ಕಳೆದ ಮೂರು ದಿನದಿಂದ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಈಗ ದಿಢೀರನೆ ಏರಿಕೆಯಾಗಿದೆ. ಈ ಮೂಲಕ ಮತ್ತೆ ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆ ಶಾಕ್ ಕೊಟ್ಟಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡುವವರ ಖುಷಿಗೆ ತಣ್ಣೀರು ಎರೆಚಿದಂತಾಗಿದೆ. ಹಾಗಿದ್ರೆ, ಪ್ರಸ್ತುತ ಬೆಂಗಳೂರಲ್ಲಿ ಚಿನ್ನದ ಬೆಲೆ (Gold Price) ಎಷ್ಟಿದೆ? ಬೆಳ್ಳಿ ದರ ಎಷ್ಟು? ಎನ್ನುವುದನ್ನು ತಿಳಿಯೋಣ ಬನ್ನಿ.
ಹೌದು, ಅಮೆರಿಕದ ಫೆಡ್ ರಿಸರ್ವ್ ಸತತ ಮೂರನೇ ಬಾರಿಗೆ ಬಡ್ಡಿ ದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ, ಇದೀಗ ಮತ್ತೆ ಬಂಗಾರದ ಬೆಲೆಯ ಜೊತೆಗೆ ಬೆಳ್ಳಿಯ ಬೆಳ್ಳಿ ಕೂಡ ಏರಿಕೆಯಾಗಿದೆ. ಬೆಂಗಳೂರಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 600 ರೂಪಾಯಿ ಏರಿಕೆಯಾಗಿದ್ದು, 71,000 ರೂ.ನಂತೆ ವಹಿವಾಟು ನಡೆಸುತ್ತಿದೆ. ಇದಲ್ಲದೆ, 2 ಕ್ಯಾರಟ್ ಚಿನ್ನದ ಬೆಲೆ 650 ರೂ. ಏರಿಕೆಯಾಗಿದ್ದು, 77,450 ರೂ.ನಂತೆ ವಹಿವಾಟು ನಡೆಸುತ್ತಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ 1 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 7100 ರೂಪಾಯಿ ಇದೆ. ಇನ್ನೂ ಒಂದು ಗ್ರಾಮ್ ಅಪರಂಜಿ ಚಿನ್ನ 24 ಕ್ಯಾರೆಟ್ಗೆ 7,745 ರೂಪಾಯಿಗಳು ವಹಿವಾಟು ಇದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನಕ್ಕೆ 5,809 ರೂ.. ಇದೆ. 10 ಗ್ರಾಂನ 22 ಕ್ಯಾರೆಟ್ ಚಿನ್ನಕ್ಕೆ ಪ್ರಸ್ತುತ 71 ಸಾವಿರ ರೂ. ಇದ್ದು, ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ 600 ರೂ.ಗಳಷ್ಟು ಏರಿಕೆಯಾಗಿದೆ. ನಿನ್ನೆ 100 ಗ್ರಾಂನ 22 ಕ್ಯಾರೆಟ್ ಚಿನ್ನ 7,04,000 ಇದ್ದು, ಪ್ರಸ್ತುತ 7,10,000 ರೂ. ಇದೆ. 6 ಸಾವಿರ ರೂಪಾಯಿಗಳಷ್ಟು ಏರಿಕೆ ಕಂಡಿವೆ.
24 ಕ್ಯಾರೆಟ್ ಚಿನ್ನ
1 ಗ್ರಾಂನ 24 ಕ್ಯಾರೆಟ್ ಚಿನ್ನಕ್ಕೆ ಇಂದು 7,745 ರೂಪಾಯಿ ಇದೆ. ನಿನ್ನೆ ಇದೇ ಚಿನ್ನದ ವಹಿವಾಟು 7,680 ರೂ. ಆದರೆ, ನಿನ್ನೆಗೆ ಹೋಲಿಕೆ ಮಾಡಿದ್ದರೆ ಇಂದು 65 ರೂ.ಗಳಷ್ಟು ಏರಿಕೆ ಕಂಡಿದೆ. 10 ಗ್ರಾಂನ 24 ಕ್ಯಾರೆಟ್ ಗೋಲ್ಡ್ ರೇಟ್ 77,450 ರೂ. ಇದೆ. ಅದೇ ಚಿನ್ನ 100 ಗ್ರಾಂಗೆ 7,74,500 ರೂಪಾಯಿಯ ವಹಿವಾಟುವನ್ನು ನಡೆಸುತ್ತಿದೆ.
ಬೆಳ್ಳಿ ಬೆಲೆ ಸಾವಿರ ರೂ. ಏರಿಕೆ
ಚಿನ್ನದ ಬೆಲೆಯೊಂದಿಗೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಇಂದು ಶನಿವಾರ ಬೆಂಗಳೂರಲ್ಲಿ ಪ್ರತಿ 1 ಕೆಜಿ ಬೆಳ್ಳಿ ಬೆಲೆಯಲ್ಲಿ 1000 ರೂ. ಏರಿಕೆಯಾಗಿದ್ದು, 91500 ರಲ್ಲಿ ವಹಿವಾಟು ನಡೆಸುತ್ತಿದೆ. ಒಂದು ಗ್ರಾಂ ಬೆಳ್ಳಿಯ ಬೆಲೆ 91.50 ರೂ. ಇದೆ.
MCX ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಫೆಬ್ರವರಿ 2025 ರ ಮುಕ್ತಾಯದೊಂದಿಗೆ MCX ಚಿನ್ನದ ಬೆಲೆ ಡಿಸೆಂಬರ್ 20 ರ ವಹಿವಾಟಿನ ಅಂತ್ಯದ ವೇಳೆಗೆ 10 ಗ್ರಾಂಗೆ 76,432 ರೂ.ಗಳಷ್ಟು ಏರಿಕೆಯಗಿದೆ. MCX ಬೆಳ್ಳಿ ಮಾರ್ಚ್ 2025 ರ ಮುಕ್ತಾಯದೊಂದಿಗೆ 1 ಕೆಜಿಗೆ 88,443 ರೂ. ನಿನ್ನೆ ಬೆಲೆಗಳು ಸ್ವಲ್ಪಮಟ್ಟಿಗೆ ಏರಿಕೆಯಾಗಿವೆ.
ಸ್ಪಾಟ್ ಚಿನ್ನದ ಬೆಲೆಗಳು
ಟ್ರೇಡಿಂಗ್ ಎಕನಾಮಿಕ್ಸ್‌ನ ಪ್ರಕಾರ, ಶುಕ್ರವಾರದಂದು ಪ್ರತಿ ಔನ್ಸ್‌ಗೆ ಸುಮಾರು $2,600 ಡಾಲರ್‌ಗೆ ವಹಿವಾಟು ನಡೆಸಿತ್ತು. ಬುಧವಾರ, ಫೆಡ್ ನಲ್ಲಿ ಬಡ್ಡಿ ಕಡಿಮೆಯ ನಂತರ ಇಳಿಕೆಯಲ್ಲಿ ಇದ್ದ ಚಿನ್ನದ ಬೆಲೆ ಇಂದು ಏರಿಕೆ ಕಂಡಿದೆ. ಡಾಟ್ ಪ್ಲಾಟ್ ಪ್ರಕ್ಷೇಪಗಳು ಮುಂದಿನ ವರ್ಷ ಕೇವಲ ಎರಡು ದರ ಕಡಿತಗಳನ್ನು ಸೂಚಿಸುತ್ತವೆ. ಇತ್ತೀಚಿನ US GDP ದತ್ತಾಂಶವು ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನು ಎತ್ತಿ ತೋರಿಸಿದೆ ಮತ್ತು ಗ್ರಾಹಕರ ವೆಚ್ಚವನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ.


Click it and Unblock the Notifications