Gold Price: ಎಂಸಿಎಕ್ಸ್ ಚಿನ್ನದ ದರ ಸಾರ್ವಕಾಲಿಕ ಏರಿಕೆ, ಜಾಗತಿಕ ಮಾರುಕಟ್ಟೆ ಬೆಲೆ ಇನ್ನಷ್ಟು ಏರಬಹುದೇ?

ಜಾಗತಿಕ ಮಾರುಕಟ್ಟೆಯಲ್ಲಿ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) 10 ಗ್ರಾಂ ಚಿನ್ನದ ಬೆಲೆಯು ಸಾರ್ವಕಾಲಿಕ ಏರಿಕೆ ಕಂಡಿದ್ದು, 61,145 ರೂಪಾಯಿಗೆ ತಲುಪಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು 13ನೇ ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಇನ್ನೊಂದೆಡೆ ಬೆಳ್ಳಿ ದರವು ಕೂಡಾ ಏರಿಕೆ ಕಂಡಿದೆ. ಬೆಳ್ಳಿ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 12 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದರೆ, ಎಂಸಿಎಕ್ಸ್‌ನಲ್ಲಿ 22 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಮಾರುಕಟ್ಟೆ ತಜ್ಞರ ಪ್ರಕಾರ ಮಾರುಕಟ್ಟೆಯಲ್ಲಿ ಚಿನ್ನದ ದರ ಹಾಗೂ ಬೆಳ್ಳಿ ದರ ಏರಿಕೆಯಾಗಲು ಪ್ರಮುಖವಾಗಿ 5 ಬೆಳವಣಿಗೆಗಳು ಕಾರಣವಾಗಿದೆ. ಯುಎಸ್ ಡಾಲರ್ ಮೌಲ್ಯ ಕುಸಿತ ಕಂಡಿರುವುದು, ಕೆಟ್ಟದಾದ ಯುಎಸ್‌ ಡೇಟಾ, ಯುಎಸ್‌ನ ಫೆಡರಲ್ ದರ ಏರಿಕೆ, ಆರ್ಥಿಕ ಅನಿಶ್ಚಿತತೆ ಮತ್ತು ಕಚ್ಚಾ ತೈಲ ದರ ಏರಿಕೆಯು ಪ್ರಮುಖವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

 ಚಿನ್ನದ ದರ ಸಾರ್ವಕಾಲಿಕ ಏರಿಕೆ, ಎಂಸಿಎಕ್ಸ್ ಬೆಲೆ ಮತ್ತೆ ಏರಬಹುದೇ?

ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರವು ಏರಿಕೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು 59,500 ರೂಪಾಯಿ ಆಸುಪಾಸಿನಲ್ಲಿ ದರವಿದ್ದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹವು 2,010 ಡಾಲರ್ ಅಂದಾಜಿನಲ್ಲಿದೆ. ಇನ್ನು ಬೆಳ್ಳಿ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 23 ಡಾಲರ್ ಆಗಿದ್ದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬಿಳಿ ಲೋಹದ ದರವು 70,000 ರೂಪಾಯಿಗೆ ತಲುಪಿದೆ.

ಇಂದು ಚಿನ್ನದ ಹಾಗೂ ಬೆಳ್ಳಿ ದರ ಯಾಕೆ ಏರಿಕೆಯಾಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಐಐಎಫ್‌ಎಲ್‌ನ ಉಪಾಧ್ಯಕ್ಷ ಅನುಜ್ ಗುಪ್ತಾ, "ಪ್ರಮುಖವಾಗಿ 5 ಕಾರಣಗಳಿಂದಾಗಿ ಇಂದು ಚಿನ್ನ ಹಾಗೂ ಬೆಳ್ಳಿ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಯುಎಸ್ ಡಾಲರ್ ಮೌಲ್ಯ ಕುಸಿತ ಕಂಡಿರುವುದು, ಕೆಟ್ಟದಾದ ಯುಎಸ್‌ ಡೇಟಾ, ಯುಎಸ್‌ನ ಫೆಡರಲ್ ದರ ನಿರಂತರ ಏರಿಕೆ, ಆರ್ಥಿಕ ಹಿಂಜರಿತದ ಆತಂಕ ಮತ್ತು ಕಚ್ಚಾ ತೈಲ ದರ ಏರಿಕೆ ಇದಕ್ಕೆ ಕಾರಣವಾಗಿದೆ," ಎಂದು ತಿಳಿಸಿದ್ದಾರೆ.

ಚಿನ್ನದ ದರ ಇನ್ನಷ್ಟು ಏರಿಕೆಯಾಗಬಹುದೇ?

