ಮಲ್ಟಿ ಕಮೋಡಿಟಿಸ್ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನದ ದರವು ಸೋಮವಾರ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಪ್ರಮುಖವಾಗಿ ಯುಎಸ್‌ನಲ್ಲಿ ಹಾಗೂ ಯುರೋಪ್‌ನಲ್ಲಿ ಬ್ಯಾಂಕಿಂಗ್ ವಲಯದಲ್ಲಿನ ಬಿಕ್ಕಟ್ಟು ಹಲವಾರು ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ. ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ದರವು ಹತ್ತು ಗ್ರಾಮ್‌ಗೆ 60,000 ರೂಪಾಯಿಯನ್ನು ದಾಟಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ಸ್ 12:55 ಸಮಯಕ್ಕೆ 897 ರೂಪಾಯಿ ಅಥವಾ ಶೇಕಡ 1.51ರಷ್ಟು ಏರಿಕೆಯಾಗಿ 60,280 ರೂಪಾಯಿಗೆ ತಲುಪಿದೆ.
1:23 ಸಮಯ ಎಂಸಿಎಕ್ಸ್ ಬೆಳ್ಳಿ ದರವು ಏರಿಕೆಯಾಗಿದೆ. ಪ್ರತಿ ಕೆಜಿಗೂ 69,100 ರೂಪಾಯಿಯಂತಿದೆ. ಸುಮಾರು 599 ರೂಪಾಯಿ ಅಥವಾ ಶೇಕಡ 0.87ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಮ ಜ್ಯುವೆಲ್ಲರಿಯ ಎಂಡಿ ಕಾಲಿನ್ ಶಾ, "ಚಿನ್ನದ ದರವು ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಇದು ಪ್ರಮುಖವಾಗಿ ಆರ್ಥಿಕ ಬೆಳವಣಿಗೆ ಕುಸಿತ, ಬಡ್ಡಿದರ ಕುಸಿತದ ಪ್ರಮುಖ ಲಕ್ಷಣವಾಗಿದೆ. ಮುಂದಿನ ತಿಂಗಳುಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ," ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಆಲ್ಫಾ ಕ್ಯಾಪಿಟಲ್‌ನ ಸಹ-ಸಂಸ್ಥಾಪಕ ಡಾ ಮುಖೇಶ್ ಜಿಂದಾಲ್, "ಯುಎಸ್ ಡಾಲರ್‌ಗೆ ಅನುಗುಣವಾಗಿ ಚಿನ್ನದ ದರವು ಏರಿಳಿತ ಕಾಣುವ ಸಾಧ್ಯತೆಯಿದೆ. ಯುಎಸ್‌ಡಿ ಇಂಡೆಕ್ಸ್‌ನಿಂದಾಗಿ ಚಿನ್ನದ ಮೇಲೆ ನೆಗೆಟಿವ್ ಪ್ರಭಾವ ಉಂಟಾಗುತ್ತದೆ. ಯುಎಸ್ ಡಾಲರ್ ಇಂಡೆಕ್ಸ್ ಇಳಿಕೆಯಾಗುವಾಗ ಚಿನ್ನದ ದರವು ಏರಿಕೆಯಾಗುತ್ತದೆ. ಯುಎಸ್ ಡಾಲರ್ ಇಂಡೆಕ್ಸ್ ಅಕ್ಟೋಬರ್ 22ರಿಂದ ಬಾರಿ ಇಳಿಕೆಯಾಗುತ್ತಿದೆ. ಇದರಿಂದಾಗಿ ಚಿನ್ನದ ದರವು ಅಕ್ಟೋಬರ್ 22ರಿಂದ ಏರಿಕೆಯಾಗುತ್ತಿದೆ," ಎಂದು ತಿಳಿಸಿದ್ದಾರೆ.
ಈ ಸಮಯಕ್ಕೆ ಎಂಸಿಎಕ್ಸ್ ಹೇಗಿದೆ?
