For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್: ಚಿನ್ನದ ಬೆಲೆ 3 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿಕೆ

|

ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಳದಿ ಲೋಹದ ಬೆಲೆ ಈ ವಾರದಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಹಬ್ಬದ ಋತುಮಾನ ಸಮೀಪಿಸುತ್ತಿದ್ದಂತೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಚಿಲ್ಲರೆ ಚಿನ್ನದ ವ್ಯಾಪಾರಿಗಳು ಶೇಖರಣೆ ಮಾಡಿದ್ದು, ಈಗ ಎಲ್ಲವನ್ನು ಹೆಚ್ಚಿನ ಬೆಲೆಗೆ ಬಿಕರಿಯಾಗುವ ನಿರೀಕ್ಷೆಯಿದೆ.

 

ಕಳೆದ ವಾರ ಪ್ರೀಮಿಯಂ ಪ್ರತಿ ಔನ್ಸಿಗೆ $1 ಇದ್ದದ್ದು, ಈ ವಾರ $5 ಪ್ರತಿ ಔನ್ಸ್ ತಲುಪಿದೆ. ದೇಶದ ಚಿನ್ನದ ಬೆಲೆಯಲ್ಲಿ ಆಮದು ಸುಂಕ ಶೇ 12.5 ಮತ್ತು ಜಿಎಸ್‌ಟಿ ಶೇ 3 ರಷ್ಟಿದೆ ಎಂದು ರೈಟರ್ಸ್ ವರದಿ ಮಾಡಿದೆ. ದಸರಾ, ದೀಪಾವಳಿಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ವಹಿವಾಟು ಹೆಚ್ಚಾಗಲಿದೆ.

 

ಆಗಸ್ಟ್ 7 ರಂದು ಚಿನ್ನದ ಬೆಲೆ ಗರಿಷ್ಠ 56,200 ರೂ 10ಗ್ರಾಂ ತಲುಪಿತ್ತು. ಕಳೆದ ಶುಕ್ರವಾರ ಸ್ಥಳೀಯ ಮಾರುಕಟ್ಟೆಯಲ್ಲಿ ಗೋಲ್ಡ್ ಫ್ಯೂಚರ್ಸ್ 10 ಗ್ರಾಂಗೆ 50, 920 ನಂತೆ ವಹಿವಾಟು ನಡೆಸಿತ್ತು.

ಹಬ್ಬದ ಸೀಸನ್: ಚಿನ್ನದ ಬೆಲೆ 3 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿಕೆ

ಅತಿ ಹೆಚ್ಚು ಚಿನ್ನದ ಬೇಡಿಕೆ ಹೊಂದಿರುವ ಚೀನಾದಲ್ಲಿ 30 ರಿಂದ 33.5 ಡಾಲರ್ ಪ್ರತಿ ಔನ್ಸ್ ನಂತೆ ವಹಿವಾಟು ನಡೆಸಿದ್ದರೆ, ಹಾಂಕಾಂಗ್ ನಲ್ಲಿ 1.50 ಡಾಲರ್ ಪ್ರೀಮಿಯಂ ಸಿಂಗಪುರದಲ್ಲಿ 1.20 ಡಾಲರ್ ಪ್ರತಿ ಔನ್ಸ್, ಜಪಾನ್ ದೇಶದಲ್ಲಿ 0.50 ಡಾಲರ್ ಪ್ರತಿ ಔನ್ಸ್ ಪ್ರೀಮಿಯಂ, ಬಾಂಗ್ಲಾದೇಶದಲ್ಲಿ ಬೆಲೆ ಏರಿಕೆ ಕಂಡು ಪ್ರತಿ 11.666 ಗ್ರಾಂಗೆ 2,333 ಟಾಕಾ(27.57 ಡಾಲರ್) ನಂತೆ ವಹಿವಾಟು ನಡೆಸಿವೆ.

Read more about: gold ಚಿನ್ನ
English summary

Gold price premium in India jumps to nearly 3-month high ahead of Dussehra

Gold price premium in India jumped to their highest in nearly three months this week as the festive season gathers pace. In anticipation of a pick-up in demand, jewellers continued to stock up.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X