Bengaluru Gold Rate: ಚಿನ್ನದಂಗಡಿ ಕಡೆ ಓಡಿ! ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ; ಬೆಳ್ಳಿ ದರ ದುಬಾರಿ.. ಎಷ್ಟಿದೆ ನೀವೆ ನೋಡಿ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಇದು ಒಳ್ಳೆಯ ಸುದ್ದಿ! ಕೆಳೆದ ವಾರದಲ್ಲಿ ಏರಿಕೆಯಾಗಿದ ಚಿನ್ನ ಬೆಲೆಗಳು(Gold Rate) ಜೂನ್‌ ತಿಂಗಳ ಎರಡನೇ ವಾರದಲ್ಲಿ ಎರಡು ದಿನವೂ ಕೂಡ ಇಳಿಕೆಯಾಗಿದೆ. ಹೌದು,ಬಂಗಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold) ಇಳಿಕೆಯತ್ತ ಸಾಗಿದೆ. ದರ ಇಳಿಕೆಯಿಂದ ಆಭರಣ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಬಂಗಾರ ಕೊಳ್ಳಲು ಪ್ಲಾನ್ ಮಾಡಕೊಂಡಿದ್ದವರು ಇಂದು ಚಿನ್ನ ಖರೀದಿ ಮಾಡುವುದು ಉತ್ತಮ.ಇನ್ನು ಚಿನ್ನದ ಇಳಿಕೆಯಾದ್ದರೆ ಬೆಳ್ಳಿ ಬೆಲೆ(Silver Rate) ಜಿಗಿತಗೊಂಡಿದೆ. ಹಾಗಿದ್ರೆ ಜೂನ್‌ 10 ರಂದು ಮಂಗಳವಾರ ಬೆಂಗಳೂರಿನಲ್ಲಿ ಗೋಲ್ಡ್‌ ರೇಟ್ (Bengaluru gold Rate) ಹೇಗಿದೆ? ಒಂದು ಕೆಜಿ ಬೆಳ್ಳಿಯ ಬೆಲೆ(Silver price) ಎಷ್ಟು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೌದು,ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು ಇಳಿಕೆಯಾದ್ದರೆ ಬೆಳ್ಳಿ ಬೆಲೆ ಲಕ್ಷದ ಗಡಿಯನ್ನು ದಾಟಿದೆ. ಸದ್ಯ ಬೆಂಗಳೂರಿನಲ್ಲಿ10 ಗ್ರಾಂ 22 ಕ್ಯಾರೆಟ್‌ ಚಿನ್ನ 89,450 ರೂ.ಗಳು ಇದೆ.ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 97,580 ರೂ.ಇದೆ.ಅದರಲ್ಲೂ100 ಗ್ರಾಂ ಅಪರಂಜಿ ಚಿನ್ನ ಇಂದು1,100 ರೂ,ಗಳಷ್ಟು ಇಳಿಕೆ ಕಂಡಿದೆ.

Gold Rate: ಚಿನ್ನದಂಗಡಿ ಕಡೆ ಓಡಿ! ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

ಜೂನ್‌ 10ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು

ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 8,945 ರೂ. ಇದೆ. ಇನ್ನೂ 10 ಗ್ರಾಂ 22 ಕ್ಯಾರೆಟ್‌ ಚಿನ್ನ89,450 ರೂ.ಗಳು ಇದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ 100 ರೂ.ಗಳ ಇಳಿಕೆ ಕಂಡಿದೆ.100 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 1000 ರೂ.ಗಳಷ್ಟು ಇಳಿಕೆಯಾಗಿ 8,94,500 ತಲುಪಿದೆ.

