ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಹೆಚ್ಚಳಗೊಂಡಿದ್ದ ಹಳದಿ ಲೋಹದ ಬೆಲೆ ಶನಿವಾರ ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ 10 ಗ್ರಾಂಗೆ ಶೇಕಡಾ 0.49ರಷ್ಟು ಅಥವಾ 225 ರೂಪಾಯಿ ಇಳಿಕೆಗೊಂಡು 46,610 ರೂಪಾಯಿಗೆ ಇಳಿಯಿತು. ಆದರೆ ಕಳೆದ ಒಂದು ವಾರದಲ್ಲಿ ಸುಮಾರು 1,200 ರೂಪಾಯಿಯಷ್ಟು ಹೆಚ್ಚಾಗಿದೆ.
ಶುಕ್ರವಾರ ಡಾಲರ್ ಎದುರು ರೂಪಾಯಿ ಸತತ ಐದನೇ ದಿನ ಕುಸಿತ ಕಂಡಿತು. ಪರಿಣಾಮ ಚಿನ್ನದ ಬೆಲೆ ಏರಿಕೆಯನ್ನು ದಾಖಲಿಸಿತು. ಭಾರತವು ತನ್ನ ಹೆಚ್ಚಿನ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಬೆಲೆಗಳಲ್ಲಿ ಶೇಕಡಾ 10.75ರಷ್ಟು ಆಮದು ಸುಂಕ, ಶೇ.3ರಷ್ಟು ಜಿಎಸ್‌ಟಿ ಸೇರಿದೆ.

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.7ರಷ್ಟು ಅಥವಾ 1,744 ಡಾಲರ್‌ಗೆ ಕುಸಿದಿದೆ. ಇದಕ್ಕೂ ಮೊದಲು ವಾರದಲ್ಲಿ ಸುಮಾರು ಶೇಕಡಾ 1ರಷ್ಟು ಲಾಭದೊಂದಿಗೆ ಕೊನೆಗೊಳಿಸಿತು.
ಇನ್ನು ಭಾರತದಲ್ಲಿ ಚಿನ್ನದ ಇಟಿಎಫ್‌ಗಳು ಮಾರ್ಚ್‌ನಲ್ಲಿ 662 ಕೋಟಿ ರೂಪಾಯಿ ಒಳಹರಿವನ್ನು ಕಂಡಿದ್ದು, 2020-21ರ ಆರ್ಥಿಕ ವರ್ಷದಲ್ಲಿ ಚಿನ್ನದ ಇಟಿಎಫ್ ಒಳಹರಿವು ಒಟ್ಟಾರೆ 6,919 ಕೋಟಿ ರೂಪಾಯಿಯಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications