Gold Price Today: ಹೊಸ ವರ್ಷಕ್ಕೂ ಮುನ್ನ ಆಭರಣ ಪ್ರಿಯರಿಗೆ ಬಂಗಾರದ ಮಾರುಕಟ್ಟೆ ಸಿಹಿ ಸುದ್ದಿ ಕೊಟ್ಟಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಳೆ ಇಂದು ದಿಢೀರನೇ ಬೆಲೆ ಕಡಿಮೆಯಾಗಿದೆ. ಹೌದು, ಚಿನ್ನದ ಬೆಲೆ ಕಡಿಮೆಯಾಗಿರುವುದರಿಂದ ಗ್ರಾಹರರು ದಿಲ್ ಖುಷ್ ಅಗಿದ್ದಾರೆ. ಇನ್ನೂ ಚಿನ್ನದ ಜೊತೆಗೆ ಬೆಳ್ಳಿ ಸಹ ಕಡಿಮೆಯಾಗಿದೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,100 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,560 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಚಿನ್ನ 440 ರೂಪಾಯಿಯ ಇಳಿಕೆಯನ್ನು ಕಂಡಿವೆ. 100 ಗ್ರಾಂ ಅಪರಂಜಿ ಚಿನ್ನ ಬೆಲೆ 4,400 ರೂಗಳಷ್ಟು ಇಳಿಕೆಯಾಗಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,110 ರೂಪಾಯಿ ಇದೆ. ಅದೇ ರೀತಿ ಅಪರಂಜಿ 22 ಕ್ಯಾರಟ್ ಚಿನ್ನದ ಬೆಲೆ 7,150 ರೂ ಇದ್ದದ್ದು 7,110 ರೂಗೆ ಇಳಿದಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ ಇಂದು 71,100 ರೂಪಾಯಿ ಇದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 77,560 ರೂ ಇದೆ.
100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,15,000 ಇದ್ದದ್ದು 4,000 ರೂಗಳಷ್ಟು ಇಳಿಕೆ ಕಂಡಿದೆ. ಪ್ರಸ್ತುತ 7,11,000 ರೂಗಳ ವಾಹಿವಾಟು ಇದೆ. 100 ಗ್ರಾಂ ಚಿನ್ನದ 24 ಕೆ ಬೆಲೆ 7,75,600 ರೂ.ಗಳ ವಹಿವಾಟು ನಡೆಸುತ್ತಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 58,180 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 90,500 ರೂಪಾಯಿ ಇದೆ.ನಿನ್ನೆಗೆ ಹೋಲಿಕೆ ಮಾಡಿದ್ದರೆ ಒಂದು ಕೆಜಿಯ ಬೆಳ್ಳಿಯ ಬೆಲೆಯಲ್ಲಿ2,000 ರೂಗಳಷ್ಟು ಇಳಿಕೆಯಾಗಿದೆ ಪ್ರತಿ ಗ್ರಾಂಗೆ ರೂ 92.50 ರೂಗಳ ವ್ಯಾಪಾರವಿದೆ. 10 ಗ್ರಾಂ ಬೆಳ್ಳಿಯ ಬೆಲೆ 905 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,250 ಇದ್ದದ್ದು 9,050ರೂ ಗಳಷ್ಟು ಇಳಿಕೆ ಕಂಡಿದೆ. ಡಿಸೆಂಬರ್ ಆರಂಭದಿಂದಲೂ ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ. ಆದರೆ, ಇಂದು ಬೆಳ್ಳಿಯ ಬೆಲೆ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಏರಿಕೆ ಕಂಡಿದೆ ಬೆಳ್ಳಿಯ ದರವೂ ಸ್ವಲ್ಪ ಕಡಿಮೆಯಾಗಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ನಲ್ಲಿ ತನ್ನ ಮಾರಾಟವನ್ನು ಎರಡನೇ ಸತತ ಸೆಷನ್‌ಗೆ ವಿಸ್ತರಿಸಿತು ಮತ್ತು ದೈನಂದಿನ ಚಾರ್ಟ್‌ನಲ್ಲಿ ಕರಡಿ ಮೇಣದಬತ್ತಿಯನ್ನು ರೂಪಿಸಿತು. ಸರಕು ಪ್ರಸ್ತುತ 76000 ಮಟ್ಟದ ಕೆಳಗಿನ ಸಂಭಾವ್ಯ ಸ್ಥಗಿತದೊಂದಿಗೆ ಮೇಲ್ಮುಖ-ಇಳಿಜಾರಾದ ಟ್ರೆಂಡ್‌ಲೈನ್ ಬೆಂಬಲದ ಬಳಿ ವ್ಯಾಪಾರ ಮಾಡುತ್ತಿದೆ.
