ಸತತ ಮೂರು ದಿನದ ಏರಿಕೆ ಓಟಕ್ಕೆ ಬ್ರೇಕ್ ಹಾಕಿದ ಚಿನ್ನ, ಬಿದ್ದ ಬೆಳ್ಳಿ

ಜಾಗತಿಕ ಮಾರುಕಟ್ಟೆಯಲ್ಲಿನ ದರವನ್ನೇ ಅನುಸರಿಸಿ ಭಾರತದ ಮಾರ್ಕೆಟ್ ನಲ್ಲೂ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಮಂಗಳವಾರ (ಅಕ್ಟೋಬರ್ 13, 2020) ಇಳಿಕೆಯಾಯಿತು. ಎಂಸಿಎಕ್ಸ್ ನಲ್ಲಿ ಚಿನ್ನದ ಡಿಸೆಂಬರ್ ಫ್ಯೂಚರ್ಸ್ 0.55% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 50,826 ರುಪಾಯಿಯಂತೆ ವಹಿವಾಟು ನಡೆಸಿತು. ಕಳೆದ ಮೂರು ದಿನದಲ್ಲಿ ಇದೇ ಮೊದಲ ಬಾರಿಗೆ ಇಳಿಕೆ ಕಂಡಿತು.

ಇನ್ನು ಬೆಳ್ಳಿ ದರದಲ್ಲಿ 1.2% ಕುಸಿತ ಕಂಡು, ಪ್ರತಿ ಕೇಜಿಗೆ 62,343 ರುಪಾಯಿಯಂತೆ ವ್ಯವಹಾರ ನಡೆಸಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಏರಿಕೆ ಕಂಡಿದ್ದವು. ಕ್ರಮವಾಗಿ 0.55% ಹಾಗೂ 0.26% ಹೆಚ್ಚಳ ಕಂಡಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತವಾಯಿತು. ಆದರೆ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳು ಹಾಗೂ ಕೊರೊನಾ ಲಸಿಕೆ ಪ್ರಯೋಗದಲ್ಲಿನ ಹಿನ್ನಡೆಯಿಂದಾಗಿ ನಷ್ಟದ ಪ್ರಮಾಣ ಮಿತಿಯಾಯಿತು.

ಇಟಿಎಫ್ ಖರೀದಿ ಕಂಡುಬಂತು

ಇಟಿಎಫ್ ಖರೀದಿ ಕಂಡುಬಂತು

ಸ್ಪಾಟ್ ಗೋಲ್ಡ್ ಬೆಲೆಯಲ್ಲಿ 0.1% ಕುಸಿತ ಕಂಡು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1,919.15ರಂತೆ ವಹಿವಾಟು ನಡೆಸಿತು. ಬೆಳ್ಳಿಯ ದರದಲ್ಲಿ 0.4% ಕುಸಿತ ಕಂಡು, $ 25.02ರಲ್ಲಿ ಹಾಗೂ ಪ್ಲಾಟಿನಂ ಪ್ರತಿ ಔನ್ಸ್ ಗೆ $ 873.46ರಲ್ಲಿ ವ್ಯವಹಾರ ನಡೆಸಿದವು. ಪ್ರತಿಸ್ಪರ್ಧಿ ಕರೆನ್ಸಿಗಳ ವಿರುದ್ಧ ಡಾಲರ್ ಸೂಚ್ಯಂಕ 0.09% ರಷ್ಟು ಏರಿಕೆ ಕಂಡಿತು. ಆ ಕಾರಣದಿಂದ ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನ ದುಬಾರಿಯಾಯಿತು. ಚಿನ್ನದ ಬೆಲೆಯಲ್ಲಿನ ಈಚಿನ ಏರಿಕೆಯಿಂದಾಗಿ ಇಟಿಎಫ್ ಗೆ ಸಂಬಂಧಿಸಿದ ಖರೀದಿ ಕಂಡುಬಂತು. ವಿಶ್ವದ ಅತಿ ದೊಡ್ಡ ಚಿನ್ನದ ಬೆಂಬಲಿತ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಎಸ್ ಡಿಪಿಆರ್ ಗೋಲ್ಡ್ ಟ್ರಸ್ಟ್ ನಲ್ಲಿನ ಹೋಲ್ಡಿಂಗ್ಸ್ 0.48% ಹೆಚ್ಚಳವಾಗಿ, ಸೋಮವಾರ 1,277.65 ಟನ್ ತಲುಪಿತು.

ಯುಎಸ್ ನಲ್ಲಿ ಉತ್ತೇಜನಾ ಪ್ಯಾಕೇಜ್ ಅನಿಶ್ಚಿತತೆ

ಯುಎಸ್ ನಲ್ಲಿ ಉತ್ತೇಜನಾ ಪ್ಯಾಕೇಜ್ ಅನಿಶ್ಚಿತತೆ

ಯುಎಸ್ ನಲ್ಲಿ ಉತ್ತೇಜನಾ ಪ್ಯಾಕೇಜ್ ಅನಿಶ್ಚಿತತೆ ಮುಂದುವರಿದಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಇದ್ದು, ಅಷ್ಟರಲ್ಲಿ ಸಮಗ್ರವಾದ ಒಪ್ಪಂದ ಆಗುವುದು ಅನುಮಾನ ಎಂಬ ಅಭಿಪ್ರಾಯ ತಜ್ಞರಲ್ಲಿದೆ. ಎರಡೂ ಕಡೆಯವರ ಅಭಿಪ್ರಾಯ ಬಂದಂತೆಲ್ಲ ಅದರ ಪ್ರತಿಕ್ರಿಯೆಯನ್ನು ಮಾರ್ಕೆಟ್ ನಲ್ಲಿ ಕಾಣುತ್ತೇವೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಏರಿಳಿತ ಹೀಗೇ ಮುಂದುವರಿಯಬಹುದು ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ತಜ್ಞರು ಅಭಿಪ್ರಾಯ ಪಡುವಂತೆ, ಕೊರೊನಾ ಪರಿಹಾರ ಪ್ಯಾಕೇಜ್ ಘೋಷಣೆಯು ಯುಎಸ್ ಅಧ್ಯಕ್ಷೀಯ ಚುನಾವಣೆ ನಂತರ ಬಹಳ ಸುಲಭವಾಗಿ ಆಗುತ್ತದೆ. ಒಂದು ವೇಳೆ ಡೆಮಾಕ್ರಟ್ ಗೆದ್ದಲ್ಲಿ ದೊಡ್ಡ ಪ್ಯಾಕೇಜ್ ಘೋಷಿಸಬಹುದು. ಆರ್ಥಿಕ ಉತ್ತೇಜನದ ಒಪ್ಪಂದದ ನಿರೀಕ್ಷೆ ಅಪಾಯದ ಬಗ್ಗೆ ಇರುವ ಭಾವನೆಯನ್ನು ಹೆಚ್ಚಿಸುತ್ತದೆ ಎಂದು ಕೊಟಕ್ ಹೇಳಿದೆ.

ಸವರನ್ ಗೋಲ್ಡ್ ಬಾಂಡ್ ಸಬ್ ಸ್ಕ್ರಿಪ್ಷನ್

ಸವರನ್ ಗೋಲ್ಡ್ ಬಾಂಡ್ ಸಬ್ ಸ್ಕ್ರಿಪ್ಷನ್

ಸರ್ಕಾರಗಳು ಹಾಗೂ ಕೇಂದ್ರ ಬ್ಯಾಂಕ್ ಗಳ ದಾಖಲೆಯ ಉತ್ತೇಜನ ಕ್ರಮಗಳಿಂದ ಈ ವರ್ಷ ಚಿನ್ನದ ಬೆಲೆಯಲ್ಲಿ ದೊಡ್ಡ ಗಳಿಕೆಗೆ ಕಾರಣವಾಗಿತ್ತು. ಭಾರತದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ದಾಖಲೆಯ 56,200 ರುಪಾಯಿ ಮುಟ್ಟಿತ್ತು. ಇತ್ತ ಚಿನ್ನದ ವ್ಯಾಪಾರಿಗಳು ಯು.ಕೆ. ವಾಣಿಜ್ಯ ಒಪ್ಪಂದಗಳ ಕಡೆಗೂ ಗಮನಿಸುತ್ತಿದ್ದಾರೆ. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಯುರೋಪಿಯನ್ ಒಕ್ಕೂಟದ ವಾಣಿಜ್ಯ ಒಪ್ಪಂದವನ್ನು ಮೂಲೆಗೆ ಹಾಕಲು ಗುರುವಾರದ ಗಡುವು ನಿಗದಿ ಮಾಡಿದ್ದಾರೆ. ಇನ್ನು ಭಾರತದ ವಿಷಯಕ್ಕೆ ಬರುವುದಾದರೆ, ಸವರನ್ ಗೋಲ್ಡ್ ಬಾಂಡ್ ಗೆ ಈಚಿನ ಸಬ್ ಸ್ಕ್ರಿಪ್ಷನ್ ಸೋಮವಾರದಿಂದ ಶುರುವಾಗಿದ್ದು, ಶುಕ್ರವಾರ ಕೊನೆಯಾಗುತ್ತದೆ. ಪ್ರತಿ ಗ್ರಾಮ್ ಚಿನ್ನಕ್ಕೆ 5051 ರುಪಾಯಿ ನಿಗದಿ ಮಾಡಲಾಗಿದೆ. ಆನ್ ಲೈನ್ ನಲ್ಲಿ ಅಪ್ಲೈ ಮಾಡಿ, ಡಿಜಿಟಲ್ ಪಾವತಿ ಮಾಡುವವರಿಗಾಗಿ ಪ್ರತಿ ಗ್ರಾಮ್ ಗೆ 50 ರುಪಾಯಿ ರಿಯಾಯಿತಿ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+