ಬೆಂಗಳೂರಿನಲ್ಲಿ ಚಿನ್ನದ ದರ, ಡಿಸೆಂಬರ್‌-28: 22/100 ಗ್ರಾಂ ಚಿನ್ನದ ಬೆಲೆ 1,500ರೂ. ಇಳಿಕೆ.

ಡಿಸೆಂಬರ್‌ 28ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಕೆಲ ಎರಡು ದಿನಗಳಿಂದ ಏರಿಕೆಯಾಗ್ತಿದ್ದ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಆಭರಣಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಬಹುದಿನಗಳಿಂದ ಏರಿಳಿತಗಳನ್ನ ನಡೆಸುತ್ತಿದ್ದ ಚಿನ್ನ ಇಂದು ಮತ್ತೆ ಇಳಿಕೆಯಾಗಿದೆ.

ಯುಎಸ್‌ ಡಾಲರ್‌ ದುರ್ಬಲತೆಯಿಂದ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಬೌಗೋಳಿಕ ಹಾಗು ರಾಜಕೀಯ ಉದ್ವಿಗ್ನತೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿವೆ. ರಷ್ಯ ಉಕ್ರೇನ್‌ನ ಯುದ್ದ ಹಿನ್ನೆಲೆ ಜಾಗತಿಕ ಉದ್ವಿಗ್ನತೆಗಳಿಂದಾಗಿ ಚಿನವನದ ಬೆಲೆಯಲ್ಲಿ ಏರಿಳಿತಗಳನ್ನ ಕಾಣುವಂತಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚಿದ ಬೇಡಿಕೆಯನ್ನು ನಾವು ಕಾಣಬಹುದು. ಇನ್ನು 2025 ರ ವೇಳೆಗೆ ಫೆಡರಲ್‌ ರಿಸರ್ವ್‌ನಿಂದ ಹಣಕಾಸು ನೀತಿ ಮುನ್ಸೂಚನೆಯ ಬಗ್ಗೆ ನಿಖರವಾದ ಸಂಕೇತಗಳನ್ನ ನಿರೀಕ್ಷಿಸಲಾಗಿದೆ. ಇದು ಸ್ಪಾಟ್‌ ಚಿನ್ನದ ಮೇಲೂ ಕೂಡ ಪರಿಣಾಮವನ್ನ ಬೀರಿದೆ. ಗುರುವಾರ ರಜಾದಿನವಾದ್ರಿಂದ ಚಿನ್ನದ ಮಾರುಕಟ್ಟೆಗಳು ಮುಚ್ಚಿರುತ್ತವೆ.

ಬೆಂಗಳೂರಿನಲ್ಲಿ ಮತ್ತೆ ಚಿನ್ನದ ಬೆಲೆ ಇಳಿಕೆ!

ಬೆಂಗಳೂರಿನಲ್ಲಿ ಚಿನ್ನದ ದರಗಳು

ಡಿಸೆಂಬರ್‌ 28 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 150 ರೂ. ಇಳಿಕೆಯಾಗಿ 71,350ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 160ರೂ. ಇಳಿಕೆಯಾಗಿ 77,840ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 120 ರೂ. ಇಳಿಕೆಯಾಗಿ 58,380ರೂ. ಆಗಿದೆ.

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,600ರೂ. ಇಳಿಕೆಯಾಗಿ 7,15,000ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,700 ರೂ. ಇಳಿಕೆಯಾಗಿ 7,80,000 ರೂ. ಆಗಿದೆ.
18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,200 ಇಳಿಕೆಯಾಗಿ 5,83,800 ರೂ. ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರಗಳು

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 10ರೂ. ಇಳಿಕೆಯಾಗಿ 9,240 ರೂ ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ100 ರೂ. ಇಳಿಕೆಯಾಗಿ 92,400ರೂ. ಇದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದೆ

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24ಕ್ಯಾರೆಟ್‌ 22ಕ್ಯಾರೆಟ್‌

ನಗರಗಳು 24 ಕ್ಯಾರೆಟ್22 ಕ್ಯಾರೆಟ್
​ದೆಹಲಿ77,990​71,500
​ಮುಂಬೈ77,84071,350
ಚೆನ್ನೈ ​77,84071,350
​ಕೋಲ್ಕತ್ತಾ77,84071,350

ಮನಮೋಹನ್ ಸಿಂಗ್ ಆರ್ಥಿಕ ಮಂತ್ರಿಯಾಗಿದ್ದೇಗೆ? ಆಧುನಿಕ ಕೌಟಿಲ್ಯನ ಕ್ರಾಂತಿಕಾರಕ ಯೋಜನೆಗಳ ಬಗ್ಗೆ ಗೊತ್ತಾ?

