ಮಹಿಳೆಯರಿ ಶಾಕ್... ಚಿನ್ನದ ಬೆಲೆ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಚಿನ್ನದ ಬೆಲೆ ಹಾವು ಏಣಿ ಆಟವನ್ನು ಆಡುತ್ತಿದೆ.ಬೆಳ್ಳಿಯ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ.ಹಾಗಿದ್ರೆ, ಭಾರತದಲ್ಲಿ ಮಂಗಳವಾರ (ಫೆ.17) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು, ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನ ಇಂದು ಏರಿಕೆ ಕಂಡಿದೆ. ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 79,700 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 86,950 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಹತ್ತು ಗ್ರಾಂ ಚಿನ್ನ ಬೆಲೆ 330ರೂ.ಗಳ ಏರಿಕೆ ಕಂಡಿದೆ.
ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,970 ರೂಪಯಿ ಆಗಿದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,695 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 79,700 ರೂ.ಗಳು ಇದೆ.10 ಗ್ರಾಂನ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 86,950 ರೂ.ವಾಹಿವಾಟುವನ್ನು ನಡೆಸುತ್ತಿದೆ.
ಇನ್ನೂ100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,97,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,69,500 ರೂಪಾಯಿ ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 3,300ರೂ.ಗಳ ಏರಿಕೆ ಕಂಡಿದೆ. 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 65,210 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆ ಏರಿಕೆಯಾಗಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಗಳು ಇಂದು ಏರಿಕೆ ಕಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,00,500 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 100.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ1,005 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 10,050 ರೂ.ಗಳು ವ್ಯಾಪಾರವಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
MCX (ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್) ನಲ್ಲಿ ಚಿನ್ನದ ಬೆಲೆಗಳು ಪ್ರಸ್ತುತ ರೂ.85,000 ರ ಸಮೀಪದಲ್ಲಿವೆ, ಏಪ್ರಿಲ್ 4, 2025 ರಂದು ಪಕ್ವವಾಗಲಿರುವ ಚಿನ್ನದ ಫ್ಯೂಚರ್‌ಗಳು ಶೇ.0.36ರಷ್ಟು ಏರಿಕೆಯಾಗಿ ರೂ.85,243 ಕ್ಕೆ ತಲುಪಿವೆ. ಮಾರುಕಟ್ಟೆಯ ಏರಿಳಿತದ ನಡುವೆ ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿರುವುದೇ ಚಿನ್ನದ ಬೆಲೆಯಲ್ಲಿನ ಈ ಏರಿಕೆಗೆ ಕಾರಣ. ಮಾರ್ಚ್ 5, 2025 ರ ಮುಕ್ತಾಯ ದಿನಾಂಕದೊಂದಿಗೆ ಬೆಳ್ಳಿ ಫ್ಯೂಚರ್‌ಗಳು ಸಹ ಇಂದು ಬೆಳಿಗ್ಗೆ ಏರಿಕೆಯನ್ನು ಕಂಡವು, ರೂ. 95,836 ಕ್ಕೆ ಶೇ.0.27 ರಷ್ಟು ಹೆಚ್ಚಾಗಿ ವಹಿವಾಟು ನಡೆಸುತ್ತಿವೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ಪ್ರಕಾರ, ಸ್ಪಾಟ್ ಗೋಲ್ಡ್ ಬೆಲೆ ಶೇ.0.2ರಷ್ಟು ಏರಿಕೆಯಾಗಿ, 03:01 GMT ಯ ಹೊತ್ತಿಗೆ USD 2,903.56 ಕ್ಕೆ ತಲುಪಿದೆ. ಯುಎಸ್ ಚಿನ್ನದ ಭವಿಷ್ಯವು ಶೇ.0.6 ರಷ್ಟು ಏರಿಕೆಯಾಗಿ, USD 2,916.80 ಕ್ಕೆ ವಹಿವಾಟು ನಡೆಸಿತು. ಇದಕ್ಕೆ ವ್ಯತಿರಿಕ್ತವಾಗಿ, ಸ್ಪಾಟ್ ಸಿಲ್ವರ್ ಬೆಲೆ ಶೇ.1.5 ರಷ್ಟು ಇಳಿಕೆಯಾಗಿ, ಪ್ರತಿ ಔನ್ಸ್‌ಗೆ USD 32.30 ಕ್ಕೆ ಸ್ಥಿರವಾಯಿತು.
ವಿವಿಧ ನಗರಗಳಲ್ಲಿರುವ ಗೋಲ್ಡ್ ರೇಟ್ ವಿವರ
ನಗರ 22ಕ್ಯಾರೆಟ್ 24K ಕ್ಯಾರೆಟ್
ಬೆಂಗಳೂರು 7,970 8,695
ಚೆನ್ನೈ 7,970 8,695
ಮುಂಬೈ 7,970 8,695
ದೆಹಲಿ 7,985 8,710
ಕೋಲ್ಕತಾ 7,970 8,695
ಹೈದರಾಬಾದ್ 7,970 8,695
ಪುಣೆ 7,970 8,695
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 10,050 ರೂ
ಚೆನ್ನೈ: 10,800 ರೂ
ಮುಂಬೈ:10,050 ರೂ
ದೆಹಲಿ: 1,005ರೂ
ಕೋಲ್ಕತಾ: 10,050 ರೂ
ಹೈದರಾಬಾದ್: 10,800 ರೂ
ಪುಣೆ : 10,050 ರೂ
ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೂರು ತಿಂಗಳು ಮುಂದೂಡುವುದು ಉತ್ತಮ. ಏಪ್ರಿಲ್‌ವರೆಗೆ ಕಾದರೆ, ಆ ನಂತರ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ. ಏಕೆಂದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ದರವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸಿದೆ. ಇದರಿಂದಾಗಿ ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿಯುವ ಸಾಧ್ಯತೆ ಇದೆ.
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಏರಿಕೆಯಾಗಿರುವುರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಆಗುತ್ತಿದ್ದಾರೆ.


Click it and Unblock the Notifications