ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರ ದರ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಚಿನ್ನ ಖರೀದಿ ಮಾಡಬೇಕೆಂದುಕೊಂಡವರೆಗೆ ನಿರಾಸೆಯಾಗಿದೆ.ಇನ್ನೂ ಬೆಳ್ಳಿ ಸಹ ಏರಿಕೆ ಕಂಡಿದೆ. ಹಾಗಿದ್ರೆ ಶನಿವಾರ (ಫೆ.22) ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ? ಬೆಳ್ಳಿಯ ಬೆಲೆ ಎಷ್ಟಿದೆ ಇಲ್ಲಿದೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...
ಹೌದು, ಬೆಂಗಳೂರಿನಲ್ಲಿ ಬಂಗಾರದ ಮಾರುಟ್ಟೆಯಲ್ಲಿ ಇಂದು ಏರಿಕೆ ಕಂಡಿದೆ.ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 80,450 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 87,770 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಚಿನ್ನದಲ್ಲಿ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,045 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,777 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 80,450 ರೂ.ಗಳು ವ್ಯಾಪಾರವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 87,770 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 8,77,700 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 6,58,200 ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 2,200 ರೂ.ಗಳ ಏರಿಕೆ ಕಂಡಿದೆ.18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 65,820 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಿಲ್ಲ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ1,00,500 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ100.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 1,005 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 10,050 ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಗೋಲ್ಡ್ ರೇಟ್ ಏಪ್ರಿಲ್ 4, 2025 ರಂದು ಪಕ್ವವಾಗಲಿರುವ ಚಿನ್ನದ ಫ್ಯೂಚರ್‌ಗಳು ಸಹ ಕುಸಿತವನ್ನು ಅನುಭವಿಸಿ, ಶೇ.0.05 ಕುಸಿತದ ನಂತರ 82,262ಕ್ಕೆ ವಹಿವಾಟು ನಡೆಸಿದವು. ಅದೇ ರೀತಿ, ಮಾರ್ಚ್ 5, 2025 ರ ಮುಕ್ತಾಯ ದಿನಾಂಕದೊಂದಿಗೆ ಬೆಳ್ಳಿ ಫ್ಯೂಚರ್‌ಗಳು ವಹಿವಾಟಿನ ಅವಧಿಯಲ್ಲಿ ಕುಸಿತ ಕಂಡಿವೆ. ಬೆಲೆಗಳು ಶೇ.0.43ರಷ್ಟು ಕುಸಿತ 92,817 ಕ್ಕೆ ತಲುಪಿದವು.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ಪ್ರಕಾರ, ಯುಎಸ್ ಚಿನ್ನದ ಫ್ಯೂಚರ್‌ಗಳು ದಿನದ ಅಂತ್ಯದಲ್ಲಿ ಶೇ.0.1 ಇಳಿಕೆಯಾಗಿ $2,953.20 ಕ್ಕೆ ತಲುಪಿದ್ದರೆ ಸ್ಪಾಟ್ ಚಿನ್ನವು ಗುರುವಾರ ದಾಖಲೆಯ $2,954.69 ಕ್ಕೆ ತಲುಪಿದ ನಂತರ ಶುಕ್ರವಾರ ಬೆಳಿಗ್ಗೆ 02:24 ET (1924 GMT) ರಂತೆ ಔನ್ಸ್‌ಗೆ ಶೇ.0.1 ಇಳಿಕೆಯಾಗಿ $2,939.63 ಕ್ಕೆ ತಲುಪಿದೆ. ಪಲ್ಲಾಡಿಯಮ್ ಶೇ.0.7 ಇಳಿಕೆಯಾಗಿ $970.45 ಕ್ಕೆ ತಲುಪಿದ್ದರೆ ಸ್ಪಾಟ್ ಬೆಳ್ಳಿ ಶೇ.0.9 ಇಳಿಕೆಯಾಗಿ $32.64 ಕ್ಕೆ ತಲುಪಿದೆ. ಪ್ಲಾಟಿನಂ ಶೇ.1.1 ಇಳಿಕೆಯಾಗಿ $967.40 ಕ್ಕೆ ತಲುಪಿದೆ.
ಎಂಸಿಎಕ್ಸ್ ಗೋಲ್ಡ್ ರೇಟ್ ಹೇಗಿದೆ?
MCX ಗೋಲ್ಡ್ 86000 ಮಾರ್ಕ್‌ಗಿಂತ ಹೆಚ್ಚಿನದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು ಮತ್ತು ದೈನಂದಿನ ಚಾರ್ಟ್‌ನಲ್ಲಿ ಕಡಿಮೆ ಬೇರಿಶ್ ಕ್ಯಾಂಡಲ್ ಅನ್ನು ರೂಪಿಸಿತು.ಇತ್ತೀಚಿನ ಬೆಲೆ ಕ್ರಮವು MCX ಗೋಲ್ಡ್ ಒಂದು ದಿನದಲ್ಲಿ ದೌರ್ಬಲ್ಯವನ್ನು ತೋರಿಸುವ ಆದರೆ ಮುಂದಿನ ಅವಧಿಗಳಲ್ಲಿ ಅದರ ಗರಿಷ್ಠ ಮಟ್ಟ ಮಾದರಿಯನ್ನು ಸೂಚಿಸುತ್ತದೆ.
MCX ಗೋಲ್ಡ್ 86120 ಗಿಂತ ಹೆಚ್ಚಾದರೆ ಅದು 86500/86800 ಮಟ್ಟಗಳತ್ತ ಮುನ್ನಡೆಯಬಹುದು. ಇದಕ್ಕೆ ವಿರುದ್ಧವಾಗಿ, ಸರಕುಗೆ ಬೆಂಬಲವನ್ನು 85650/85250 ಮಟ್ಟಗಳಲ್ಲಿ ಕಾಣಬಹುದು. ಸೂಚ್ಯಂಕವು ಹೆಚ್ಚಿನ ಚಂಚಲತೆಗೆ ಸಾಕ್ಷಿಯಾಗಬಹುದಾದ ನಿರ್ಣಾಯಕ ವಲಯದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ವ್ಯಾಪಾರಿಗಳು ಬಿಗಿಯಾದ ಸ್ಟಾಪ್ ನಷ್ಟಗಳನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈ. ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
ನಗರ 22ಕ್ಯಾರೆಟ್ 24K ಕ್ಯಾರೆಟ್
ಬೆಂಗಳೂರು 8,045 8,777
ಚೆನ್ನೈ 8,045 8,777
ಮುಂಬೈ 8,045 8,777
ದೆಹಲಿ 8,060 8,792
ಕೋಲ್ಕತಾ 8,045 8,777
ಹೈದರಾಬಾದ್ 8,045 8,777
ಪುಣೆ 8,045 8,777
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 10,050 ರೂ
ಚೆನ್ನೈ: 10,700ರೂ
ಮುಂಬೈ:10,050ರೂ
ದೆಹಲಿ: 10,700ರೂ
ಕೋಲ್ಕತಾ: 10,050 ರೂ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications