Gold Price: ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಬೆಲೆ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ನಾವು ಇಂದು ಯಥಾಸ್ಥಿತಿ ಕಾಣಬಹುದಾಗಿದೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಹಳದಿ ಲೋಹವು ಕಳೆದ ಹಲವು ಸೆಷನ್‌ನಲ್ಲೂ ಹೆಚ್ಚಾದ ಬಳಿಕ ಗುರುವಾರ ಅಂದ್ರೆ ಜನವರಿ 02ರಂದು ಬೆಲೆ ಹೆಚ್ಚಾಗಿದೆ. ಚಿನ್ನದ ಮಾರುಕಟ್ಟೆ ಬಂಗಾರದ ಪ್ರಿಯರಿಗೆ ಶಾಕ್ ಕೊಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ ರೂ 7,18,000 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 78,330 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನದ ಬೆಲೆಯಲ್ಲಿ 330 ರೂಪಾಯಿಯ ಏರಿಕೆ ಕಂಡಿವೆ. ಇನ್ನೂ 100 ಗ್ರಾಂ ಅಪರಂಜಿ ಚಿನ್ನ ಬೆಲೆ 2,500 ರೂಗಳಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಇಂದು ಭಾರತದಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ.ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,180 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 7,800 ರೂ ಇದ್ದದ್ದು 7,833 ರೂ ಗೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ ಇಂದು78,330 ರೂಪಾಯಿ ಇದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 78,330 ರೂ ಇದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,15,000 ಇದ್ದದ್ದು 7,18,000 ಆಗಿದೆ.ಇದೇ ಚಿನ್ನ ನಿನ್ನೆಗೆ ಹೋಲಿಕೆ ಮಾಡಿದ್ದರೆ 3,000 ರೂಗಳಷ್ಟು ಏರಿಕೆ ಕಂಡಿದೆ. ಪ್ರಸ್ತುತ 7,18,000 ರೂಗಳ ವಾಹಿವಾಟು ಇದೆ. 100 ಗ್ರಾಂ ಚಿನ್ನದ 24 ಕೆ ಬೆಲೆ 5,87,500
ರೂ.ಗಳ ವಹಿವಾಟು ನಡೆಸುತ್ತಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 58,750 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 90,500ರೂಪಾಯಿ ಇದ್ದು,ಯಥಾಸ್ಥಿತಿ ಕಾಯ್ದುಕೊಂಡಿದೆ. ಪ್ರತಿ ಗ್ರಾಂ ಗೆ ರೂ 90.50 ರೂಗಳ ವ್ಯಾಪಾರವಿದೆ. 10 ಗ್ರಾಂ ಬೆಳ್ಳಿಯ ಬೆಲೆ 905 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,050ರೂ ಗಳು ಇದೆ.
ಚಿನ್ನದ ಬೆಲೆ ವ್ಯತ್ಯಾಸಕ್ಕೆ ಕಾರಣವೇನು?
ಚಿನ್ನದ ಬೆಲೆಗಳು ಜಾಗತಿಕ ಮಟ್ಟದಲ್ಲಿ ಇನ್ನೂ ಸಹ ರಾಜಕೀಯ ಅಶಾಂತಿ ವಾತಾವರಣ ಮುಂದುವರೆದಿದೆ. ಇದ್ರ ಜೊತೆಗೆ ಯುಎಸ್ ಫೆಡರಲ್ ರಿಸರ್ವ್ 25 ಬಿಪಿಎಸ್‌ನಷ್ಟು ಬಡ್ಡಿ ದರ ತಗ್ಗಿಸಿದ ಬಳಿಕ ಹೂಡಿಕೆದಾರರ ಗಮನ ಮತ್ತು ಹೂಡಿಕೆಯ ಆಯ್ಕೆಯು ಸಹ ಬದಲಾಗಿದೆ. ವಿಪರೀತ ಹಣದುಬ್ಬರ ಏರಿಕೆಗೊಳ್ಳುತ್ತಿರುವುದು ಸಹ ಚಿನ್ನದ ಬೆಲೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ರೂಪಾಯಿ ದುರ್ಬಲಗೊಂಡು ಡಾಲರ್ ಬಲಗೊಂಡಿರುವುದು ಹಳದಿ ಲೋಹದ ಬೆಲೆ ಮೇಲೆ ನಕಾರಾತ್ಕಕ ಪರಿಣಾಮ ಬೀರುತ್ತಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ನ ದೇಶೀಯ ಮುಂಭಾಗದಲ್ಲಿ, MCX ಗೋಲ್ಡ್ ಮುಚ್ಚಿದ ಎರಡನೇ ಸತತ ಸೆಶನ್‌ಗೆ ಅದರ ಸಕಾರಾತ್ಮಕವಾಗಿ ಉಳಿಸಿಕೊಂಡಿದೆ ಮತ್ತು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ರಚನೆಯೊಂದಿಗೆ ಮುಚ್ಚಲ್ಪಟ್ಟಿದೆ. ಸರಕು ಮೇಲ್ಮುಖ ಇಳಿಜಾರಿನ ಟ್ರೆಂಡ್‌ಲೈನ್‌ನ ಬಳಿ ಕ್ರೋಢೀಕರಿಸುತ್ತಿದೆ. 50 ದಿನಗಳ EMA ಜೊತೆಗೆ 76250-76000 ಶ್ರೇಣಿಯ ಕೆಳಗೆ ಒಂದು ಸ್ಥಗಿತವು ಬಲವಾದ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ 75650/75300 ಮಟ್ಟಗಳಲ್ಲಿ, 77000/77400 ನಲ್ಲಿ ಪ್ರತಿರೋಧವನ್ನು ಗಮನಿಸಬಹುದು.77200 ಕ್ಕಿಂತ ಹೆಚ್ಚಿನ ಬೆಲೆಗಳನ್ನು 77700/78000 ಮಟ್ಟಗಳ ಕಡೆಗೆ ಹೆಚ್ಚಿಸಬಹುದು, ಏಕೆಂದರೆ ಚಂಚಲತೆಯು ಹೆಚ್ಚಾಗಬಹುದು. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಎಂದು ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ
ಸ್ಪಾಟ್ ಚಿನ್ನದ ಬೆಲೆಗಳು
ರಾಯಿಟರ್ಸ್ ಪ್ರಕಾರ, US ಚಿನ್ನದ ಭವಿಷ್ಯವು ಗುರುವಾರ ಶೇ. 0.2ರಷ್ಟು ಏರಿಕೆಯಾಗಿ $2,646.30 ಕ್ಕೆ ತಲುಪಿದೆ, ಆದರೆ ಸ್ಪಾಟ್ ಚಿನ್ನವು 0255 GMT ನಂತೆ ಔನ್ಸ್‌ಗೆ $2,634.15 ಕ್ಕೆ ಶೇ.0.39 ರಷ್ಟು ಏರಿಕೆಯಾಗಿದೆ. ಪಲ್ಲಾಡಿಯಮ್ ಶೇ.0.9 ಏರಿಕೆಯಾಗಿ $912.26, ಪ್ಲಾಟಿನಮ್ ಶೇ.0.7ಏರಿಕೆಯಾಗಿ $917.14, ಮತ್ತು ಸ್ಪಾಟ್ ಸಿಲ್ವರ್ ಶೇ.1.5 ಏರಿಕೆಯಾಗಿ $29.29 ಔನ್ಸ್‌ಗೆ ತಲುಪಿದೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರಗಳು | 22 ಕ್ಯಾರೆಟ್ | 24 ಕ್ಯಾರೆಟ್ |
| ಬೆಂಗಳೂರು | 7,180 | 7,833 |
| ಚೆನ್ನೈ | 7,180 | 7,833 |
| ಮುಂಬೈ | 7,180 | 7,833 |
| ದೆಹಲಿ | 7,195 | 7,848 |
| ಕೋಲ್ಕತಾ | 7,180 | 7,833 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
| ಬೆಂಗಳೂರು | 9,050 ರೂ |
| ಚೆನ್ನೈ | 9,800 ರೂ |
| ಮುಂಬೈ | 9,050 ರೂ |
| ದೆಹಲಿ | 9,050 ರೂ |
| ಕೋಲ್ಕತಾ | 9,050 ರೂ |
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications