ಚಿನ್ನದ ಬೆಲೆಗಳು ಮತ್ತೆ ಏರಿಕೆಯ ಹಾದಿಯನ್ನ ಹಿಡಿದಿವೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯು ಯಾವ ಸ್ಥಿತಿಯಲ್ಲಿ ಮುಂದುವರೆಯುತ್ತದೆ ಎಂಬುದನ್ನ ಕೂಡ ಊಹಿಸಲು ಅಸಾಧ್ಯ. ಏಕೆಂದರೆ. ಭಾರತದದ ವಿವಿಧ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಸುಂಕವನ್ನು ವಿಧಿಸಿದ್ರು. ಆದ್ರೆ ಅಮೆರಿಕ ನ್ಯಾಯಾಲಯ ಅನ್ನ ರದ್ದುಗೊಳಿಸಬೇಕು ಎಂದು ತೀರ್ಪು ನೀಡಿತು. ಈ ಒಂದು ತೀರ್ಪಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಶುರುವಾಗಿ, ಚಿನ್ನದ ಬೆಲೆಗಳು ಮತ್ತೆ ಏರಿಕೆಯ ಹಾದಿಯನ್ನು ಅನುಸರಿಸಿವೆ. ಅಲ್ಲದೇ ಟ್ರಂಪ್ ಈಗ ಇನ್ನೂ ಒಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ ಮತ್ತೆ 15% ಸುಂಕ ಹೆಚ್ಚಳ ಮಾಡಿರೋದು. ಹಾಗಾದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯಿರಿ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ:
ಹೂಡಿಕೆಗೆ ಆಯ್ಕೆ ಮಾಡುವ 24 ಕ್ಯಾರೆಟ್ ಚಿನ್ನದ ಬೆಲೆಯು ಇಂದು ದೊಡ್ಡ ಶಾಕ್ ನೀಡ್ತಿದೆ. ಅಂದರೆ ಬೆಂಗಳೂರಿನಲ್ಲಿ ಇದರ ಬೆಲೆ ಒಂದು ಗ್ರಾಂಗೆ 16,135 ರೂ. ಈ ಬೆಲೆ ನಿನ್ನೆ 15,928 ಆಗಿದ್ದು ನಿನ್ನೆಗಿಂತ ಇಂದಿಗೆ 207 ರೂ. ಏರಿಕೆಯಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ 1,61,350 ರೂ. ಆಗಿದ್ದು, ನಿನ್ನೆ ಇದು 1,59,280 ಆಗಿತ್ತು. ಅಂದರೆ ಇಂದು ಬರೋಬ್ಬರಿ 2,070 ರೂ. ಏರಿಕೆ. ಇನ್ನು 100 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು ಇಂದು 16,13,500 ಇಂದಿಗೆ 20,700 ಏರಿಕೆ ನೋಡಿದೆ.
22 ಕ್ಯಾರೆಟ್ ಚಿನ್ನದ ಬೆಲೆ:
ಆಭರಣಕ್ಕೆ ಹೆಚ್ಚು ಆಯ್ಕೆ ಮಾಡುವ 22 ಕ್ಯಾರೆಟ್ ಚಿನ್ನ ಕೂಡ ಇಂದು ಏರಿಕೆಯಾಗಿದೆ. 1 ಗ್ರಾಂ ಬಂಗಾರ 14,790 ರೂ. ಆಗಿದ್ದು ನಿನ್ನೆ 14,600 ರೂ. ಇತ್ತು. ಅಂದರೆ ನಿನ್ನೆಗಿಂತ ಇಂದು 190 ರೂ. ಏರಿಕೆ. 10 ಗ್ರಾಂ ಚಿನ್ನ 1,47,900 ರೂ. ಆಗಿದೆ, ನಿನ್ನೆ 1,46,000 ಇತ್ತು. ನಿನ್ನೆಗಿಂತ ಇದರಲ್ಲಿ ಬರೋಬ್ಬರಿ 1,900 ಏರಿಕೆಯಾಗಿದೆ. 100 ಗ್ರಾಂ ಚಿನ್ನ ಇಂದು 14,79,000 ರೂ. ಆಗಿತ್ತು. ನಿನ್ನೆ ಈ ಬೆಲೆ 14,60,000 ಆಗಿತ್ತು, ಅಂದರೆ 100 ಗ್ರಾಂನ 22 ಕ್ಯಾರೆಟ್ ಚಿನ್ನದಲ್ಲಿಯೇ ಇಂದು 19,000 ಏರಿಕೆಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ:
