For Quick Alerts
ALLOW NOTIFICATIONS  
For Daily Alerts

ಏರಿದ ಚಿನ್ನ, ಇಳಿದ ಬೆಳ್ಳಿ; ಏಕೆ ಹೂಡಿಕೆದಾರರ ಚಿತ್ತ ಅಮೆರಿಕದತ್ತ?

By ಅನಿಲ್ ಆಚಾರ್
|

ಭಾರತದ ಎಂಸಿಎಕ್ಸ್ ನಲ್ಲಿ ಶುಕ್ರವಾರ (ಅಕ್ಟೋಬರ್ 24, 2020) ಚಿನ್ನ- ಬೆಳ್ಳಿ ಮಿಶ್ರ ಬಗೆಯಲ್ಲಿ ವಹಿವಾಟು ನಡೆಸಿವೆ. ಯುಎಸ್ ನಲ್ಲಿ ಕೊರೊನಾ ಉತ್ತೇಜನಾ ಪ್ಯಾಕೇಜ್ ಬಗ್ಗೆ ಯಾವುದೇ ನಿಗದಿತ ಕಾಲಮಿತಿ ಇಲ್ಲ. ಆ ಅನಿಶ್ಚಿತತೆ ಹಿನ್ನೆಲೆಯಲ್ಲಿ ಬಹಳ ಎಚ್ಚರಿಕೆಯಿಂದ ವ್ಯವಹಾರ ನಡೆಸಲಾಗುತ್ತಿದೆ.

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಗುರುವಾರದಂದು ಮಾತನಾಡಿ, ಶ್ವೇತಭವನದ ಜತೆಗೆ ಕೊರೊನಾ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಇದು ಅಂತಿಮ ಘಟ್ಟ ತಲುಪಲಿದೆ ಎಂದು ಹೇಳಿದ್ದರು. ಆದರೆ ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಹೇಳಿವಂತೆ, ಈಗಲೂ ನೀತಿ ವಿಚಾರದಲ್ಲಿ ಮಹತ್ತರವಾದ ವ್ಯತ್ಯಾಸ ಇದೆ. ಚುನಾವಣೆಗೂ ಮುನ್ನ ಇದು ಬಗೆಹರಿಯುವುದಿಲ್ಲ.

ಚಿನ್ನ ಏರಿಕೆ, ಬೆಳ್ಳಿ ಇಳಿಕೆ
 

ಚಿನ್ನ ಏರಿಕೆ, ಬೆಳ್ಳಿ ಇಳಿಕೆ

ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 0.15% ಅಥವಾ 74 ರುಪಾಯಿ ಏರಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,840ರಂತೆ ವಹಿವಾಟು ನಡೆಯಿತು. ಇನ್ನು ಬೆಳ್ಳಿಯ ಫ್ಯೂಚರ್ಸ್ 0.10% ಅಥವಾ 64 ರುಪಾಯಿ ಬೆಲೆ ಇಳಿದು, 62,551 ರುಪಾಯಿಯಲ್ಲಿ ವ್ಯವಹಾರವನ್ನು ನಡೆಸಿತು. ಸ್ಪಾಟ್ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ 95 ರುಪಾಯಿ ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 51,405 ರುಪಾಯಿಯಂತೆ ಗುರುವಾರ ವಹಿವಾಟು ನಡೆಸಿತು. ಜಾಗತಿಕ ಮಟ್ಟದ ಟ್ರೆಂಡ್ ದುರ್ಬಲ ಹಾಗೂ ರುಪಾಯಿ ಮೌಲ್ಯ ಹೆಚ್ಚಳದ ಮಧ್ಯೆ ಈ ಬೆಳವಣಿಗೆ ಆಗಿದೆ ಎಂದು ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ತಿಳಿಸಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ 504 ರುಪಾಯಿ ಇಳಿಕೆಯಾಗಿ, ಪ್ರತಿ ಕೇಜಿಗೆ 63,425 ರುಪಾಯಿ ಇದೆ.

