Bengaluru Gold Rate: ನಿನ್ನೆ ಭಾರಿ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ದಿಢೀರ್‌ ಏರಿಕೆ...ಬೆಂಗಳೂರಲ್ಲಿ ಎಷ್ಟು ರೇಟ್?

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಯಾವ ಪರಿ ಏರಿಕೆಯಾಗಿದೆ ಎಂದರೆ, ನಿಜಕ್ಕೂ ಬೇಜಾರಾಗುತ್ತೆ. ಏಕೆಂದರೆ ನಿನ್ನೆ ತಾನೆ ಊಹಿಸಲಾಗದಷ್ಟು ಇಳಿಕೆ ನೋಡಿದ್ದ ಬಂಗಾರದ ಬೆಲೆ, ಇಂದು ಇನ್ನೂ ಕಡಿಮೆಯಾಗಬಹುದೆಂಬ ಭಾವನೆ ಮೂಡಿಸಿತ್ತು. ಖರೀದಿದಾರರು ಇನ್ನಷ್ಟು ಕಡಿಮೆಯಾದ ಬಳಿಕ ಕೊಳ್ಳೋಣ ಎಂದು ಕಾದು ಕುಳಿತಿದ್ದರೇನೋ.. ಆದ್ರೆ ಅಷ್ಟರಲ್ಲಾಗಲೇ ಚಿನ್ನದ ಬೆಲೆ ದುಬಾರಿಯಾಗಿದೆ. ನಿನ್ನೆ ಒಂದೇ ದಿನ 24 ಕ್ಯಾರೆಟ್‌ ಚಿನ್ನದ ಬೆಲೆ (100 ಗ್ರಾಂ), 24,600 ರೂ. ಇಳಿಕೆ ನೋಡಿತ್ತು. ಇನ್ನೇನು ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋ ಅಷ್ಟರಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿ ಹಿಡಿದಿದೆ. ಆದ್ರೂ ನಿನ್ನೆಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯ ಏರಿಕೆ ಅಷ್ಟೊಂದು ಅಗಾಧ ಎನ್ನಿಸುವುದಿಲ್ಲ. ಏಕೆಂದರೆ ಇಂದು 24 ಕ್ಯಾರೆಟ್‌ ಚಿನ್ನದ ಬೆಲೆ (100 ಗ್ರಾಂ) ರೂ.7,600 ಹೆಚ್ಚಾಗಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ. ಕೊಳ್ಳುವವರಿಗೆ ಎಷ್ಟು ಸೂಕ್ತ ಎಂದು ತಿಳಿಯಿರಿ.

ಮತ್ತೆ ಏರಿದ ಚಿನ್ನದ ಬೆಲೆ: ಬೆಂಗಳೂರಲ್ಲಿ ಎಷ್ಟು?

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ:

ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ.12,158 ಆಗಿದ್ದು, ನಿನ್ನೆ ಅದು ರೂ.12,082 ಆಗಿತ್ತು. ಅಂದರೆ ಪ್ರತಿ ಗ್ರಾಂಗೆ ರೂ.76 ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,21,580 ಆಗಿದ್ದು, ನಿನ್ನೆ ರೂ.1,20,820 ಆಗಿತ್ತು, ಇದು ರೂ.760 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ರೂ.12,15,800 ಆಗಿದ್ದು, ನಿನ್ನೆ ರೂ.12,08,200 ಆಗಿತ್ತು, ಅಂದರೆ ರೂ.7,600 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ:

ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ.11,145 ಆಗಿದ್ದು, ನಿನ್ನೆ ರೂ.11,075 ಆಗಿತ್ತು. ಅಂದರೆ ಪ್ರತಿ ಗ್ರಾಂಗೆ ರೂ.70 ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ.1,11,450 ಆಗಿದ್ದು, ನಿನ್ನೆ ರೂ.1,10,750 ಆಗಿತ್ತು, ಇದು ರೂ.700 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ರೂ.11,14,500 ಆಗಿದ್ದು, ನಿನ್ನೆ ರೂ.11,07,500 ಆಗಿತ್ತು, ಅಂದರೆ ರೂ.7,000 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನ:

