ಬೆಂಗಳೂರಿನಲ್ಲಿ ಚಿನ್ನದ ಬೆಲೆ: ಕಳೆದ ಐದಾರು ದಿನಗಳಲ್ಲಿ ಚಿನ್ನದ ಬೆಲೆಯ ಹೋಲಿಕೆ ನೋಡಿದರೆ, ನಿನ್ನೆ ಒಂದೇ ದಿನ ಇಳಿಕೆ ನೋಡಿದ್ದು ಎನ್ನಬಹುದು. ಅದು ಕೂಡ ಕೊಂಚವೇ ಬೆಲೆಯಲ್ಲಿ. ಇನ್ನುಳಿದ ದಿನವೆಲ್ಲಾ ಚಿನ್ನದ ಬೆಲೆಯು ದಾಖಲೆ ಮಟ್ಟಕ್ಕೆ ಎರಿಕೆಯಾಗಿದೆ. ಟ್ರಂಪ್ ಪ್ರತಿಸುಂಕ ನೀತಿಯು ಚಿನ್ನದ ಬೆಲೆಯನ್ನು ಭಾರಗೊಳಿಸಿದೆ. ಇತ್ತೀಚೆಗೆ ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್‌ನ ಹೆಚ್ಚುವರಿ ಸುಂಕವನ್ನು ರದ್ದುಗೊಳಿಸಿದಾಗಿನಿಂದ ಈ ಬೆಲೆ ಏರಿಕೆಯಲ್ಲಿ ಬಿರುಗಾಳಿ ಎದ್ದಿದೆ.

ಹೆಚ್ಚುವರಿ ಸುಂಕಗಳನ್ನು ಆಯಾ ಸಂಬಂಧಪಟ್ಟ ದೇಶಗಳಿಗೆ ಹಿಂತಿರುಗಿಸುವ ಜವಾಬ್ದಾರಿ ಈಗ ಟ್ರಂಪ್ ಹೆಗಲೇರಿದೆ. ಇದರಿಂದ ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಅಸ್ಥಿರತೆ ಉಂಟಾಗಿ, ಡಾಲರ್ ಮೌಲ್ಯದ ಕುಸಿತದಿಂದ ಚಿನ್ನದ ಬೆಲೆಯು ಏರಿಕೆಯ ಹಾದಿಯನ್ನೇ ನೋಡಿದೆ. ಹೌದು, ಹಾಗಾದ್ರೆ ಚಿನ್ನದ ಬೆಲೆ ಇಂದು ಎಷ್ಟು ಏರಿಕೆಯಾಗಿದೆ? ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು? ಇಲ್ಲಿ ತಿಳಿಯಿರಿ.
24 ಕ್ಯಾರೆಟ್ ಚಿನ್ನದ ಬೆಲೆ:
ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯು 16,157 ರೂ. ಆಗಿದೆ. ಈ ಬೆಲೆ ನಿನ್ನೆ 16,102 ಆಗಿದ್ದು, ಇಂದು ಪ್ರತಿ ಗ್ರಾಂನಲ್ಲಿ 55 ರೂ. ಹೆಚ್ಚಳವಾಗಿದೆ. 10 ಗ್ರಾಂ ಬೆಲೆಯಲ್ಲಿ 550 ರೂ. ಏರಿಕೆಯಾಗಿದ್ದು, ಇಂದು 1,61,570 ರೂ. ತಲುಪಿದೆ. ಅಂದರೆ ನಿನ್ನೆಯ ಬೆಲೆ 1,61,020 ಆಗಿತ್ತು. ಅದರಂತೆಯೇ 100 ಗ್ರಾಂ ಚಿನ್ನದ ಬೆಲೆಯು ಇಂದು 16,15,700 ಆಗಿದ್ದು, ನಿನ್ನೆ ಈ ಬೆಲೆ 16,10,200 ರೂ. ಆಗಿತ್ತು. ಇದರರ್ಥ ಇಂದು ನೂರು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ:
ಅಂದಹಾಗೆ ಆಭರಣ ಚಿನ್ನವಾದ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 14,810 ರೂ. ಆಗಿದೆ. ನಿನ್ನೆ ಈ ಬೆಲೆ 14,760 ಆಗಿದ್ದು, ನಿನ್ನೆಗಿಂತ 50 ರೂ. ಏರಿಕೆ ನೋಡಿದೆ. 10 ಗ್ರಾಂ ಬೆಲೆಯು ₹1,48,100 ಆಗಿದ್ದು, ನಿನ್ನೆ ಇದು 1,47,600 ಆಗಿತ್ತು. ಇಂದು ಬರೋಬ್ಬರಿ 500 ರೂ. ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಇಂದು 14,81,000 ಆಗಿದ್ದು, ನಿನ್ನೆ 14,76,000 ಆಗಿತ್ತು. ಇದರರ್ಥ ಇಂದು 5,000 ರೂ. ಏರಿಕೆ ನೋಡಿದೆ.
