ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಇಳಿಮುಖಗೊಂಡಿದೆ. ಜಾಗತಿಕ ದುರ್ಬಲ ಸೂಚನೆಗಳ ಹಿನ್ನಲೆಯಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇ. 0.2ರಷ್ಟು ಇಳಿಕೆಗೊಂಡು 49,020 ಕ್ಕೆ ತಲುಪಿದೆ.
ಚಿನ್ನದ ಹೊರತಾಗಿ ಬೆಳ್ಲಿ ಬೆಲೆಯು ಶೇಕಡಾ 0.5ರಷ್ಟು ಇಳಿಕೆಗೊಂಡು ಪ್ರತಿ ಕೆಜಿಗೆ 71,507 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಳಿತಗೊಳ್ಳದೆ ಸಮವಾಗಿತ್ತು. ಬೆಳ್ಳಿ ಬೆಲೆಯು ಶೇಕಡಾ 0.9ರಷ್ಟು ಹೆಚ್ಚಾಗಿದೆ.

ಕಳೆದ ವಾರ ಚಿನ್ನವು 5 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿ 49,750 ರೂಪಾಯಿಗೆ ತಲುಪಿತ್ತು. ಅಂದಿನಿಂದ ದುರ್ಬಲ ಜಾಗತಿಕ ಸೂಚನೆಗಳ ನಡುವೆ ಚಿನ್ನವು ಸಾಕಷ್ಟು ಇಳಿಕೆಯತ್ತ ಮುಖಮಾಡಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿಕೆಯಾಗಿ 1,885.51 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.1ನಷ್ಟು ಇಳಿದು 27.73 ಡಾಲರ್‌ಗೆ ತಲುಪಿದ್ದರೆ, ಪ್ಲ್ಯಾಟಿನಂ ಶೇಕಡಾ 0.2ರಷ್ಟು ಕಡಿಮೆಯಾಗಿ 1,147.56 ಡಾಲರ್‌ಗೆ ತಲುಪಿದೆ.
ಇದರ ನಡುವೆ ಚಿನ್ನದ ಇಟಿಎಫ್‌ನ ಎಸ್‌ಪಿಡಿಆರ್ ಗೋಲ್ಡ್ ಟ್ರಸ್ಟ್‌ನ ಷೇರುಗಳು ಮಂಗಳವಾರ 1,037.33 ಟನ್‌ಗಳಿಂದ ಶೇಕಡಾ 0.6ರಷ್ಟು ಏರಿಕೆ ಕಂಡು 1,043.16 ಟನ್‌ಗಳಿಗೆ ತಲುಪಿದೆ. ಜೊತೆಗೆ ಭಾರತದಲ್ಲಿ, ಚಿನ್ನದ ಇಟಿಎಫ್‌ಗಳು ಕಳೆದ ತಿಂಗಳು 288 ಕೋಟಿ ರೂಪಾಯಿ ನಿವ್ವಳ ಒಳಹರಿವು ಕಂಡಿದ್ದು, ಏಪ್ರಿಲ್‌ನಲ್ಲಿ 680 ಕೋಟಿಗಳಷ್ಟಿತ್ತು.


Click it and Unblock the Notifications