ಮಾರ್ಚ್ 20, 2023ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 60250.00 ರೂಪಾಯಿ ಆಗಿದೆ. ಬೆಳ್ಳಿ ಹೆಚ್ಚಳವಾಗಿದ್ದು 69334.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.12ರಷ್ಟು ಹಿಗ್ಗಿದ್ದು 1,998.94 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.12ರಷ್ಟು ಏರಿಕೆಯಾಗಿದ್ದು 22.64 ಯುಎಸ್ ಡಾಲರ್ ಆಗಿದೆ.
"ಚಿನ್ನದ ಮಾರುಕಟ್ಟೆಯಲ್ಲಿ ಪಾಸಿಟಿವ್ ಬೆಳವಣಿಗೆ ಕಂಡು ಬರುವ ಸಾಧ್ಯತೆಯಿದೆ. ಕ್ರೆಡಿಟ್ ಸ್ಯೂಸ್ ಮತ್ತು ಬ್ಯಾಂಕಿಂಗ್ ವಲಯದ ದೈತ್ಯ ಯುಬಿಎಸ್ ನಡುವಿನ ಡೀಲ್ ಕೂಡಾ ಮಾರುಕಟ್ಟೆಯ ಮೇಲೆ ಭಾರೀ ಪ್ರಭಾವ ಉಂಟು ಮಾಡಿದೆ. ಜಾಗತಿಕ ಕೇಂದ್ರೀಯ ಬ್ಯಾಂಕ್‌ಗಳು ಎಂಸಿಎಕ್ಸ್ ಚಿನ್ನವು 59700 ಮಟ್ಟಕ್ಕೆ ತನ್ನ ಏರುಗತಿಯಲ್ಲಿ ಸಾಗಲಿದೆ," ಎಂದು ಬ್ರೋಕರೇಜ್ ಹೌಸ್ ಐಸಿಐಸಿಐ ಡೈರೆಕ್ಟ್ ರಿಸೆರಾಚ್ ಹೇಳಿದೆ.
ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸ್ವಿಸ್ ರೆಗ್ಯೂಲೇಟರ್ಸ್ (ಸ್ವಿಸ್ ನಿಯಂತ್ರಕರು) ಈ ಕ್ರೆಡಿಟ್ ಸ್ಯೂಸ್ ಡೀಲ್‌ನ ಮಧ್ಯಸ್ಥಿಕೆಯನ್ನು ವಹಿಸಿಕೊಂಡಿದೆ. ಇದು ಬರೋಬ್ಬರಿ 3.2 ಬಿಲಿಯನ್ ಡಾಲರ್‌ನ ಡೀಲ್ ಆಗಿದೆ. ಸುಮಾರು 5.4 ಬಿಲಿಯನ್ ಡಾಲರ್ ನಷ್ಟವನ್ನು ಒಪ್ಪಿ ಕ್ರೆಡಿಟ್ ಸ್ಯೂಸ್ ಖರೀದಿಗೆ ಯುಬಿಎಸ್ ಮುಂದಾಗಿದ್ದು, ಈ ಐತಿಹಾಸಿಕ ಡೀಲ್ 2023ರ ಅಂತ್ಯದೊಳಗೆ ಪೂರ್ಣವಾಗುವ ನಿರೀಕ್ಷೆಯಿದೆ.
ದೇಶದಲ್ಲಿ ಇಂದು ಚಿನ್ನದ ದರ ಕೊಂಚ ಇಳಿದಿದೆ. ಮಾರ್ಚ್ 20ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 500 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 54,800 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 540 ರೂಪಾಯಿ ಕುಗ್ಗಿದ್ದು ಪ್ರಸ್ತುತ 59,780 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಇಳಿದಿದ್ದು ಪ್ರಸ್ತುತ 71,800 ರೂಪಾಯಿ ಆಗಿದೆ.


Click it and Unblock the Notifications