ಇಂದಿನ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ.9,119 ಆಗಿದ್ದು, ನಿನ್ನೆ ರೂ.9,062 ಆಗಿತ್ತು. ಅಂದರೆ ಪ್ರತಿ ಗ್ರಾಂಗೆ ರೂ.57 ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ.91,190 ಆಗಿದ್ದು, ನಿನ್ನೆ ರೂ.90,620 ಆಗಿತ್ತು, ಇದು ರೂ.570 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ರೂ.9,11,900 ಆಗಿದ್ದು, ನಿನ್ನೆ ರೂ.9,06,200 ಆಗಿತ್ತು, ಅಂದರೆ ರೂ.5,700 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:

ಇಂದಿನ (29 ಅಕ್ಟೋಬರ್ 2025) ಬೆಂಗಳೂರಿನ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ಬೆಳ್ಳಿಯ ಬೆಲೆ ರೂ.152 ಆಗಿದ್ದು, ನಿನ್ನೆಯೂ ಇದೇ ದರ ಮುಂದುವರಿದಿತ್ತು. 8 ಗ್ರಾಂ ಬೆಳ್ಳಿಯ ಬೆಲೆ ರೂ.1,216 ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. 10 ಗ್ರಾಂ ಬೆಳ್ಳಿಯ ದರ ರೂ.1,520 ಆಗಿದ್ದು, ನಿನ್ನೆಯೂ ಇದೇ ದರದಲ್ಲಿತ್ತು. 100 ಗ್ರಾಂ ಬೆಳ್ಳಿಯ ಬೆಲೆ ರೂ.15,200 ಆಗಿದ್ದು, ನಿನ್ನೆಯೂ ಅದೇ ದರ ಉಳಿದಿತ್ತು. ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಬಯಸುವವರಿಗಾಗಿ 1000 ಗ್ರಾಂ (1 ಕಿಲೋ) ಬೆಳ್ಳಿಯ ಬೆಲೆ ರೂ.1,52,000 ಆಗಿದ್ದು, ನಿನ್ನೆಯೂ ಇದೇ ದರದಲ್ಲಿತ್ತು.

ಸ್ಪಾಟ್ ಗೋಲ್ಡ್‌ ವಿವರ:

ಅಕ್ಟೋಬರ್ 29 ರಂದು ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,957.42 ಕ್ಕೆ ಏರಿಕೆಯಾದಂತೆ ಕಾಣುತ್ತಿದೆ, ಇದು 0.2% ಹೆಚ್ಚಳವಾಗಿದ್ದು, GMT ಪ್ರಕಾರ ಬೆಳಿಗ್ಗೆ 02:57 ಕ್ಕೆ ದಾಖಲಾಗಿತ್ತು. ಮಂಗಳವಾರ ಬೆಲೆ ಅಕ್ಟೋಬರ್ 7 ನ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಈ ಏರಿಕೆ ಮಾರುಕಟ್ಟೆಯಲ್ಲಿ ಚಿನ್ನದ ಸ್ಥಿರತೆ ಮತ್ತು ಖರೀದಿದಾರರ ಆಸಕ್ತಿಯ ಪರಿಣಾಮವೆಂದು ಪರಿಗಣಿಸಲಾಗಿದೆ.

ಒಟ್ಟಾರೆ ಇಂದು ಬೆಂಗಳೂರಿನ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಬದಲಾವಣೆ, ಅಮೆರಿಕನ್ ಡಾಲರ್‌ನ ಮೌಲ್ಯ, ಮತ್ತು ಸ್ಥಳೀಯ ಹಬ್ಬದ ಖರೀದಿ ವಾತಾವರಣದ ಪರಿಣಾಮದಿಂದ ಈ ಬದಲಾವಣೆ ಸಂಭವಿಸಿದೆ. ಹೂಡಿಕೆದಾರರು ಮತ್ತು ಗ್ರಾಹಕರು ತಮ್ಮ ಖರೀದಿಗೆ ಮುನ್ನ ಪ್ರತಿ ದಿನದ ದರಗಳನ್ನು ಪರಿಶೀಲಿಸುವುದು ಸೂಕ್ತ. ಚಿನ್ನವು ದೀರ್ಘಕಾಲದ ಸುರಕ್ಷಿತ ಹೂಡಿಕೆ ಆಯ್ಕೆಯಾಗಿರುವುದರಿಂದ, ಇಂದಿನ ದರದ ಈ ಸಣ್ಣ ಏರಿಕೆ ಸಹ ಮಾರುಕಟ್ಟೆಯ ಚೈತನ್ಯವನ್ನು ತೋರಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+