ಬೆಂಗಳೂರು ನಗರದಲ್ಲಿ ಚಿನ್ನ ಯಾವಾಗಲೂ ಹೂಡಿಕೆದಾರರಿಗೂ, ಆಭರಣ ಪ್ರಿಯರಿಗೂ ಸಮಾನವಾಗಿ ಆಕರ್ಷಣೆಯ ಕೇಂದ್ರವಾಗಿದೆ. ಜಾಗತಿಕ ಮಾರುಕಟ್ಟೆಯ ಬೆಲೆ ಏರಿಳಿತಗಳು, ಭಾರತೀಯ ರೂಪಾಯಿ ಮತ್ತು ಡಾಲರ್ ವಿನಿಮಯ ದರ, ಅಂತಾರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಗಳು ಹಾಗೂ ಹೂಡಿಕೆದಾರರ ಬೇಡಿಕೆ ಎಲ್ಲವೂ, ಚಿನ್ನದ ಬೆಲೆಯಲ್ಲಿ ನೇರವಾಗಿ ಪರಿಣಾಮ ಬೀರುತ್ತವೆ.

ವಿಶೇಷವಾಗಿ ಬೆಂಗಳೂರು ನಗರದಂತಹ ಮೆಟ್ರೋಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿರುವುದರಿಂದ ಪ್ರತಿದಿನದ ದರ ಬದಲಾವಣೆಗಳನ್ನು ಹಲವರು ಗಮನಿಸುತ್ತಾರೆ. ಇಂದಿನ ದರದಲ್ಲೂ ಸ್ವಲ್ಪ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರದಲ್ಲಿ ಹೋಲಿಕೆಯಾಗಿ ಹೆಚ್ಚಳ ದಾಖಲಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (ಬೆಂಗಳೂರು):
ಅತ್ಯಂತ ಶುದ್ಧತೆಯನ್ನು ಹೊಂದಿರುವ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಸ್ವಲ್ಪ ಏರಿಕೆಯಾಗಿದೆ. 1 ಗ್ರಾಂ ದರ ರೂ.10,609 ಆಗಿದ್ದು, ಇದು ನಿನ್ನೆಗಿಂತ ರೂ.21 ಹೆಚ್ಚು. 10 ಗ್ರಾಂ ಚಿನ್ನದ ದರ ರೂ.1,06,090 ಆಗಿದ್ದು, ನಿನ್ನೆಗಿನ ಬೆಲೆಗೆ ಹೋಲಿಸಿದರೆ ರೂ.210 ಏರಿಕೆಯಾಗಿದೆ. ಹೂಡಿಕೆಗಾಗಿ ಹೆಚ್ಚು ಬೇಡಿಕೆ ಹೊಂದಿರುವ 100 ಗ್ರಾಂ ಚಿನ್ನದ ಬೆಲೆ ರೂ.10,60,900 ತಲುಪಿದ್ದು, ನಿನ್ನೆಗಿಂತ ರೂ.2,100 ಹೆಚ್ಚಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ (ಬೆಂಗಳೂರು):
ಆಭರಣ ತಯಾರಿಕೆಯಲ್ಲಿ ಸಾಮಾನ್ಯವಾಗಿ ಬಳಸುವ 22 ಕ್ಯಾರೆಟ್ ಚಿನ್ನವೂ ಇಂದು ಏರಿಕೆ ದಾಖಲಿಸಿದೆ. 1 ಗ್ರಾಂ ಚಿನ್ನದ ದರ ರೂ.9,725 ಆಗಿದ್ದು, ನಿನ್ನೆಗಿಂತ ರೂ.20 ಹೆಚ್ಚಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ.97,250 ತಲುಪಿದೆ, ಇದು ರೂ.200 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ರೂ.9,72,500 ಆಗಿದ್ದು, ನಿನ್ನೆಗಿಂತ ರೂ.2,000 ಹೆಚ್ಚಳ ಕಂಡಿದೆ.