ಚಿನ್ನದ ದರ ಇನ್ನಷ್ಟು ಏರಿಕೆಯಾಗಲಿದೆಯೇ ಎಂಬುವುದು ಈಗ ನಮ್ಮ ಮುಂದೆ ಇರುವ ಪ್ರಶ್ನೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಜ್ಞೆ ಸುಗಂಧಾ ಸಚ್‌ದೇವಾ, "ಈ ಹಿಂದೆ, ಪ್ರತಿ 10 ಗ್ರಾಂ ಚಿನ್ನದ ಬೆಲೆಯು 60,200 ರೂಪಾಯಿ ಆಗಿತ್ತು. ಆದರೆ ಸ್ವಲ್ಪ ಸಮಯದಲ್ಲೇ 10 ಗ್ರಾಂಗೆ 61,700 ರೂಪಾಯಿ ಆಗಿದೆ. ಬೆಳವಣಿಗೆಯನ್ನು ಗಮನಿಸಿದಾಗ ಚಿನ್ನದ ಬೆಲೆ ಇನಷ್ಟು ಏರಿಕೆಯಾಗಬಹುದು. ಬೆಳ್ಳಿ ದರವು ಕೂಡಾ ಭಾರೀ ಏರಿಕೆಯಾಗಿದೆ. ಪ್ರತಿ ಕೆಜಿಗೆ ಸುಮಾರು 76,200 ರೂಪಾಯಿಗೆ ತಲುಪುವಂತೆ ಕಾಣುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 85,000-88,000 ರೂಪಾಯಿ ಆಗಬಹುದು," ಎಂದು ಅಭಿಪ್ರಾಯಿಸಿದ್ದಾರೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?

10 ದಿನದಲ್ಲಿ 4 ದಿನ ಚಿನ್ನದ ಬೆಲೆಯು ಏರಿಕೆಯಾಗಿದೆ. ಏಪ್ರಿಲ್ 5ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 950 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 56,250 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 1030 ರೂಪಾಯಿ ಹಿಗ್ಗಿದ್ದು ಪ್ರಸ್ತುತ 61,360 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 2490 ರೂಪಾಯಿ ಹಿಗ್ಗಿದ್ದು ಪ್ರಸ್ತುತ 77,090 ರೂಪಾಯಿ ಆಗಿದೆ.

10 ಗ್ರಾಂ ಲೆಕ್ಕಾಚಾರದಲ್ಲಿ

ಬೆಂಗಳೂರು
22 ಕ್ಯಾರೆಟ್ ಚಿನ್ನ: 56,300 ರೂಪಾಯಿ (+950 ರೂಪಾಯಿ)
24 ಕ್ಯಾರೆಟ್ ಚಿನ್ನ: 61,410 ರೂಪಾಯಿ (+1030 ರೂಪಾಯಿ)

ಮುಂಬೈ
22 ಕ್ಯಾರೆಟ್ ಚಿನ್ನ: 56,250 ರೂಪಾಯಿ (+950 ರೂಪಾಯಿ)
24 ಕ್ಯಾರೆಟ್ ಚಿನ್ನ: 61,360 ರೂಪಾಯಿ (+1030 ರೂಪಾಯಿ)

ದೆಹಲಿ
22 ಕ್ಯಾರೆಟ್ ಚಿನ್ನ: 56,400 ರೂಪಾಯಿ (+950 ರೂಪಾಯಿ)
24 ಕ್ಯಾರೆಟ್ ಚಿನ್ನ: 61,510 ರೂಪಾಯಿ (+1030 ರೂಪಾಯಿ)

ಕೇರಳ
22 ಕ್ಯಾರೆಟ್ ಚಿನ್ನ: 56,250 ರೂಪಾಯಿ (+950 ರೂಪಾಯಿ)
24 ಕ್ಯಾರೆಟ್ ಚಿನ್ನ: 61,360 ರೂಪಾಯಿ (+1030 ರೂಪಾಯಿ)

ಮಂಗಳೂರು
22 ಕ್ಯಾರೆಟ್ ಚಿನ್ನ: 56,300 ರೂಪಾಯಿ (+950 ರೂಪಾಯಿ)
24 ಕ್ಯಾರೆಟ್ ಚಿನ್ನ: 61,410 ರೂಪಾಯಿ (+1030 ರೂಪಾಯಿ)

ಮೈಸೂರು
22 ಕ್ಯಾರೆಟ್ ಚಿನ್ನ: 56,300 ರೂಪಾಯಿ (+950 ರೂಪಾಯಿ)
24 ಕ್ಯಾರೆಟ್ ಚಿನ್ನ: 61,410 ರೂಪಾಯಿ (+1030 ರೂಪಾಯಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+