ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯು ಭೌತಿಕ ಚಿನ್ನದ ಬೇಡಿಕೆಯ ಕುಸಿತಕ್ಕೆ ಕಾರಣವಾಗಿದೆ. ರಾಯಿಟರ್ಸ್ ವರದಿ ಪ್ರಕಾರ ಅಧಿಕೃತ ದೇಶೀಯ ವಿತರಕರು ಚಿನ್ನದ ಬೆಲೆಗಳಿಗಿಂತ ಕಳೆದ ವಾರ ಔನ್ಸ್‌ಗೆ 1.5 ಯುಎಸ್ ಡಾಲರ್ ಪ್ರೀಮಿಯಂ ವಿಧಿಸಿದ್ದಾರೆ.
ಭಾರತದಲ್ಲಿ ಚಿನ್ನದ ಆಮದು ಸುಂಕ ಕುಸಿದಿದ್ದರೂ, ಇನ್ನೂ ಶೇಕಡಾ 10.75ರಷ್ಟು ಮತ್ತು ಜಿಎಸ್‌ಟಿ ಶೇಕಡಾ 3ರಷ್ಟಿದೆ. ಹೀಗಾಗಿ ಚಿನ್ನವು ಆಭರಣ ಪ್ರಿಯರಿಗೆ ಕೊಂಚ ದೂರವಾಗತೊಡಗಿದೆ.
ಎಂಸಿಎಕ್ಸ್‌ನಲ್ಲಿನ ಚಿನ್ನದ ಭವಿಷ್ಯವು ಶುಕ್ರವಾರ 10 ಗ್ರಾಂಗೆ ಮೂರು ವಾರಗಳ ಗರಿಷ್ಠ 48,000ರ ಸಮೀಪದಲ್ಲಿತ್ತು. ಇದು ಜಾಗತಿಕ ಬೆಲೆಗಳ ಏರಿಳಿತಗಳ ನಡುವೆ ಹಠಾತ್ ಬೆಲೆ ಏರಿಕೆಯು ಭಾರತದಲ್ಲಿ ಚಿನ್ನದ ಬೇಡಿಕೆಯನ್ನು ತಗ್ಗಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಕೊರೊನಾವೈರಸ್ ಇನ್ನೂ ಸಂಪೂರ್ಣವಾಗಿ ಹೋಗದೆ ಡೆಲ್ಟಾ ರೂಪಾಂತರಾದ ಮೂಲಕ ಅನಿಶ್ಚಿತತೆಯನ್ನ ಹುಟ್ಟುಹಾಕಿದೆ. ಹೀಗಾಗಿ ಜನರು ಇನ್ನೂ ಚಿನ್ನವನ್ನು ಸುರಕ್ಷಿತ ಆಸ್ತಿಯೆಂದು ಪರಿಗಣಿಸಿದರ ಪರಿಣಾಮ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಿದೆ. ಚಿನ್ನವು ಔನ್ಸ್‌ಗೆ ಶೇಕಡಾ 0.3ರಷ್ಟು ಏರಿಕೆಗೊಂಡು 1,807.65 ಡಾಲರ್‌ಗೆ ತಲುಪಿದೆ.
ಇಂದಿನಿಂದ ಸವರನ್ ಗೋಲ್ಡ್ ಬಾಂಡ್ ಯೋಜನೆ (2021) ನಾಲ್ಕನೇ ಸೀರಿಸ್ ಚಂದಾದಾರಿಕೆಯು ಶುರುವಾಗಲಿದೆ. ಈ ಯೋಜನೆಯಡಿ ಜನರಿಗೆ ಚಿನ್ನ ಖರೀದಿಗೆ ಅವಕಾಶ ಸಿಗಲಿದೆ.
ಒಟ್ಟು ಆರು ಕಂತುಗಳಲ್ಲಿ ನೀಡಲಾಗುವ ಚಂದಾದಾರಿಕೆಯು ಮೇ 17 ರಿಂದ ಮೊದಲ ಕಂತು ಪ್ರಾರಂಭವಾಯಿತು. ಈಗಾಗಲೇ ಮೂರು ಕಂತು ಮುಗಿದಿದ್ದು, ನಾಲ್ಕನೇ ಹೂಡಿಕೆಯ ಅವಕಾಶ ಜುಲೈ 12ರಂದು ಪ್ರಾರಂಭವಾಗಿ 16ರವರೆಗೆ ನಿಗದಿಯಾಗಿದೆ.
ಜುಲೈ 12 ರಿಂದ ಐದು ದಿನಗಳವರೆಗೆ ಚಂದಾದಾರಿಕೆಗಾಗಿ ತೆರೆಯುವ ಸವರನ್ ಗೋಲ್ಡ್ ಬಾಂಡ್ ಯೋಜನೆ 2021-22ರ ವಿತರಣಾ ದರವನ್ನು ಪ್ರತಿ ಗ್ರಾಂಗೆ, 4,807 ಎಂದು ನಿಗದಿಪಡಿಸಲಾಗಿದೆ.


Click it and Unblock the Notifications