24 ಕ್ಯಾರೆಟ್‌ ಗೋಲ್ಡ್ ರೇಟ್

ಅಪರಂಜಿ 24 ಕ್ಯಾರೆಟ್‌ ಚಿನ್ನ ಒನ್‌ ಗ್ರಾಂಗೆ 9,758 ರೂ.ಗಳ ವ್ಯಾಪಾರವಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 97,580 ರೂ.ಇದೆ. ಇದೇ ಚಿನ್ನವನ್ನು ನಿನ್ನೆ ಹೋಲಿಕೆ ಮಾಡಿದ್ದರೆ 110 ರೂ.ಗಳಷ್ಟು ಇಳಿಕೆಯಾಗಿದೆ. ಇದಲ್ಲದೆ,100 ಗ್ರಾಂ 24 ಕ್ಯಾರೆಟ್‌ ಚಿನ್ನ9,75,800 ರೂ.ಗಳ ವಾಹಿವಾಟುವಿದೆ.ನಿನ್ನೆ ಹೋಲಿಕೆ ಮಾಡಿದ್ರೆ 1,100ರೂ.ಗಳಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

18 ಕ್ಯಾರೆಟ್‌ ಗೋಲ್ಡ್‌ ರೇಟ್ 18 ಕ್ಯಾರೆಟ್‌
ಚಿನ್ನದ ಇಳಿಕೆ ಕಂಡಿದೆ.1ಗ್ರಾಂ 7,319 ರೂ.ಇದೆ.18 ಕ್ಯಾರೆಟ್‌ ಹತ್ತು ಗ್ರಾಂ ಚಿನ್ನಕ್ಕೆ73,190 ರೂ.ಗಳು ಇದೆ ಹಾಗೂ 100 ಗ್ರಾಂ18 ಕ್ಯಾರೆಟ್‌ ಚಿನ್ನಕ್ಕೆ 7,31,900 ರೂ. ತಲುಪಿದೆ. ಇಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಜೂನ್‌ 10 ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಭಾರೀ ಪ್ರಮಾಣದಲ್ಲಿ ಜಿಗಿತಗೊಂಡಿದೆ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 1,09,000 ರೂಪಾಯಿಗಳು ವಾಹಿವಾಟುವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ ಸಾವಿರ ರೂಪಾಯಿಗಳ ಏರಿಕೆ ಕಂಡಿದೆ. ಒಂದು ಗ್ರಾಂಗೆ ಬೆಳ್ಳಿಗೆ 109 ರೂ.ಗಳ ವ್ಯಾಪಾರದವಿದೆ.10 ಗ್ರಾಂ ಬೆಳ್ಳಿಯ ಬೆಲೆ 1,090 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 10,900ರೂ.ಗಳು ವ್ಯಾಪಾರವಿದೆ.ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಏರಿಕೆಯನ್ನು ಕಂಡಿದೆ.

Take a Poll

ಬೆಂಗಳೂರಿನಲ್ಲಿ 10 ದಿನಗಳಲ್ಲಿ ಚಿನ್ನದ ಬೆಲೆಗಳು

24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು ಮೇ ತಿಂಗಳಲ್ಲಿ ಏರಿಳಿತವನ್ನು ಕಂಡಿದೆ. ಜೂನ್‌ ತಿಂಗಳ ಮೊದಲ ವಾರದಲ್ಲಿ ಚಿನ್ನದ ಬೆಲೆಗಳು ಏರಿಕೆ ಕಂಡಿವೆ. 1,2,3,4ರಂದು ಚಿನ್ನದ ಬೆಲೆಗಳು ಏರಿಕೆ ಕಂಡಿವೆ. ತಿಂಗಳ ಮೊದಲ ಶನಿವಾರ ಭಾನುವಾರ ಯಥಾಸ್ಥಿತಿಯಲ್ಲಿ ಚಿನ್ನ ಇತ್ತು. ಜೂನ್‌ ತಿಂಗಳ 2ನೇ ವಾರದ ಮೊದಲು ದಿನ ಇಳಿಯತ್ತ ಚಿನ್ನ ಮುಖ ಮಾಡಿದ್ದು, ಇಂದು ಕೂಡ ಇಳಿಕೆಯಾಗಿದೆ. 10 ದಿನಗಳ ಸರಾಸರಿ ಚಿನ್ನದ ದರವು 22 ಕ್ಯಾರೆಟ್‌ 8,945 ರೂ. ಮತ್ತು 1 ಗ್ರಾಂ 24 ಕ್ಯಾರೆಟ್‌ ಚಿನ್ನ9,758 ರೂ. ದರವಿದೆ.

ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳ ವಿವರ

ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿನ್ನದ ಬೆಲೆಗಳು ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,319 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,945 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,758 ರೂ ಆಗಿದೆ.

ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,319 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,945 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,758 ರೂ ಆಗಿದೆ.

ಗದಗದಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,319 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,945 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,758 ರೂ ಆಗಿದೆ.

ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,319 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,945 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,758 ರೂ ಆಗಿದೆ.

ಚಿತ್ರದುರ್ಗದಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 7,319 ರೂ,ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 8,945 ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 9,758 ರೂ ಆಗಿದೆ.

ಸ್ಪಾಟ್ ಚಿನ್ನದ ಬೆಲೆ ಹೇಗಿದೆ..?

ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಹಿಂದೆ ಸರಿದಿದೆ.ನಿನ್ನೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ ಶೇ.2 ರಷ್ಟು ಕುಸಿದು $ 3300 ಮಟ್ಟಕ್ಕೆ ಇಳಿದಿದೆ.ಇದು $ 3310 ನಲ್ಲಿ ವಹಿವಾಟುವನ್ನು ನಡೆಸುತ್ತಿದೆ. ಸ್ಪಾಟ್ ಬೆಳ್ಳಿ ದರವು ಔನ್ಸ್‌ಗೆ $36ಕ್ಕೆ ತಲುಪಿದೆ.

ಅತಿ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ.ಯಾಕೆಂದರೆ ಭಾರತೀಯ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮಚ್ಚುದಂತಹ ವಸ್ತುವಾಗಿದೆ. ಹಬ್ಬ ಹರಿದಿನ, ಜಾತ್ರೆ, ಮದುವೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಾಗಿ ಬಂಗಾರ ಕೊಂಡುಕೊಳ್ಳುತ್ತಾರೆ. ಅದರಲ್ಲೂ ಮದುವೆ ಸಮಾರಂಭದಲ್ಲಿ ವರದಕ್ಷಣೆ ಕೊಡಲು ಮಧು ಕಡೆಯವರು ಹೆಚ್ಚಿನ ಆಭರಣಗಳನ್ನು ಖರೀದಿಮಾಡುತ್ತಾರೆ. ಇನ್ನೂ ಹಲವಾರು ಮಂದಿ ಚಿನ್ನವನ್ನು ಹೊಡಿಕೆ ಮಾಡುವುದಕ್ಕಾಗಿ ತಗೆದುಕೊಳ್ಳುತ್ತಾರೆ. ಬಂಗಾರ ಶತಮಾನಗಳಿಂದ ಭಾರತದಲ್ಲಿ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಲೋಹವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತವಾಗಿದೆ. ಸಾಂಪ್ರದಾಯಿಕ ಆಭರಣಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನದ ಬಳಕೆಯಿಂದ ಭಾರತೀಯ ಸಂಸ್ಕೃತಿಯ ಭಾಗವಾಗವೆಂದೇ ಹೇಳಬಹುದು. ಯಾವುದೇ ಒಳ್ಳೆಯ ಸಂದರ್ಭದಲ್ಲೂ ಸಹ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮನೆಯಲ್ಲಿ ಇದ್ದರೆ ಕಷ್ಟದ ಸಮಯಕ್ಕೆ ಸಹಾಯವಾಗುತ್ತದೆ ಎಂಬುದು ಅವರ ನಂಬಿಕೆ.

ಚಿನ್ನ ಬೆಲೆ ಇಳಿಕೆಗೆ ಕಾರಣ

ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ,ಡೊನಾಲ್ಡ್ ಟ್ರಂಪ್ ಸುಂಕ ಯುದ್ದ, ಹೂಡಿಕೆದಾರರ ಅಭಿಪ್ರಾಯ, ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು. ತರಿಗೆ ಹೆಚ್ಚಳ, ಯುದ್ದದ ಪ್ರಭಾವ,ಡಾಲರ್ ಏರಿಕೆ, ಜಾಗತಿಕ ಪರಿಸ್ಥಿತಿಗಳು ಕಾರಣವಾಗಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+