ಡಾಲರ್ ಸೂಚ್ಯಂಕದ ಕುಸಿತ ಮತ್ತು ವ್ಯಾಪಾರ ಯುದ್ಧದ ನಂತರ, ಸುರಕ್ಷಿತ ತಾಣಗಳ ಬೇಡಿಕೆ ಹೆಚ್ಚಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತು. ಬೆಳ್ಳಿಯ ಬೆಲೆಗಳು ಯಥಾಸ್ಥಿತಿಯಲ್ಲಿ ಇದೆ. ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ ಆಭರಣ ಪ್ರಿಯರು ಶಾಕ್ ಆಗಿದ್ದಾರೆ. ಬಹು ದಿನಗಳಿಂದ ಆಭರಣ ಖರೀದಿಗಾಗಿ ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಹಾಗಿದ್ರೆ, ಭಾರತದಲ್ಲಿ ಗುರುವಾರದಂದು ( ಫೆ.06) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು,ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 79,300 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 86,510 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಹತ್ತು ಗ್ರಾಂ ಚಿನ್ನ ಬೆಲೆ1,040 ರೂ.ಗಳ ಏರಿಕೆ ಕಂಡಿದೆ.

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?
ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,930 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,651ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ79,300 ರೂ.ಗಳು ವ್ಯಾಪಾರವಿದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 86,510 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.
ಇನ್ನೂ 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,93,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,65,100
ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 2,700ರೂ.ಗಳ ಏರಿಕೆ ಕಂಡಿದೆ. 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 64,880 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?
ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡಿದೆ.ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 99,500 ರೂಪಾಯಿಗಳು ವಾಹಿವಾಟುವಿದ್ದು, ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಸಾವಿರ ರೂಪಾಯಿಗಳ ಏರಿಕೆ ಕಂಡಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 99.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 995 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,950 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
MCX ಗೋಲ್ಡ್ ಸತತ ಆರನೇ ಅವಧಿಗೆ ತನ್ನ ಏರಿಕೆಯನ್ನು ಕಾಯ್ದುಕೊಂಡಿದೆ ಮತ್ತು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ಅನ್ನು ರೂಪಿಸಿದೆ. ಇತ್ತೀಚಿನ ಬೆಲೆ ಕ್ರಮ ಖರೀದಿ ಆಸಕ್ತಿಯನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ ಏಕೆಂದರೆ ಸರಕು ನಿರಂತರವಾಗಿ ದೈನಂದಿನ ಚಾರ್ಟ್‌ನಲ್ಲಿ ಹೆಚ್ಚಿನ ಗರಿಷ್ಠ ಮತ್ತು ಹೆಚ್ಚಿನ ಕನಿಷ್ಠಗಳನ್ನು ರೂಪಿಸುತ್ತಿದೆ.
MCX ಗೋಲ್ಡ್ 84600 ಗಿಂತ ಹೆಚ್ಚಾದರೆ,ಅದು 85000/85300 ಮಟ್ಟಗಳತ್ತ ಮುನ್ನಡೆಯಬಹುದು.ಇದಕ್ಕೆ ವಿರುದ್ಧವಾಗಿ, 84250/84000 ಮಟ್ಟದಲ್ಲಿ ಬೆಂಬಲ ಕಂಡುಬರುತ್ತದೆ. ಸೂಚ್ಯಂಕವು ಹೆಚ್ಚಿನ ಚಂಚಲತೆಗೆ ಸಾಕ್ಷಿಯಾಗಬಹುದಾದ ನಿರ್ಣಾಯಕ ವಲಯದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ವ್ಯಾಪಾರಿಗಳಿಗೆ ಬಿಗಿಯಾದ ಸ್ಟಾಪ್ ನಷ್ಟಗಳನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈ. ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ಪ್ರಕಾರ, ಯುಎಸ್ ಚಿನ್ನದ ಫ್ಯೂಚರ್‌ಗಳು ಶೇ.0.2 ರಷ್ಟು ಕುಸಿದು $2,888.30 ಕ್ಕೆ ತಲುಪಿದ್ದರೂ, ಸ್ಪಾಟ್ ಚಿನ್ನವು ಹಿಂದಿನ ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ $2,882.16 ತಲುಪಿದ ನಂತರ 0306 GMT ನಲ್ಲಿ ಔನ್ಸ್‌ಗೆ $2,870.16 ರಷ್ಟು ಸ್ಥಿರವಾಗಿತ್ತು. ಗುರುವಾರ ಚಿನ್ನದ ಬೆಲೆಗಳು ಸ್ವಲ್ಪ ಮಟ್ಟದಲ್ಲಿ ಏರಿಕೆ ಕಂಡಿವೆ. ಪಲ್ಲಾಡಿಯಮ್ ಶೇ.0.5ರಷ್ಟು ಏರಿಕೆಯಾಗಿ $994.17 ಕ್ಕೆ ತಲುಪಿತು. ಪ್ಲಾಟಿನಂ ಶೇ.0.4ರಷ್ಟು ಏರಿಕೆಯಾಗಿ $983.30 ಕ್ಕೆ ತಲುಪಿತು.ಆದರೆ ಸ್ಪಾಟ್ ಬೆಳ್ಳಿ ಶೇ.0.2 ರಷ್ಟು ಕುಸಿದು ಔನ್ಸ್‌ಗೆ $32.26 ಕ್ಕೆ ತಲುಪಿತು.
ವಿವಿಧ ನಗರದ ಚಿನ್ನದ ಬೆಲೆಗಳ ವಿವರ
| ನಗರ | 22ಕ್ಯಾರೆಟ್ | 24K ಕ್ಯಾರೆಟ್ |
| ಬೆಂಗಳೂರು | 7,930 | 8,651 |
| ಚೆನ್ನೈ | 7,930 | 8,651 |
| ಮುಂಬೈ | 7,930 | 8,651 |
| ದೆಹಲಿ | 7,945 | 8,666 |
| ಕೋಲ್ಕತಾ | 7,930 | 8,651 |
| ಹೈದರಾಬಾದ್ | 7,930 | 8,651 |
| ಪುಣೆ | 7,930 | 8,651 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)
| ಬೆಂಗಳೂರು | 9,950 ರೂ |
| ಚೆನ್ನೈ | 10,700 ರೂ |
| ಮುಂಬೈ | 9,950 ರೂ |
| ದೆಹಲಿ | 9,950 ರೂ |
| ಕೋಲ್ಕತಾ | 9,950 ರೂ |
| ಹೈದರಾಬಾದ್ | 10,700 ರೂ |
| ಪುಣೆ | 9,950 ರೂ |
ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೂರು ತಿಂಗಳು ಮುಂದೂಡುವುದು ಉತ್ತಮ. ಏಪ್ರಿಲ್‌ವರೆಗೆ ಕಾದರೆ, ಆ ನಂತರ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ. ಏಕೆಂದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ದರವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸಿದೆ. ಇದರಿಂದಾಗಿ ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿಯುವ ಸಾಧ್ಯತೆ ಇದೆ.
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಏರಿಕೆಯಾಗಿರುವುರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಆಗುತ್ತಿದ್ದಾರೆ.


Click it and Unblock the Notifications