Gold Price: ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ, ಹಳದಿ ಲೋಹ ಖರೀದಿಗೆ ಉತ್ತಮ ಸಮಯವೇ?

ಚಿನ್ನದ ಬೆಲೆಯು ಸಾರ್ವಕಾಲಿಕವಾಗಿ ಏರಿಕೆಯನ್ನು ಕಾಣುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ದೇಶೀಯವಾಗಿ ಚಿನ್ನವು ದುಬಾರಿಯಾಗುತ್ತಾ ಸಾಗುತ್ತಿದೆ. ಇತ್ತೀಚಿಗಷ್ಟೇ ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಸಾರ್ವಕಾಲಿಕವಾಗಿ ಏರಿಕೆಯನ್ನು ಕಂಡಿತ್ತು. ಈಗ ಮತ್ತೆ ದರವು ಸಾರ್ವಕಾಲಿಕ ಜಿಗಿತವನ್ನು ಕಂಡಿದೆ. ಭಾರತದಲ್ಲಿಯೂ ದರ ಏರಿಕೆಯಾಗಿದೆ.

ಗುರುವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರವು ಭಾರೀ ಜಿಗಿತವನ್ನು ಕಂಡಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ಸ್ ಗುರುವಾರ 10 ಗ್ರಾಂ ಏರಿಕೆಯಾಗಿ, 61,490 ರೂಪಾಯಿಗೆ ತಲುಪಿದೆ. ಶುಕ್ರವಾರ ಮತ್ತೆ ಸಾರ್ವಕಾಲಿಕ ಏರಿಕೆ ಕಂಡಿದೆ. ಯುಎಸ್‌ ಫೆಡರಲ್ ರಿಸರ್ವ್‌ ಬಡ್ಡಿದರ ಏರಿಕೆಯನ್ನು ನಿಲ್ಲಿಸುವ ಸುಳಿವನ್ನು ನೀಡುತ್ತಿದ್ದಂತೆ ಡಾಲರ್ ಮೌಲ್ಯದಲ್ಲಿ ಬದಲಾವಣೆ ಕಂಡು ಬಂದಿದೆ. ಈ ಬೆನ್ನಲ್ಲೇ ಚಿನ್ನದ ದರವು ಏರಿಕೆಯಾಗಿದೆ.

 ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ, ಖರೀದಿಸಬಹುದೇ?