18 ಕ್ಯಾರೆಟ್ ಚಿನ್ನದ ಬೆಲೆ (ಬೆಂಗಳೂರು):
ಹೂಡಿಕೆಗಿಂತ ಹೆಚ್ಚು ಆಭರಣ ಬಳಕೆಗೆ ಹೊಂದುವ 18 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆ ದಾಖಲಾಗಿದೆ. 1 ಗ್ರಾಂ ಚಿನ್ನದ ಬೆಲೆ ರೂ.7,957 ಆಗಿದ್ದು, ಇದು ನಿನ್ನೆಗಿಂತ ರೂ.16 ಹೆಚ್ಚು. 10 ಗ್ರಾಂ ಚಿನ್ನದ ದರ ರೂ.79,570 ತಲುಪಿದೆ, ಇದು ರೂ.160 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ರೂ.7,95,700 ಆಗಿದ್ದು, ನಿನ್ನೆಗಿಂತ ರೂ.1,600 ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ:
ಇಂದು ಬೆಳ್ಳಿಯ ದರದಲ್ಲಿ ಸ್ವಲ್ಪ ಏರಿಕೆ ದಾಖಲಾಗಿದೆ. ಪ್ರತಿ ಗ್ರಾಂ ಬೆಲೆ ₹126.10 ಆಗಿದ್ದು, ನಿನ್ನೆಗಿಂತ 10 ಪೈಸೆ ಹೆಚ್ಚಾಗಿದೆ. 8 ಗ್ರಾಂ ಬೆಲೆ ₹1,008.80 ಆಗಿ ₹0.80 ಏರಿಕೆ ಕಂಡಿದೆ. 10 ಗ್ರಾಂ ಬೆಳ್ಳಿಯ ದರ ₹1,261 ತಲುಪಿದ್ದು, ನಿನ್ನೆಗಿಂತ ₹1 ಹೆಚ್ಚಾಗಿದೆ. 100 ಗ್ರಾಂ ಬೆಲೆ ₹12,610 ಆಗಿ ₹10 ಏರಿಕೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ, 1 ಕಿಲೋ ಬೆಳ್ಳಿಯ ದರ ₹1,26,100 ದಾಖಲಾಗಿದ್ದು, ನಿನ್ನೆಗಿಂತ ₹100 ಹೆಚ್ಚಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಸೆಪ್ಟೆಂಬರ್ 2ರಂದು ಸ್ಪಾಟ್ ಗೋಲ್ಡ್ ಬೆಲೆ ಪ್ರತಿ ಔನ್ಸ್‌ಗೆ ಸುಮಾರು 3,493.99 ಡಾಲರ್ ಮಟ್ಟದಲ್ಲಿ ವಹಿವಾಟು ಕಂಡುಬಂದಿದೆ. ಇದರಲ್ಲಿ ಸುಮಾರು 0.5% ಏರಿಕೆ ದಾಲಾಗಿದೆ.
ಒಟ್ಟಾರೆ, ಬೆಂಗಳೂರಿನಲ್ಲಿ ಇಂದು ಎಲ್ಲಾ ಕ್ಯಾರೆಟ್‌ಗಳ ಚಿನ್ನದ ಬೆಲೆ ಏರಿಕೆಯಾಗಿದೆ. ವಿಶೇಷವಾಗಿ 24 ಕ್ಯಾರೆಟ್ ಶುದ್ಧ ಚಿನ್ನದಲ್ಲಿ ದೊಡ್ಡ ಏರಿಕೆ ಕಾಣಿಸಿಕೊಂಡಿದೆ. ಜಾಗತಿಕ ಮಾರುಕಟ್ಟೆಯ ಒತ್ತಡ, ಕರೆನ್ಸಿ ಬದಲಾವಣೆ ಹಾಗೂ ಸ್ಥಳೀಯ ಬೇಡಿಕೆಯ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ದರದಲ್ಲಿ ಮತ್ತಷ್ಟು ಏರಿಳಿತಗಳಾಗುವ ಸಾಧ್ಯತೆ ಇದೆ. ಹೂಡಿಕೆ ಮಾಡಲು ಬಯಸುವವರು ದರದ ಸ್ಥಿತಿ-ಗತಿಗಳನ್ನು ಗಮನಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.
ಆಭರಣ ಖರೀದಿಸಲು ಯೋಚಿಸುತ್ತಿರುವವರು ಬೆಲೆ ಏರಿಕೆಯನ್ನು ಮನೆಯಲ್ಲಿ ಇಟ್ಟುಕೊಂಡು ಮುಂದಿನ ಖರೀದಿ ದಿನಾಂಕವನ್ನು ನಿರ್ಧರಿಸಬಹುದು. ಚಿನ್ನ ಯಾವಾಗಲೂ ಸುರಕ್ಷಿತ ಹೂಡಿಕೆ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಪ್ರಸ್ತುತ ಏರಿಕೆ ಹೂಡಿಕೆದಾರರಲ್ಲಿ ಹೆಚ್ಚು ಎಚ್ಚರಿಕೆಯ ಅಗತ್ಯವಿದೆ.


Click it and Unblock the Notifications