For Quick Alerts
ALLOW NOTIFICATIONS  
For Daily Alerts

ಕುಸಿತದ ಬಳಿಕ ಇಂದು ಏರಿಕೆ ಕಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ ಹೆಚ್ಚಳ

|

ಕಳೆದ ವಹಿವಾಟಿನಲ್ಲಿ ತೀವ್ರ ಕುಸಿತದ ನಂತರ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು(Gold Futures) ಪ್ರತಿ ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆ ಕಂಡು, 51,532 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ ಶೇ. 0.6ರಷ್ಟು ಏರಿಕೆ ಕಂಡು, 68,350 ರೂಪಾಯಿಗೆ ತಲುಪಿದೆ.

ಹಿಂದಿನ ವಹಿವಾಟಿನಲ್ಲಿ, ಚಿನ್ನದ ಭವಿಷ್ಯವು ಶೇ. 1 ಅಥವಾ ಸುಮಾರು 500 ರೂಪಾಯಿ ಕುಸಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇ. 1.5 ಅಥವಾ 1050 ರೂ. ಕುಸಿದಿದೆ. ಕಳೆದ ತಿಂಗಳು ದಾಖಲೆಯ ಗರಿಷ್ಠ 56,200 ರೂಪಾಯಿ ಗಳಿಸಿದ ನಂತರ ಚಿನ್ನವು ಒಂದೇ ಶ್ರೇಣಿಯಲ್ಲಿ ವಹಿವಾಟು ನಡೆಸಿದೆ.

ಕುಸಿತದ ಬಳಿಕ ಇಂದು ಏರಿಕೆ ಕಂಡ ಚಿನ್ನದ ಬೆಲೆ

ಜಾಗತಿಕ ಮಾರುಕಟ್ಟೆಗಳಲ್ಲಿ, ಸಂಭಾವ್ಯ ಕೋವಿಡ್ ಲಸಿಕೆಯ ಸುತ್ತಲಿನ ಆಶಾವಾದವು ದೂರದಲ್ಲಿರುವುದು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ 1,941.11 ಡಾಲರ್‌ರಷ್ಟಿತ್ತು. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇ. 0.3ರಷ್ಟು ಕುಸಿದು, 26.68 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇ. 0.4 ನಷ್ಟು ಹೆಚ್ಚಳವಾಗಿ 928.61 ಡಾಲರ್‌ಗೆ ತಲುಪಿದೆ.

ಸೆಪ್ಟೆಂಬರ್ 15-16ರಂದು ನಡೆಯಲಿರುವ ಅಮೆರಿಕಾ ಸೆಂಟ್ರಲ್ ಬ್ಯಾಂಕಿನ ಎರಡು ದಿನಗಳ ನೀತಿ ಸಭೆಯತ್ತ ಚಿನ್ನದ ವ್ಯಾಪಾರಿಗಳು ಗಮನ ಹರಿಸಲಿದ್ದಾರೆ.

English summary

Gold Price Up And Silver Rate Move Higher Today

Gold and silver prices in India edged higher today after a sharp fall in the previous session. On MCX, gold futures rose 0.4% to Rs 51,532 per 10 gram while silver futures gained 0.6% to Rs 68,350 per kg.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X