ಭಾರತದಲ್ಲಿ ಹಬ್ಬದ ಸೀಸನ್ ಸಮೀಪವಾಗುತ್ತಿದೆ. ಆದರೆ ಈ ಸಂದರ್ಭದಲ್ಲೇ ಡಾಲರ್ ಎದುರು ಭಾರತೀಯ ರೂಪಾಯಿ ದುರ್ಬಲವಾಗುತ್ತಿದೆ. ಈ ಸಂದರ್ಭದಲ್ಲಿ ಚಿನ್ನದ ಖರೀದಿ ಮಾಡಿ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಿ ಅದರ ಲಾಭವನ್ನು ಪಡೆಯಿರಿ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ವಿಪಿ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೂಡಿಕೆದಾರರಿಗೆ ತಿಳಿಸಿದ್ದಾರೆ.
ಮುಂಬರುವ ಹಬ್ಬದ ಸೀಸನ್‌ನಲ್ಲಿ ಚಿನ್ನದ ಬೆಲೆಯು (https://kannada.goodreturns.in/gold-rates/) ಸ್ಥಿರವಾಗಿರುತ್ತದೆ ಎಂದು ಜತೀನ್ ತ್ರಿವೇದಿ ನಿರೀಕ್ಷಿಸುತ್ತಾರೆ. 2023 ರ ಅಂತ್ಯದ ವೇಳೆಗೆ 61000 ರಿಂದ 62000 ರ ನಡುವೆ ಚಿನ್ನದ ಫ್ಯೂಚರ್ ಪ್ರೈಸ್ ಇರಲಿದ್ದು, 58500 ರಿಂದ 57000 ವರೆಗೆ ಚಿನ್ನದ ದರ ಇರಲಿದೆ ಎಂದು ವಿಶ್ಲೇಷಕ ಜತೀನ್ ತ್ರಿವೇದಿ ನಿರೀಕ್ಷೆಯಾಗಿದೆ.

"ಡಾಲರ್ ವಿರುದ್ಧ ರೂಪಾಯಿ ದುರ್ಬಲವಾಗಿದೆ. ಈ ನಡುವೆ ಭಾರತದಲ್ಲಿ ಹಬ್ಬದ ಸೀಸನ್ ಆರಂಭವಾಗುತ್ತಿದೆ. ಈ ವೇಳೆ ಹೂಡಿಕೆದಾರರು ಚಿನ್ನದ ಹೂಡಿಕೆ ಲಾಭ ಪಡೆಯಬೇಕು. ಭಾರತದಲ್ಲಿ ಹಬ್ಬದ ಬೇಡಿಕೆಯ ನಡುವೆ ಚಿನ್ನದ ಬೆಲೆಯು ಸ್ಥಿರವಾಗಿರುವ ಸಾಧ್ಯತೆಯಿದೆ. ಚಿನ್ನ ಖರೀದಿ ಮಾಡಲು ಬಯಸುವ ಹೂಡಿಕೆದಾರರಿಗೆ ಹಬ್ಬದ ಸೀಸನ್‌ನಲ್ಲಿ 58500ರಿಂದ 57000 ರ ನಡುವೆ ದರ ಇರಬಹುದು," ಎಂದು ಹೇಳಿದ್ದಾರೆ.
ಚಿನ್ನದ ಬೆಲೆ ಏರಿಕೆಯೇ, ಇಳಿಕೆಯೇ?
"ಜಾಗತಿಕ ಬೆಳವಣಿಗೆ, ಆರ್ಥಿಕ ಅನಿಶ್ಚಿತತೆಯನ್ನು ನಾವು ನೋಡಿದಾಗ, ಡಾಲರ್ ಮೌಲ್ಯ ಇನ್ನಷ್ಟು ಬಲಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಬಡ್ಡಿದರವು ಕೂಡಾ ಇನ್ನಷ್ಟು ಅಧಿಕವಾಗಬಹುದು. ಈ ನಡುವೆ ಚಿನ್ನದ ಬೆಲೆಯು ಗಣನೀಯವಾಗಿ ಏರಿಕೆಯಾಗದಿದ್ದರೂ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ. ಆದರೆ ದಿಢೀರ್ ಬದಲಾವಣೆಯೂ ಆಗಬಹದು. ಫೆಡರಲ್ ರಿಸರ್ವ್ ದರ ಏರಿಕೆ ಮಾಡಲ್ಲ, ಅಥವಾ ಬಡ್ಡಿದರ ಕಡಿತ ಮಾಡುತ್ತದೆ ಎಂಬ ಸುಳಿವು ಲಭ್ಯವಾದ ಕೂಡಲೇ ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ," ಎಂದು ಜತೀನ್ ತ್ರಿವೇದಿ ಅಭಿಪ್ರಾಯಿಸಿದ್ದಾರೆ.
ಹೂಡಿಕೆದಾರರು ಏನು ಮಾಡುವುದು?
"ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಹೂಡಿಕೆದಾರರು ಚಿನ್ನದ ಆಶಾವಾದಿ ದೃಷ್ಟಿಕೋನವನ್ನು ಯೋಜಿಸಿಕೊಳ್ಳಬಹುದು. ವರ್ಷದ ಅಂತ್ಯದ ವೇಳೆಗೆ 61000 ರಿಂದ 62000 ರ ವ್ಯಾಪ್ತಿಯಲ್ಲಿ ಚಿನ್ನದ ಬೆಲೆ ಇರುತ್ತದೆ. ಇದು ಹಬ್ಬದ ಸೀಸನ್ ನಡುವೆ ದುರ್ಬಲಗೊಳ್ಳುತ್ತಿರುವ ರೂಪಾಯಿ ಮತ್ತು ಎರಡಕ್ಕೂ ಹೊಂದಿಕೆಯಾಗುವ ಕಾರ್ಯತಂತ್ರದ ಕ್ರಮವಾಗಿದೆ," ಎಂದು ಜತೀನ್ ತ್ರಿವೇದಿ ಹೇಳುತ್ತಾರೆ.
ಒಂದು ವರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಏರಿಕೆ
ಕಳೆದ ವರ್ಷದಿಂದ ಈವರೆಗೆ ಹಣದುಬ್ಬರ ಏರಿಕೆ, ಆರ್ಥಿಕ ಹಿಂಜರಿತದ ಆತಂಕ, ಹೆಚ್ಚಿನ ಬಡ್ಡಿದರಗಳು ಮತ್ತು ಭೌಗೋಳಿಕ ರಾಜಕೀಯ ಒತ್ತಡದಂತಹ ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದಾಗಿ ಭಾರತದಲ್ಲಿ ಚಿನ್ನದ ಬೆಲೆಗಳು ಸುಮಾರು ಶೇಕಡ 14ರಷ್ಟು ಜಿಗಿತ ಕಂಡಿದೆ. ಬೆಳ್ಳಿ ಬೆಲೆಗಳು ಶೇಕಡ 21ರಷ್ಟು ಏರಿಕೆಯಾಗಿದೆ.
ಇಂದಿನ ಚಿನ್ನದ ದರ ಎಷ್ಟಿದೆ?
ಆಗಸ್ಟ್ 23ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು 54,200 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 59,130 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಸ್ಥಿರವಾಗಿದ್ದು ಪ್ರಸ್ತುತ 74,800 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 23ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58577.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 72362.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.24ರಷ್ಟು ಏರಿಕೆ ಕಂಡಿದ್ದು 1,903.25 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.69ರಷ್ಟು ಹಿಗ್ಗಿದ್ದು 23.59 ಯುಎಸ್ ಡಾಲರ್ ಆಗಿದೆ.


Click it and Unblock the Notifications