ಇಂದು ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆಯು ಕೂಡ ದುಬಾರಿಯಾಗಿದೆ. ಇಂದು ಪ್ರತಿ ಗ್ರಾಂ ಚಿನ್ನದ ಬೆಲೆ 12,101 ರೂ. ಆಗಿದ್ದು, ನಿನ್ನೆ ಈ ಬೆಲೆ 11,946 ಆಗಿತ್ತು. ಅಂದರೆ ನಿನ್ನೆಗಿಂತ ಇಂದು 155 ರೂ. ಏರಿಕೆಯಾಗಿದೆ. ಅದರಂತೆ 10 ಗ್ರಾಂ ಚಿನ್ನದ ಬೆಲೆ 1,21,010 ರೂ. ಆಗಿದ್ದು, ನಿನ್ನೆ ಇದು 1,19,460 ಆಗಿತ್ತು. ಅಂದರೆ ಇಂದು 1,550 ರೂ. ಏರಿಕೆ ನೋಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆಯು 12,10,100 ರೂ. ಆಗಿದ್ದು, ನಿನ್ನೆ 11,94,600 ರೂ. ಆಗಿದ್ದ ಕಾರಣ ಇಂದು ಒಂದೇ ದಿನಕ್ಕೆ 15,500 ರೂ. ಏರಿಕೆಯನ್ನ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಬೆಳ್ಳಿ ಬೆಲೆಯಂತೂ ಇಂದು ಕೇಳೋದೇ ಬೇಡ. ಯಾಕಂದ್ರೆ ಇಂದಿನ ಬೆಲೆ ತಲೆ ತಿರುಗಿಸುತ್ತದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ 300 ರೂ. ನಿನ್ನೆ ಈ ಬೆಲೆ 275 ರೂ. ಅಂದ್ರೆ ನಿನ್ನೆಗಿಂತ ಇಂದಿಗೆ 25 ರೂ. ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ 3,000 ರೂ. ಆಗಿದ್ದು ನಿನ್ನೆ 2,750 ಇದ್ದ ಕಾರಣ ಒಂದೇ ದಿನಕ್ಕೆ 10 ಗ್ರಾಂ ಬೆಳ್ಳಿ ದರದಲ್ಲಿ 250 ರೂ. ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿಯ ಲೆಕ್ಕಾಚಾರದಲ್ಲಿ ನೋಡಿದರೆ, ಇಂದಿನ ಬೆಲೆ ಬರೋಬ್ಬರಿ 3 ಲಕ್ಷ ರೂಪಾಯಿ. ಅಂದರೆ ನಿನ್ನೆ 2,75,000 ರೂ. ಇದ್ದ ಬೆಳ್ಳಿಯಲ್ಲಿ ಇಂದು ಬರೋಬ್ಬರಿ 25,000 ರೂ. ಏರಿಕೆಯಾಗಿದೆ.
ಸ್ಪಾಟ್ ಚಿನ್ನದ ಬೆಲೆ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ 0419 GMT ವೇಳೆಗೆ 1.1% ಏರಿಕೆ ಕಂಡು ಪ್ರತಿಔನ್ಸ್‌ಗೆ $5,161.64 ಮಟ್ಟ ತಲುಪಿದೆ. ಇದೇ ವೇಳೆ ಏಪ್ರಿಲ್ ವಿತರಣೆಗೆ ಸಂಬಂಧಿಸಿದ ಅಮೆರಿಕದ ಚಿನ್ನದ ಭವಿಷ್ಯ ವಹಿವಾಟು (ಫ್ಯೂಚರ್ಸ್) ದರವು 2% ಏರಿಕೆಯಾಗಿದ್ದು, $5,183 ಮಟ್ಟದಲ್ಲಿ ವಹಿವಾಟಾಗುತ್ತಿದೆ.
ಒಟ್ಟಿನಲ್ಲಿ ಚಿನ್ನದ ಬೆಲೆ ಮೊದಲೇ ಊಹೆಗೂ ಮೀರಿದಷ್ಟು ಏರಿಕೆಯ ಹಾದಿಯಲ್ಲಿ ಸಾಗುತ್ತಿತ್ತು. ಆದರೆ ಟ್ರಂಪ್ ಸುಂಕ ಹಾಗೂ ಅಮೆರಿಕ ನ್ಯಾಯಾಲಯದ ತೀರ್ಪು ನಂತರ ಇನ್ನಷ್ಟು ಏರಿಕೆಯನ್ನ ಕಾಣುತ್ತಿದೆ. ಚಿನ್ನ ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೆ ತಲೆ ತಿರುಗುವಂತಹ ಪರಿಸ್ಥಿತಿ ಬಂದಿದೆ. ಇನ್ಯಾವಾಗ ಚಿನ್ನದ ಬೆಲೆ ಹೆಚ್ಚಿನ ಪಟ್ಟು ಇಳಿಕೆಯಾಗುತ್ತೋ, ಖರೀದಿದಾರರ ಕನಸು ನನಸಾಗುತ್ತೋ ಗೊತ್ತಿಲ್ಲ. ಚಿನ್ನದ ಬೆಲೆ ಅಧಿಕೃತ ಮಾಹಿತಿಗಾಗಿ ಗುಡ್‌ರಿಟರ್ನ್ಸ್ ಕನ್ನಡವನ್ನ ನೋಡುತ್ತಿರಿ.


Click it and Unblock the Notifications