For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್‌: ಈ ವರ್ಷ ಮೊದಲ ಬಾರಿಗೆ ರಿಯಾಯಿತಿ ಬೆಲೆಯಲ್ಲಿ ಚಿನ್ನ ಮಾರಾಟ!

|

ಭಾರತದಲ್ಲಿ ಕೋವಿಡ್-19 ಸಂಬಂಧಿತ ನಿರ್ಬಂಧಗಳು ಬೇಡಿಕೆ ಮೇಲೆ ಸಾಕಷ್ಟು ಪರಿಣಾಮ ಬೀರಿರುವುದರಿಂದ ಭೌತಿಕ ಚಿನ್ನದ ಬೆಲೆ ಈ ಮೊದಲಿಗಿಂತ ಕಡಿಮೆಯಾಗಿ ರಿಯಾಯಿತಿಯಲ್ಲಿ ಲಭ್ಯವಿದೆ. ದೇಶದಲ್ಲಿ ಈ ವರ್ಷ ಇದೇ ಮೊದಲ ಬಾರಿಗೆ ರಿಯಾಯಿತಿ ದರದಲ್ಲಿ ಚಿನ್ನವನ್ನು ಮಾರಾಟ ಮಾಡಲಾಗಿದೆ.

ಮೇ 02 ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ: ದೇಶದ ಪ್ರಮುಖ ನಗರಗಳ ಮಾಹಿತಿಮೇ 02 ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ: ದೇಶದ ಪ್ರಮುಖ ನಗರಗಳ ಮಾಹಿತಿ

ಕೋವಿಡ್-19 ನಿರ್ಬಂಧದಿಂದಾಗಿ ದೇಶದ ಹಲವಾರು ನಗರಗಳಲ್ಲಿ ಒಡವೆ ಮಳಿಗೆಗಳು ಮುಚ್ಚಿದ್ದು, ಚಿನ್ನದ ಮಾರಾಟವು ಕಡಿಮೆಯಾಗಿದೆ. ಚಿನ್ನ ಖರೀದಿಸುವವರ ಸಂಖ್ಯೆ ಕ್ಷೀಣಿಸಿರುವ ಪರಿಣಾಮ, ಈ ವಾರ ಪ್ರತಿ ಔನ್ಸ್‌ಗೆ $ 2ನಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಭಾರತದಲ್ಲಿ ಮೊದಲ ಬಾರಿಗೆ ರಿಯಾಯಿತಿ ಬೆಲೆಯಲ್ಲಿ ಚಿನ್ನ ಮಾರಾಟ!

"ಬಹುತೇಕ ಎಲ್ಲ ರಾಜ್ಯ ಸರ್ಕಾರವು ಕೆಲವು ರೀತಿಯ ಕೋವಿಡ್-19 ನಿರ್ಬಂಧಗಳನ್ನು ವಿಧಿಸಿದೆ. ಆಭರಣ ಮಳಿಗೆಗಳು ಮುಚ್ಚಲ್ಪಟ್ಟಿವೆ ಅಥವಾ ತುಂಬಾ ವಿರಳ ಸಂಖ್ಯೆಯಲ್ಲಿ ವ್ಯಾಪಾರಕ್ಕೆ ಸಾಕ್ಷಿಯಾಗುತ್ತಿವೆ" ಎಂದು ಮುಂಬೈ ಮೂಲದ ವ್ಯಾಪಾರಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಭಾರತದಲ್ಲಿ ಚಿನ್ನದ ಬೆಲೆಗಳಲ್ಲಿ 10.75% ಆಮದು ಸುಂಕ ಮತ್ತು 3% ಜಿಎಸ್ಟಿ ಸೇರಿವೆ. ಈ ಜೂನ್ ತ್ರೈಮಾಸಿಕದಲ್ಲಿ, ಲಾಕ್‌ಡೌನ್‌ಗಳಿಂದಾಗಿ ಭಾರತದ ಚಿನ್ನದ ಬೇಡಿಕೆ ಕುಂಠಿತಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವ ಚಿನ್ನದ ಮಂಡಳಿ ತಿಳಿಸಿದೆ. ಆದರೆ ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ಚಿನ್ನದ ಬೇಡಿಕೆ 37% ಹೆಚ್ಚಾಗಿ 140 ಟನ್‌ಗಳಷ್ಟು ಏರಿಕೆಯಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ (ಡಬ್ಲ್ಯುಜಿಸಿ) ತಿಳಿಸಿದೆ.

English summary

Gold Prices In India Move Into Discount For First Time This Year:Know More

Physical gold prices in India moved to a discount over official domestic rates for the first time this as covid-related restrictions impacted retail demand.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X