ಸತತ 2ನೇ ದಿನ ಇಳಿಕೆ ಕಂಡ ಚಿನ್ನದ ಬೆಲೆ

ಸೋಮವಾರ ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆಯು ಸತತ ಎರಡನೇ ದಿನ ಕುಸಿತ ಕಂಡಿದೆ. ಎಂಸಿಎಕ್ಸ್‌ನಲ್ಲಿ, ಜೂನ್ ಚಿನ್ನದ ಭವಿಷ್ಯವು ಹಿಂದಿನ ಸೆಷನ್‌ನಲ್ಲಿ 0.70 ಪರ್ಸೆಂಟ್ ಕುಸಿದ ನಂತರ 10 ಗ್ರಾಂಗೆ 0.2 ಪರ್ಸೆಂಟ್ ಇಳಿಕೆಯಾಗಿ, 45,722 ರುಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 0.42 ಪರ್ಸೆಂಟ್ ಹೆಚ್ಚಳವಾಗಿ, 43,475 ರುಪಾಯಿಗೆ ತಲುಪಿದೆ.

ಸತತ 2ನೇ ದಿನ ಇಳಿಕೆ ಕಂಡ ಚಿನ್ನದ ಬೆಲೆ

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆ ಹೆಚ್ಚಾಗಿದ್ದು, ಪ್ರತಿ ಔನ್ಸ್‌ಗೆ 1,700 ಅಮೆರಿಕನ್ ಡಾಲರ್‌ಗೆ ಮುಟ್ಟಿದೆ. ಷೇರುಗಳ ಕುಸಿತ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದ ಹೊರತಾಗಿಯೂ, ಚಿನ್ನದ ಬೆಲೆ ಏರಿಕೆಯಾಗತೊಡಗಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ 0.2 ಪರ್ಸೆಂಟ್‌ ಏರಿಕೆಗೊಂಡು 1,704.26 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಪ್ಲಾಟಿನಂ 0.7 ಪರ್ಸೆಂಟ್ ಏರಿಕೆಯಾಗಿ 770.66 ಡಾಲರ್‌ಗೆ ತಲುಪಿದರೆ, ಬೆಳ್ಳಿ 0.4 ಪರ್ಸೆಂಟ್ ಏರಿಕೆಯಾಗಿ 15.51 ಡಾಲರ್‌ಗೆ ಹೆಚ್ಚಾಗಿದೆ.

ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಅಮೂಲ್ಯವಾದ ಹಳದಿ ಲೋಹದ ಮೇಲಿನ ಹೂಡಿಕೆಯು ಹೆಚ್ಚಾಗತೊಡಗಿದೆ. ಈ ವೇಳೆ ಪ್ರಸಕ್ತ ಹಣಕಾಸು ವರ್ಷದ ಭಾರತದ ಚಿನ್ನದ ಬಾಂಡ್‌ಗಳ ಎರಡನೇ ಅವಧಿಯು ಇಂದು ಚಂದಾದಾರಿಕೆಗಾಗಿ ತೆರೆಯಿತು. ಇದು ಮೇ 15 ರಂದು ಮುಚ್ಚಲಿದೆ. ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು, 4,590 ರುಪಾಯಿ ಎಂದು ನಿಗದಿಪಡಿಸಲಾಗಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮತ್ತು ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡುವವರು ಪ್ರತಿ ಗ್ರಾಂಗೆ 50 ರುಪಾಯಿ ರಿಯಾಯಿತಿ ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+