18 ಕ್ಯಾರೆಟ್ ಚಿನ್ನದ ಬೆಲೆ:
ಇನ್ನು ಬೆಂಗಳೂರಿನಲ್ಲಿ ಇಂದು 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 12,118 ರೂ. ಆಗಿದೆ. ಇದು ನಿನ್ನೆ 12,077 ಆಗಿದ್ದು, ಇಂದಿಗೆ ಬರೋಬ್ಬರಿ 41 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯು ಇಂದು 1,21,180 ರೂ.ಗೆ ತಲುಪಿದ್ದು, ನಿನ್ನೆ 1,20,770 ಆಗಿತ್ತು. ಇದರರ್ಥ ಇಂದು ಬರೋಬ್ಬರಿ 410 ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆಯು 12,11,800 ರೂ. ಆಗಿದ್ದು ನಿನ್ನೆಗಿಂತ 4,100 ರೂ. ಏರಿಕೆ ನೋಡಿದೆ.
ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ:
ಅಂದಹಾಗೆ ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯು ಕೊಂಚ ನಿರಾಳತೆ ನೀಡಿದೆ. ಇಂದಿನ ಬೆಲೆಯಲ್ಲಿ ಇಳಿಕೆಯಾಗದಿದ್ದರೂ ಏರಿಕೆಯಂತೂ ಆಗಿಲ್ಲ. ಅಂದರೆ ಇಂದಿನ ಬೆಲೆ ಸ್ಥಿರವಾಗಿದೆ. 1 ಗ್ರಾಂ ಬೆಳ್ಳಿ ಬೆಲೆ 285 ರೂ, 10 ಗ್ರಾಂ ಬೆಳ್ಳಿ ಬೆಲೆ 2,850 ರೂ. ಹಾಗೂ 100 ಗ್ರಾಂ ಬೆಳ್ಳಿ ಬೆಲೆ 28,500 ರೂ. ಒಂದು ಕೆ.ಜಿ ಬೆಳ್ಳಿ ಬೆಲೆ 2,85,000 ರೂ. ಆಗಿದ್ದು ಇದು ನೆನ್ನೆಯಷ್ಟೇ ಸ್ಥಿರವಾಗಿದೆ.
ಸ್ಪಾಟ್ ಚಿನ್ನದ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಫೆಬ್ರವರಿ 27 ಶುಕ್ರವಾರದಂದು, 0301 ಜಿಎಂಟಿ ವೇಳೆಗೆ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 5,184.69 ಡಾಲರ್ ಮಟ್ಟದಲ್ಲಿ ಸ್ಥಿರವಾಗಿತ್ತು. ಅಮೆರಿಕದ ಸುಂಕ ನೀತಿಗಳ ಅನಿಶ್ಚಿತತೆ ಮತ್ತು ಅಮೆರಿಕಾ-ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗಳಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಚಿನ್ನವನ್ನು ಆರಿಸಿಕೊಂಡ ಹಿನ್ನೆಲೆಯಲ್ಲಿ, ಫೆಬ್ರವರಿಯಲ್ಲಿ ಚಿನ್ನದ ಬೆಲೆ 6% ಕ್ಕಿಂತ ಹೆಚ್ಚು ಏರಿಕೆಯಾಯಿತು.
ಒಟ್ಟಿನಲ್ಲಿ ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಅನಿಶ್ಚಿತತೆಗಳು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುವಂತೆ ಮಾಡಿವೆ. ವಿಶೇಷವಾಗಿ ಅಮೆರಿಕದ ಸುಂಕ ನೀತಿಗಳ ಬಗ್ಗೆ ಉಂಟಾದ ಗೊಂದಲ ಮತ್ತು ಅಮೆರಿಕಾ-ಇರಾನ್ ನಡುವಿನ ಉದ್ವಿಗ್ನತೆಯ ಪರಿಣಾಮವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಇದರಿಂದ ಫೆಬ್ರವರಿ ತಿಂಗಳಲ್ಲಿ ಚಿನ್ನದ ದರದಲ್ಲಿ 6 ಶೇಕಡಕ್ಕಿಂತ ಹೆಚ್ಚು ಏರಿಕೆ ದಾಖಲಾಗಿದೆ.
ಮುಂದಿನ ದಿನಗಳಲ್ಲಿ ಜಾಗತಿಕ ಪರಿಸ್ಥಿತಿ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಮೇಲೆ ಚಿನ್ನದ ಬೆಲೆಗಳ ದಿಕ್ಕು ಅವಲಂಬಿತವಾಗಿರಲಿದೆ. ಹೂಡಿಕೆ ಮಾಡುವವರು ಮಾರುಕಟ್ಟೆ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವುದು ಸೂಕ್ತ.


Click it and Unblock the Notifications