರ ಮುಕ್ತಾಯ ದಿನಾಂಕದೊಂದಿಗೆ ಬೆಳ್ಳಿ ಫ್ಯೂಚರ್‌ಗಳು ವಹಿವಾಟಿನ ಅವಧಿಯಲ್ಲಿ ಕುಸಿತ ಕಂಡಿವೆ. ಬೆಲೆಗಳು ಶೇ.0.43ರಷ್ಟು ಕುಸಿತ 92,817 ಕ್ಕೆ ತಲುಪಿದವು.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ಪ್ರಕಾರ ಸ್ಪಾಟ್ ಚಿನ್ನವು 0303 GMT ವೇಳೆಗೆ ಪ್ರತಿ ಔನ್ಸ್‌ಗೆ ಶೇ.0.9ರಷ್ಟು ಕುಸಿದು $2,776.05 ಕ್ಕೆ ತಲುಪಿದೆ. ಶುಕ್ರವಾರ ತಲುಪಿದ ದಾಖಲೆಯ ಗರಿಷ್ಠ $2,817.23 ರಿಂದ ಹಿಮ್ಮೆಟ್ಟಿದೆ. ಜಾಗತಿಕ ಅನಿಶ್ಚಿತತೆ ಮತ್ತು ಹೂಡಿಕೆದಾರರ ಸುರಕ್ಷಿತ ಸ್ವತ್ತುಗಳ ಬೇಡಿಕೆಯಿಂದಾಗಿ ಈ ತೀವ್ರ ಕುಸಿತ ಕಂಡುಬಂದಿದೆ.
ಯುಎಸ್ ಚಿನ್ನದ ಬೆಲೆಗಳು ಶೇ.0.9 ರಷ್ಟು ಕುಸಿದು $2,810.80 ಕ್ಕೆ ವಹಿವಾಟು ನಡೆಸುತ್ತಿದೆ.ಇತ್ತೀಚಿನ ಏರಿಕೆಯ ಹೊರತಾಗಿಯೂ, ಕಳೆದ ವಾರದ ರ್ಯಾಲಿಯ ನಂತರ ಕೆಲವು ಹೂಡಿಕೆದಾರರು ಲಾಭವನ್ನು ಮಾಡುವುದರಿಂದ ಚಿನ್ನದ ಬೆಲೆಗಳು ಕೆಳಮುಖ ಒತ್ತಡವನ್ನು ಎದುರಿಸಿವೆ. ಅದೇ ರೀತಿ, ಸ್ಪಾಟ್ ಬೆಳ್ಳಿಯು ಕುಸಿತವನ್ನು ಕಂಡಿದ್ದು, ಪ್ರತಿ ಔನ್ಸ್‌ಗೆ ಶೇ.1.4ರಷ್ಟು ಕುಸಿದು $30.87 ಕ್ಕೆ ತಲುಪಿದೆ.
ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ಕ್ರಮ ಸಂಖ್ಯೆ | ನಗರಗಳು | 22 ಕ್ಯಾರೆಟ್ | 24 ಕ್ಯಾರೆಟ್ |
| 1 | ಬೆಂಗಳೂರು | ರೂ.7,705 | ರೂ.8,405 |
| 2 | ಚೆನ್ನೈ | ರೂ.7,705 | ರೂ.8,405 |
| 3 | ಮುಂಬೈ | ರೂ.7,705 | ರೂ.8,405 |
| 4 | ದೆಹಲಿ | ರೂ.7,720 | ರೂ.8,420 |
| 5 | ಕೋಲ್ಕತ್ತಾ | ರೂ.7,705 | ರೂ.8,405 |
| 6 | ಪುಣೆ | ರೂ.7,705 | ರೂ.8,405 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 9,950 ರೂ
ಚೆನ್ನೈ: 10,700 ರೂ
ಮುಂಬೈ: 9,950 ರೂ
ದೆಹಲಿ: 9,950 ರೂ
ಕೋಲ್ಕತಾ: 9,950 ರೂ
ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಆಭರಣ ಪ್ರಿಯರಿಗೆ ಈ ದಿನ ಚಿನ್ನ ಖರೀದಿಗೆ ಉತ್ತಮ ಅವಕಾಶ ಎಂದೇ ಹೇಳಬಹುದು.


Click it and Unblock the Notifications