75650/75300 ಮಟ್ಟಗಳ ಕಡೆಗೆ ಬೆಲೆಗಳನ್ನು ಎಳೆಯುವ ಸಾಧ್ಯತೆಯಿದೆ, ಪ್ರತಿರೋಧವು ಸ್ಥಾನದಲ್ಲಿದೆ 76480/76950 ಮಟ್ಟಗಳು, 76950 ಕ್ಕಿಂತ ಹೆಚ್ಚಿನ ಬೆಲೆಗಳನ್ನು 77200/77700 ಮಟ್ಟಗಳ ಕಡೆಗೆ ಹೆಚ್ಚಿಸುವುದರೊಂದಿಗೆ ವ್ಯಾಪಾರಿಗಳು ಕಟ್ಟುನಿಟ್ಟಾದ ನಿಲುಗಡೆ ನಷ್ಟಗಳನ್ನು ಕಾಪಾಡಿಕೊಳ್ಳಲು ಸಲಹೆ ನೀಡುತ್ತಾರೆ. ಏಕೆಂದರೆ ನಡೆಯುತ್ತಿರುವ ಭೂ ರಾಜಕೀಯ ಉದ್ವಿಗ್ನತೆಗಳಿಂದಾಗಿ ಚಂಚಲತೆಯು ಅಧಿಕವಾಗಿರುತ್ತದೆ "Waykers2Wealtth ನ ಸಂಶೋಧನಾ ವಿಶ್ಲೇಷಕರು. . ಲಿಮಿಟೆಡ್ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಚಿನ್ನದ ಬೆಲೆಗಳು:
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ರಾಯಿಟರ್ಸ್ ವರದಿ ಪ್ರಕಾರ 0217 GMT ಯಲ್ಲಿ ಸ್ಪಾಟ್ ಚಿನ್ನ 0.1% ನಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 2,608.09 ಡಾಲರ್ ತಲುಪಲಿದೆ. ಯುಎಸ್ ಚಿನ್ನದ ಭವಿಷ್ಯವು 0.1% ನಷ್ಟು ಗಳಿಸಿ 2,620.60 ಡಾಲರ್ ತಲುಪಿದೆ. ಬುಲಿಯನ್ ಈ ವರ್ಷ ಇಲ್ಲಿಯವರೆಗೆ 27% ಕ್ಕಿಂತ ಹೆಚ್ಚು ಗಳಿಸಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ $28.98 ನಲ್ಲಿ ಸ್ಥಿರವಾಗಿದೆ. ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ. ಪಲ್ಲಾಡಿಯಮ್ 0.5% ಏರಿಕೆಯಾಗಿ 908.25 ಡಾಲರ್ ತಲುಪಿದೆ. ಆದ್ರೆ ಪ್ಲಾಟಿನಂ 900.71 ಡಾಲರ್‌ನಲ್ಲಿ ಸ್ಥಿರವಾಗಿದೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22 ಕ್ಯಾರೆಟ್ | 24K ಕ್ಯಾರೆಟ್ |
| ಬೆಂಗಳೂರು | 7,110 | 7,756 |
| ಚೆನ್ನೈ | 7,110 | 7,756 |
| ಮುಂಬೈ | 7,110 | 7,756 |
| ದೆಹಲಿ | 7,125 | 7,771 |
| ಕೋಲ್ಕತಾ | 7,110 | 7,756 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
| ಬೆಂಗಳೂರು | 9,050 ರೂ |
| ಚೆನ್ನೈ | 9,800 ರೂ |
| ಮುಂಬೈ | 9,050 ರೂ |
| ಕೋಲ್ಕತಾ | 9,050 ರೂ |
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications