ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯ ಸೂಚನೆ ಕಂಡಿದೆ. ಟ್ರಂಪ್ ಪ್ರತಿಸುಂಕ ಏರಿಕೆಯಿಂದ ಚಿನ್ನದ ಬೆಲೆಯು ಆಕಾಶದೆತ್ತರಕ್ಕೇ ಏರುವ ಸ್ಥಿತಿ ನೋಡಿತ್ತು. ಸತತವಾಗಿ ಮೂರ್ನಾಲ್ಕು ದಿನಗಳ ಕಾಲ ದಾಖಲೆಯ ಏರಿಕೆ ನೋಡಿದ ಬೆಲೆಯು, ಇಂದು ಕೊಂಚ ಇಳಿಕೆಯನ್ನೂ ನೋಡಿದೆ. ಇದರಿಂದ ಹೂಡಿಕೆದಾರರು ಹಾಗೂ ಖರೀದಿದಾರರಿಗೆ ಕೊಂಚ ಸಮಾಧಾನ ಸಿಕ್ಕಂತಾಗಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದರದ ವ್ಯತ್ಯಾಸ ಗಮನಾರ್ಹವಾಗಿರುತ್ತದೆ. ಹೀಗಾಗಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳ ವಿವರವನ್ನು ಇಲ್ಲಿ ಸರಳವಾಗಿ ನೀಡಲಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ರೂ. 16,168 ಆಗಿದೆ. ಇದು ನಿನ್ನೆ ರೂ. 16,189 ಇದ್ದು ಇಂದು ಪ್ರತಿ ಗ್ರಾಂಗೆ ರೂ. 21 ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಇಂದಿನ ಬೆಲೆ ರೂ. 1,61,680 ಆಗಿದ್ದು, ನಿನ್ನೆ ರೂ. 1,61,890 ಇತ್ತು. ಅಂದರೆ ರೂ. 210 ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ರೂ. 16,16,800 ಆಗಿದ್ದು, ನಿನ್ನೆ ರೂ. 16,18,900 ಇತ್ತು. ಒಟ್ಟು ರೂ. 2,100 ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಳಿಕೆಯತ್ತ ಸಾಗಿ ಬಂದಿದೆ. 1 ಗ್ರಾಂ ಬೆಲೆ ಇಂದು ರೂ. 14,820 ಆಗಿದ್ದು, ನಿನ್ನೆ ರೂ. 14,840 ಇತ್ತು. ಇದರಿಂದ ರೂ. 20 ಇಳಿಕೆ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ. 1,48,200 ಆಗಿದ್ದು, ನಿನ್ನೆ ರೂ. 1,48,400 ಇತ್ತು. ಇಂದಿಗೆ ರೂ. 200 ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ರೂ. 14,82,000 ಆಗಿದ್ದು, ನಿನ್ನೆ ರೂ. 14,84,000 ಇತ್ತು. ಒಟ್ಟಾರೆ ರೂ. 2,000 ಇಳಿಕೆ ಕಂಡುಬಂದಿದೆ
ಬೆಂಗಳೂರಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ:
ಇನ್ನು 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಳಿಕೆ ನೋಡಿದೆ. 1 ಗ್ರಾಂ ದರ ಇಂದು ರೂ. 12,126 ಆಗಿದ್ದು, ನಿನ್ನೆ ರೂ. 12,142 ಇತ್ತು. ಇದರಿಂದ ರೂ. 16 ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ರೂ. 1,21,260 ಆಗಿದ್ದು, ನಿನ್ನೆ ರೂ. 1,21,420 ಇತ್ತು. ಅಂದರೆ ಇಂದಿಗೆ 160 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ರೂ. 12,12,600 ಆಗಿದ್ದು, ನಿನ್ನೆ ರೂ. 12,14,200 ಇತ್ತು. ಒಟ್ಟು ರೂ. 1,600 ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಇಂದು ಬೆಳ್ಳಿಯ ದರ ಸ್ಥಿರವಾಗಿಯೇ ಮುಂದುವರಿದಿದೆ. 1 ಗ್ರಾಂ ಬೆಳ್ಳಿಯ ಇಂದಿನ ಬೆಲೆ ರೂ. 285 ಆಗಿದ್ದು, ನಿನ್ನೆ ಕೂಡ ಅದೇ ರೂ. 285 ಇತ್ತು. ಆದ್ದರಿಂದ ಯಾವುದೇ ಏರಿಕೆ ಅಥವಾ ಇಳಿಕೆ ದಾಖಲಾಗಿಲ್ಲ. 10 ಗ್ರಾಂ ಬೆಳ್ಳಿಯ ಬೆಲೆ ರೂ. 2,850 ಆಗಿದ್ದು, ಇದು ನಿನ್ನೆ ಇದ್ದ ದರದಂತೆಯೇ ಇದೆ. 100 ಗ್ರಾಂ ಬೆಳ್ಳಿಯ ದರ ರೂ. 28,500 ಆಗಿದ್ದು, 1000 ಗ್ರಾಂ (1 ಕಿಲೋ) ಬೆಳ್ಳಿಯ ಬೆಲೆ ರೂ. 2,85,000 ಆಗಿದೆ.
ಸ್ಪಾಟ್ ಚಿನ್ನದ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಫೆಬ್ರವರಿ 26ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂದಿದೆ. ಜಿಎಂಟಿ ಸಮಯ ಬೆಳಿಗ್ಗೆ 02:58ರ ವೇಳೆಗೆ ಪ್ರತಿ ಔನ್ಸ್ಗೆ 5,183.85 ಡಾಲರ್ ಮಟ್ಟಕ್ಕೆ ತಲುಪಿದ್ದು, ಸುಮಾರು 0.3 ಶೇಕಡಾ ಹೆಚ್ಚಳ ದಾಖಲಾಗಿದೆ.
ಒಟ್ಟಾರೆ ನೋಡಿದರೆ, ಇಂದು ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ. ಮಾರುಕಟ್ಟೆ ಚಲನವಲನ, ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಬೇಡಿಕೆ-ಪೂರೈಕೆ ಸ್ಥಿತಿಗತಿಗಳ ಪ್ರಭಾವದಿಂದ ದರದಲ್ಲಿ ಬದಲಾವಣೆ ಸಂಭವಿಸುತ್ತದೆ. ಚಿನ್ನ ಖರೀದಿಸಲು ಯೋಚಿಸುತ್ತಿರುವವರು ದೈನಂದಿನ ದರ ಪರಿಶೀಲಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದು ಒಳಿತು. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡುವುದು ಸುರಕ್ಷಿತ ವಿಧಾನವಾಗಿದೆ.
More From GoodReturns

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ, ಚಿನ್ನದ ಬೆಲೆ ಕುಸಿತ! 3,000 ರೂ. ಇಳಿಕೆ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Bengaluru Gold Rate: ಜಾಗತಿಕ ಉದ್ವಿಗ್ನತೆ ನಡುವೆಯೂ ಚಿನ್ನದ ಬೆಲೆ ಭಾರಿ ಇಳಿಕೆ…ದಿಢೀರ್ 32,900 ರೂ. ಕುಸಿತ!

Monday Gold Prediction: ಚಿನ್ನದ ಮೇಲೆ ಪ್ರಭಾವ ಬೀರುತ್ತ ಇಸ್ರೇಲ್-ಇರಾನ್ ವಾರ್! ಮತ್ತೆ ಬೆಲೆ ಏರಿಕೆಯಾಗುತ್ತಾ?



Click it and Unblock the Notifications