MCX ಗೋಲ್ಡ್ ಔಟ್‌ಲುಕ್

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.01%ನಷ್ಟು ಇಳಿಕೆಯಾಗುವ ಮೂಲಕ 10 ಗ್ರಾಂಗೆ 77,322 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.01%ರಷ್ಟು ಕಡಿಮೆಯಾಗಿ, 88,882.ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.

ಸ್ಪಾಟ್‌ ಚಿನ್ನದ ಭವಿಷ್ಯ

ಸ್ಪಾಟ್‌ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್‌ ಡಾಲರ್‌ ಏರಿಕೆಯಿಂದಾಗಿ ಇದು ಸ್ಪಾಟ್‌ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ರಾಯಿಟರ್ಸ್‌ ವರದಿ ಪ್ರಕಾರ 1:41 pm ET (1841 GMT) ಯಲ್ಲಿ ಸ್ಪಾಟ್‌ ಚಿನ್ನ 0.6% ನಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 2,635.29 ಡಾಲರ್‌ ತಲುಪಲಿದೆ. ಯುಎಸ್‌ ಚಿನ್ನದ ಭವಿಷ್ಯವು 0.7%ನಷ್ಟು ಇಳಿಕೆಯಾಗಿ 2,619.33 ನಲ್ಲಿ ನೆಲೆಸಿದೆ. ಬುಲಿಯನ್‌ ಈ ವಾರ 0.1% ಕಡಿಮೆಯಾಗಿದೆ. ಇತ್ತ ಸ್ಪಾಟ್ ಬೆಳ್ಳಿ ಬದಲಾಗದೆ ಪ್ರತಿ ಔನ್ಸ್‌ಗೆ 29.6 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ US ಚಿನ್ನದ ಭವಿಷ್ಯವು 0.8% ಕಡಿಮೆ $2,631.90 ಕ್ಕೆ ಸ್ಥಿರವಾಯಿತು. ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ. ಸ್ಪಾಟ್ ಬೆಳ್ಳಿ ಬೆಲೆ ಪ್ರತಿ ಔನ್ಸ್‌ಗೆ 1.3% ಇಳಿಕೆಯಾಗಿ 29.41 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಂ 2.1% ಇಳಿಕೆಯಾಗಿ 916.30 ಡಾಲರ್‌ ತುಪಿದೆ. ಪಲ್ಲಾಡಿಯಮ್ 1.2% ಗೆ ತಲುಪಿ 913.71 ಡಾಲರ್‌ ಆಗಿದೆ.

ಹೂಡಿಕೆದಾರರು 2025 ರ ಫೆಡರಲ್ ರಿಸರ್ವ್‌ನ ದರ ಕಾರ್ಯತಂತ್ರ ಹಾಗೆ ಸುಂಕದ ನೀತಿಗಳ ಬಗ್ಗೆ ನಿರೀಕ್ಷೆ ಮಾುತ್ತಿದ್ದಾರೆ. ಇನ್ನು ಇಂದು ಚಿನ್ನದ ಬೆಲೆಗಳು ರಜೆದಿನಗಳು ಇರುವುದರಿಂದ ಹೆಚ್ಚಿನ ವಹಿವಾಟನ್ನ ನಿರೀಕ್ಷಿಸಲಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಯುಎಸ್ ಡಾಲರ್‌ನಲ್ಲಿ ಸ್ವಲ್ಪ ಕುಸಿತ ಕಾಣುವಂತಾಗಿದೆ ಎಂದು ಏಂಜೆಲ್ ಒನ್ ಸಂಶೋಧನಾ ತಂಡ ತಿಳಿಸಿದೆ. ಅಂತರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸ್ವಲ್ಪ ಮಟ್ಟಿಗೆ ಅಧಿಕ ವಹಿವಾಟುಗಳನ್ನ ನಡೆಸುತ್ತಿವೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಎರಡೂ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂಬ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+