2026ರ ಕೇಂದ್ರ ಬಜೆಟ್‌ಗೂ ಮುನ್ನವೇ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ನೋಡಿತ್ತು. ಇಂದು ಬಜೆಟ್ ದಿನ. ಈ ದಿನ ಚಿನ್ನದ ಬೆಲೆ ಹೇಗಿರುತ್ತೆ ಅನ್ನೋದು ಪ್ರತಿಯೊಬ್ಬರಿಗೂ ಇರುತ್ತೆ ಈಗಾಗ್ಲೇ ಸಾಕಷ್ಟು ನಿರೀಕ್ಷೆ ಹೊಂದಿರುವ ಜನ ಸಾಮಾನ್ಯರು, ಬಜೆಟ್‌ನಲ್ಲಿ ಚಿನ್ದ-ಬೆಳ್ಳಿ ಬೆಲೆಯಲ್ಲೂ ಇಳಿಕೆ ಸಿಗಬಹುದಾ ಎಂದು ನಿರೀಕ್ಷಿಸಿದ್ದಾರೆ.

ಅಂದಹಾಗೆ ಚಿನ್ನ ಮತ್ತು ಬೆಳ್ಳಿ ಬೆಲೆಯ ಮೇಲಿನ ಆಮದು ಸುಂಕ ಕಡಿಮೆಯಾಗಿ, ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂತಲೂ ಹೇಳಲಾಗುತ್ತಿದೆ. ಹೀಗಾಗಿಯೇ ಇಂದು ಚಿನ್ನದ ಬೆಲೆ ಹೇಗಿರಬಹುದು. ಇಳಿಕೆಯೋ? ಏರಿಕೆಯೋ ಎಂಬ ಪ್ರಶ್ನೆಯಂತೂ ಕಾಡುತ್ತಿದೆ. ದಾಖಲೆಯಷ್ಟು ಬೆಲೆ ಏರಿಕೆ ಕಂಡಿರುವ ಚಿನ್ನದ ಬೆಲೆ ಬದಲಾವಣೆ ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ಅತಿ ಮುಖ್ಯವಾಗಿದೆ. ಹೀಗಾಗಿ ಬೆಲೆ ವಿವರ ಅತ್ಯಗತ್ಯ. ಹಾಗಾದ್ರೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆಯೋ ಅಥವಾ ಏರಿಕೆಯಾಗಿದೆಯೋ ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ನಿನ್ನೆ ಮೊನ್ನೆ ಭಾರಿ ಇಳಿಕೆ ನೋಡಿ ಚಿನ್ನಪ್ರಿಯರಿಗೆ ಸಂತಸ ನೀಡಿದ್ದ ಚಿನ್ನದ ಬೆಲೆಗಳು, ಇಂದು ಸಂತಸ ನೀಡದಿದ್ದರೂ ಸಮಾಧಾನವಂತೂ ನೀಡಿದೆ. ಅಂದರೆ ಇಂದು ಚಿನ್ನದ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಇಂದು 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 16,058 ರೂ. 10 ಗ್ರಾಂ ಚಿನ್ನದ ಬೆಲೆ 1,60,580 ರೂ. 100 ಗ್ರಾಂ ಚಿನ್ನದ ಬೆಲೆ 16,05,800 ರೂ, ಆಗಿದೆ. ಇದು ನಿನ್ನೆ ಇದ್ದ ಬೆಲೆಯೇ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಇಂದು 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 14,720 ರೂ. 10 ಗ್ರಾಂ ಚಿನ್ನದ ಬೆಲೆ 1,47,200 ರೂ. 100 ಗ್ರಾಂ ಚಿನ್ನದ ಬೆಲೆ 14,72,000 ರೂ, ಆಗಿದೆ. ಇದು ನಿನ್ನೆ ಇದ್ದ ಬೆಲೆಯೇ ಆಗಿದೆ.
ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ:
ಇಂದು 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 12,044 ರೂ. 10 ಗ್ರಾಂ ಚಿನ್ನದ ಬೆಲೆ 1,20,440 ರೂ. 100 ಗ್ರಾಂ ಚಿನ್ನದ ಬೆಲೆ 12,04,400 ರೂ, ಆಗಿದೆ. ಇದು ನಿನ್ನೆ ಇದ್ದ ಬೆಲೆಯೇ ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಇಂದಿನ ಬೆಂಗಳೂರು ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ನಿನ್ನೆಗಿಂತ ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಯ ದರ ₹350 ಆಗಿದ್ದು, 8 ಗ್ರಾಂಗೆ ₹2,800 ಮತ್ತು 10 ಗ್ರಾಂಗೆ ₹3,500 ಎಂದು ದಾಖಲಾಗಿದೆ. ಇದೇ ರೀತಿಯಾಗಿ 100 ಗ್ರಾಂ ಬೆಳ್ಳಿಯ ಬೆಲೆ ₹35,000 ಆಗಿದ್ದರೆ, 1,000 ಗ್ರಾಂ (1 ಕೆಜಿ) ಬೆಳ್ಳಿಗೆ ₹3,50,000 ದರ ಮುಂದುವರಿದಿದೆ. ಒಟ್ಟಾರೆ ಇಂದು ಹಾಗೂ ನಿನ್ನೆ ಬೆಲೆಗಳು ಒಂದೇ ಆಗಿದ್ದು, ಬೆಳ್ಳಿಯ ಮೌಲ್ಯದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ.
ಒಟ್ಟಾರೆ, ಬಜೆಟ್ ದಿನದಂದು ಚಿನ್ನದ ಬೆಲೆಗಳಲ್ಲಿ ದೊಡ್ಡ ಮಟ್ಟದ ಏರಿಳಿತ ಕಾಣಿಸಿಕೊಳ್ಳದೆ ಸ್ಥಿರತೆ ಕಾಯ್ದುಕೊಂಡಿರುವುದು ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿದೆ. ಆದರೆ ಬಜೆಟ್‌ನಲ್ಲಿ ಸರ್ಕಾರ ಆಮದು ಸುಂಕ ಅಥವಾ ತೆರಿಗೆಗಳ ಕುರಿತಾಗಿ ಯಾವುದೇ ಮಹತ್ವದ ಘೋಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ ಆಭರಣ ಖರೀದಿ ಅಥವಾ ಹೂಡಿಕೆ ಮಾಡುವವರು ಮಾರುಕಟ್ಟೆಯ ಚಲನೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವುದು ಒಳಿತು. ಬಜೆಟ್ ನಂತರದ ದಿನಗಳಲ್ಲಿ ಚಿನ್ನದ ಬೆಲೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದೇ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.


Click it and Unblock the Notifications