ಗುರುವಾರ 11:15ರ ಸಮಯಕ್ಕೆ ಎಂಸಿಎಕ್ಸ್‌ನಲ್ಲಿ ಜೂನ್ ಗೋಲ್ಡ್ ಪ್ಯೂಚರ್ಸ್ 432 ರೂಪಾಯಿ ಅಥವಾ ಶೇಕಡ 0.71ರಷ್ಟು ಏರಿಕೆಯಾಗಿ, ಪ್ರತಿ ಹತ್ತು ಗ್ರಾಂ ಗೆ 61,397 ರೂಪಾಯಿಗೆ ತಲುಪಿದೆ. ಇದೇ ಸಂದರ್ಭದಲ್ಲಿ ಜುಲೈ ಸಿಲ್ವರ್ ಫ್ಯೂಚರ್ಸ್ ಶೇಕಡ 1.13ರಷ್ಟು ಅಥವಾ 868 ರೂಪಾಯಿ ಏರಿಕೆಯಾಗಿ 77,450 ರೂಪಾಯಿಗೆ ವಹಿವಾಟು ನಡೆಸಿದೆ. ಇನ್ನು ಗುರುವಾರ ಅಂತಾರಾಷ್ಟ್ರೀಯ ಚಿನ್ನದ ದರವು ಕೂಡಾ ಸಾರ್ವಕಾಲಿಕ ಏರಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಕ್ಸಿಸ್ ಸೆಕ್ಯೂರಿಟೀಸ್‌ನ ರಿಸರ್ಚ್ ಅನಲಿಸ್ಟ್ ದೇವೆಯ ಗಗ್ಲಾನಿ, "ಯುಎಸ್ ಫೆಡರಲ್ ಮುಂದಿನ ಸಭೆಯಲ್ಲಿ ಬಡ್ಡಿದರವನ್ನು ಏರಿಕೆ ಮಾಡುವುದಿಲ್ಲ ಎಂಬ ಸುಳಿವು ನೀಡಿದೆ. ಇದಾದ ಬೆನ್ನಲ್ಲೇ ಡಾಲರ್ ಸೂಚ್ಯಂಕವು ಇಳಿಕೆಯನ್ನು ಕಂಡಿದೆ. 101 ಡಾಲರ್‌ ಮಟ್ಟಕ್ಕೆ ಇಳಿಕೆಯಾಗಿದೆ. ಇದು ಚಿನ್ನದ ಬೆಲೆಯನ್ನು ಪ್ರಬಲಗೊಳಿಸಿದೆ. ಚಿನ್ನದ ಬೆಲೆಯು ಈಗ ಅಧಿಕವಾಗುತ್ತಿದೆ," ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಚಿನ್ನದ ಬೆಲೆಯ ಮೇಲೆ ಡಾಲರ್ ಮೌಲ್ಯವು ಪ್ರಭಾವ ಬೀಳುತ್ತದೆ ಎಂಬುವುದು ನಾವು ತಿಳಿದಿರಬೇಕಾದ ವಿಚಾರ. ಡಾಲರ್ ಹಾಗೂ ಚಿನ್ನವು ಪರಸ್ಪರ ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತದೆ. ಅಂದರೆ ಡಾಲರ್ ಮೌಲ್ಯವು ಇಳಿಕೆಯಾದಾಗ ಚಿನ್ನದ ಮೌಲ್ಯವು ಏರಿಕೆಯಾಗುತ್ತದೆ. ಡಾಲರ್ ಮೌಲ್ಯವು ಏರಿಕೆಯಾದಾಗ ಚಿನ್ನದ ಮೌಲ್ಯವು ಇಳಿಕೆಯಾಗುತ್ತದೆ. ಇನ್ನು ಚಿನ್ನದ ಮೇಲೆ ಸ್ಥಳೀಯ ಅಂಶಗಳು ಕೂಡಾ ಪ್ರಭಾವ ಉಂಟು ಮಾಡುತ್ತದೆ.

ಅಂತಾರಾಷ್ಟ್ರೀಯ ಹಳದಿ ಲೋಹ ಮಾರುಕಟ್ಟೆಯಲ್ಲಿ ಈ ಸಮಯದ ದರ

ಈ ನಡುವೆ ಕೊನೆಯ ಮೇ 5ರಂದು ಈ ಸಮಯಕ್ಕೆ (12:59) ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 61500.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 78249.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.36ರಷ್ಟು ಕುಗ್ಗಿದ್ದು 2,042.48 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.25ರಷ್ಟು ಇಳಿಕೆಯಾಗಿದ್ದು 26 ಯುಎಸ್ ಡಾಲರ್ ಆಗಿದೆ.

ಈ ಹಿಂದೆ ಏಪ್ರಿಲ್ ತಿಂಗಳಿನಲ್ಲೂ ಎಂಸಿಎಕ್ಸ್‌ನಲ್ಲಿ ಗೋಲ್ಡ್ ರೇಟ್ ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ. ಏಪ್ರಿಲ್ 5ರಂದು ಜಾಗತಿಕ ಮಾರುಕಟ್ಟೆಯಲ್ಲಿ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) 10 ಗ್ರಾಂ ಚಿನ್ನದ ಬೆಲೆಯು ಸಾರ್ವಕಾಲಿಕ ಏರಿಕೆ ಕಂಡಿದ್ದು, 61,145 ರೂಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು 13ನೇ ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಇನ್ನೊಂದೆಡೆ ಬೆಳ್ಳಿ ದರವು ಕೂಡಾ ಏರಿಕೆ ಕಂಡಿದೆ. ಬೆಳ್ಳಿ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 12 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದರೆ, ಎಂಸಿಎಕ್ಸ್‌ನಲ್ಲಿ 22 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+