Gold Price on 1st January: ಹೊಸ ವರ್ಷದಂದು ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಹೊಸ ವರ್ಷದಂದು ಆಭರಣ ಪ್ರಿಯರಿಗೆ ನಿರಾಸೆಯಾಗಿದೆ. ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರನೇ ಏರಿಕೆಯಾಗಿದೆ. ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿ ಕಾಯ್ದುಕೊಂಡಿದೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಹೊಸ ವರ್ಷದಂದು ಚಿನ್ನದ ಮಾರುಕಟ್ಟೆ ಬಂಗಾರದ ಪ್ರಿಯರಿಗೆ ಶಾಕ್ ಕೊಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ ರೂ 71,500 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 78,000 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನದ ಬೆಲೆಯಲ್ಲಿ 440 ರೂಪಾಯಿಯ ಏರಿಕೆ ಕಂಡಿವೆ. 100 ಗ್ರಾಂ ಅಪರಂಜಿ ಚಿನ್ನ ಬೆಲೆ 4,400 ರೂಗಳಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಜನವರಿ1 ರಂದು, ಭಾರತದಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ.ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,150 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 7,756 ರೂ ಇದ್ದದ್ದು 7,800 ರೂ ಗೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ ಇಂದು71,500 ರೂಪಾಯಿ ಇದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 78,000 ರೂ ಇದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,11,000 ಇದ್ದದ್ದು 4,000 ರೂಗಳಷ್ಟು ಏರಿಕೆ ಕಂಡಿದೆ. ಪ್ರಸ್ತುತ 7,15,000 ರೂಗಳ ವಾಹಿವಾಟು ಇದೆ. 100 ಗ್ರಾಂ ಚಿನ್ನದ 24 ಕೆ ಬೆಲೆ 7,80,000 ರೂ.ಗಳ ವಹಿವಾಟು ನಡೆಸುತ್ತಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 58,500 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 90,500 ರೂಪಾಯಿ ಇದ್ದು,ಯಥಾಸ್ಥಿತಿ ಕಾಯ್ದುಕೊಂಡಿದೆ. ಪ್ರತಿ ಗ್ರಾಂ ಗೆ ರೂ 90.50 ರೂಗಳ ವ್ಯಾಪಾರವಿದೆ. 10 ಗ್ರಾಂ ಬೆಳ್ಳಿಯ ಬೆಲೆ 905 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,050ರೂ ಗಳು ಇದೆ. ಡಿಸೆಂಬರ್ ಆರಂಭದಿಂದಲೂ ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ನ ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಮೇಣದಬತ್ತಿಯ ರಚನೆಯೊಂದಿಗೆ MCX ಗೋಲ್ಡ್ 76500 ರ ಪ್ರಮುಖ ಮಟ್ಟಕ್ಕಿಂತ ಮುಚ್ಚಲ್ಪಟ್ಟಿದೆ. ಸರಕು ಪ್ರಸ್ತುತ ಮೇಲ್ಮುಖವಾದ ಇಳಿಜಾರಿನ ಟ್ರೆಂಡ್‌ಲೈನ್ ಬೆಂಬಲದ ಬಳಿ ವ್ಯಾಪಾರ ಮಾಡುತ್ತಿದೆ. ಹಾಗೂ ಸಂಭಾವ್ಯ ಸ್ಥಗಿತವು 76000 ಅಂಕಿಗಳ ಮಟ್ಟಕ್ಕಿಂತ ಕೆಳಗಿರುವ ಸಾಧ್ಯತೆಯಿದೆ.
75650/75300 ಮಟ್ಟಗಳ ಕಡೆಗೆ ಬೆಲೆಗಳನ್ನು ಎಳೆಯಿರಿ 77000/77200 ಮಟ್ಟಗಳು, 77450/77700 ಮಟ್ಟಗಳ ಕಡೆಗೆ ಸಂಭಾವ್ಯ ಬೆಲೆಗಳನ್ನು ಹೆಚ್ಚಿಸುವುದರೊಂದಿಗೆ, ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಚಂಚಲತೆಯು ಅಧಿಕವಾಗಿರಬಹುದು ಎಂದು ವ್ಯಾಪಾರಿಗಳಿಗೆ ಸೂಚಿಸಲಾಗಿದೆ ಎಂದು Waykers2Wealtth ನ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಚಿನ್ನದ ಬೆಲೆಗಳು
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 2,624.49 ಡಾಲರ್‌ನಲ್ಲಿ ಸ್ಥಿರವಾಗಿದೆ. ಬುಲಿಯನ್ ಈ ವರ್ಷ ಇಲ್ಲಿಯವರೆಗೆ 27% ಕ್ಕಿಂತ ಹೆಚ್ಚು ಗಳಿಸಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 28.84 USDನಲ್ಲಿ ಸ್ಥಿರವಾಗಿದೆ. ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ.
ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ?
ಹೊಸ ವರ್ಷದ ದಿನದ ಆಚರಣೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಅಂತರರಾಷ್ಟ್ರೀಯ ಷೇರುಗಳಲ್ಲಿ ವಹಿವಾಟು ನಡೆಸುತ್ತಿಲ್ಲ. ಇಲ್ಲಿ MCX ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಿನಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನಿರ್ಮಲ್ ಬ್ಯಾಂಗ್ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22ಕ್ಯಾರೆಟ್ | 24K ಕ್ಯಾರೆಟ್ |
| ಬೆಂಗಳೂರು | 7,150 | 7,800 |
| ಚೆನ್ನೈ | 7,150 | 7,800 |
| ಮುಂಬೈ | 7,150 | 7,800 |
| ದೆಹಲಿ | 7,165 | 7,815 |
| ಕೋಲ್ಕತಾ | 7,150 | 7,800 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
| ಬೆಂಗಳೂರು | 9,050 ರೂ |
| ಚೆನ್ನೈ | 9,800 ರೂ |
| ಮುಂಬೈ | 9,050 ರೂ |
| ದೆಹಲಿ | 9,050 ರೂ |
| ಕೋಲ್ಕತಾ | 9,050 ರೂ |


Click it and Unblock the Notifications