ಯುಎಸ್ ಅಧ್ಯಕ್ಷೀಯ ಚುನಾವಣೆ ಸಂವಾದದ ಕಡೆಗೆ ಕಣ್ಣು

ಯುಎಸ್ ಅಧ್ಯಕ್ಷೀಯ ಚುನಾವಣೆ ಸಂವಾದದ ಕಡೆಗೆ ಕಣ್ಣು

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಡಾಲರ್ ಮೌಲ್ಯ ಪ್ರಬಲವಾಗಿದೆ. ಹೂಡಿಕೆದಾರರು ಮುಖ್ಯವಾಗಿ ಯುಎಸ್ ಅಧ್ಯಕ್ಷೀಯ ಚುನಾವಣೆಯ ಸಂವಾದದ ಕಡೆಗೆ ಕಣ್ಣು ನೆಟ್ಟಿದ್ದಾರೆ. ಇದರ ಜತೆಗೆ ಕೊರೊನಾ ಆರ್ಥಿಕ ಪ್ಯಾಕೇಜ್ ಬಗ್ಗೆ ಏನಾದರೂ ಸ್ಪಷ್ಟತೆ ಸಿಗಬಹುದಾ ಎಂದು ಎದುರು ನೋಡುತ್ತಿದ್ದಾರೆ. ಸ್ಪಾಟ್ ಗೋಲ್ಡ್ ಬೆಲೆಯಲ್ಲಿ 0.1 ಪರ್ಸೆಂಟ್ ಇಳಿಕೆಯಾಗಿ, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1902.57ರಂತೆ ವಹಿವಾಟು ನಡೆಸಿತು. ಇದಕ್ಕೂ ಮುಂಚಿನ ಸೆಷನ್ ನಲ್ಲಿ 1%ಗೂ ಹೆಚ್ಚು ಇಳಿಕೆಯನ್ನು ಕಂಡಿತ್ತು. ಯುಎಸ್ ಚಿನ್ನದ ಫ್ಯೂಚರ್ಸ್ ಪ್ರತಿ ಔನ್ಸ್ ಗೆ $ 1904.80ರಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ ಆಗಿದೆ.

ಬೇಡಿಕೆ ಹಿನ್ನೆಲೆಯಲ್ಲಿ ಮೇಲ್ಮಟ್ಟದಲ್ಲೇ ಬೆಲೆ

ಬೇಡಿಕೆ ಹಿನ್ನೆಲೆಯಲ್ಲಿ ಮೇಲ್ಮಟ್ಟದಲ್ಲೇ ಬೆಲೆ

ಹೂಡಿಕೆದಾರರಿಂದ ಚಿನ್ನಕ್ಕೆ ಪ್ರಬಲ ಬೇಡಿಕೆ ಇರುವ ಕಾರಣಕ್ಕೆ ಬೆಲೆ ಮೇಲ್ಮಟ್ಟದಲ್ಲೇ ಇರಲಿದೆ ಮತ್ತು ಜ್ಯುವೆಲ್ಲರ್ ಗಳಿಂದ ಹಾಗೂ ಕೇಂದ್ರ ಬ್ಯಾಂಕ್ ಗಳಿಂದ ಬೇಡಿಕೆ ಕಡಿಮೆ ಆಗುವುದು ಇದನ್ನು ಸರಿತೂಗಿಸುತ್ತದೆ ಎಂದು ರಿಫಿನಿಟಿವ್ ಮೆಟಲ್ ರಿಸರ್ಚ್ ಹೇಳಿದೆ. ವಿಶ್ವದಲ್ಲೇ ಅತಿ ದೊಡ್ಡ ಚಿನ್ನದ ಎಕ್ಸ್ ಚೇಂಜ್ ಟೇಡೆಡ್ ಫಂಡ್ ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ಬುಧವಾರದಂದು 0.1% ಇಳಿಕೆ ಕಂಡು, 40.8 ಮಿಲಿಯನ್ ಔನ್ಸ್ ಇತ್ತು. ಇನ್ನು ಬೆಳ್ಳಿ ದರವು 0.8% ಇಳಿಕೆ ಕಂಡು, ಪ್ರತಿ ಔನ್ಸ್ ಗೆ $ 24.56 ಇದೆ. ಪ್ಲಾಟಿನಂ 0.4% ಕುಸಿದು, $ 880.94 ಇದ್ದು, ಪಲಾಡಿಯಂ 0.3% ಹೆಚ್ಚಳವಾಗಿ $ 2379.50 ಇದೆ.

English summary

Gold Price Rise And Silver Rate Decline On October 23, 2020

Due to global trend and other reasons gold price rise and silver rate decline on October 23, 2020. Here is an analysis.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X