Gold Price Today: ಆಭರಣ ಪ್ರಿಯರಿಗೆ ಬಂಗಾರದ ಮಾರುಕಟ್ಟೆ ಶಾಕ್ ಕೊಟ್ಟಿದೆ. ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಳೆ ಇಂದು ಏರಿಕೆ ಕಂಡಿದೆ.ಹೌದು, ಹೊಸ ವರ್ಷಕ್ಕೂ ಮುನ್ನ ಚಿನ್ನದ ಬೆಲೆ ಏರಿಕೆ ಬದಲಾವಣೆಯಲ್ಲಿ ಕಂಡಿದೆ. ಇನ್ನೂ ಬೆಳ್ಳಿ ದರ ತುಸು ಕಡಿಮೆಯಾಗಿದೆ. ಹಾಗಿದ್ರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ.
ಹೌದು, ಭಾರತದಲ್ಲಿ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,500 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 78,000 ರೂಪಾಯಿ ಆಗಿದೆ. ಬೆಲೆ ಏರಿಕೆಯಿಂದಾಗಿ ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡಲು ಚಿನ್ನದ ಪ್ರಿಯರು ಹಿಂದೇಟು ಹಾಕುತ್ತಿದ್ದರು.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,150 ರೂಪಾಯಿ ಇದೆ. ಅದೇ ರೀತಿ ಅಪರಂಜಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,800 ರೂಪಯಿಗಳ ಮಾರಾಟ ನಡೆಯುತ್ತಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ ಇಂದು 71,500 ರೂಪಾಯಿ ಇದೆ. 10 ಗ್ರಾಂ ನ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 78,000 ರೂ ಇದೆ.100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,15,000 ಇದೆ. 100 ಗ್ರಾಂ ಚಿನ್ನದ 24 ಕೆ ಬೆಲೆ 7,80,000 ರೂ.ಗಳ ವಹಿವಾಟು ನಡೆಸುತ್ತಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 58,500 ರೂ ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಬೆಳ್ಳಿಯ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 92,500 ರೂಪಾಯಿ ಇದೆ.ನಿನ್ನೆಗೆ ಹೋಲಿಕೆ ಮಾಡಿದ್ದರೆ ಒಂದು ಕೆಜಿಯ ಬೆಳ್ಳಿಯ ಬೆಲೆಯಲ್ಲಿ ಇಂದು ಇಳಿಕೆ ಕಂಡಿದೆ. ಮತ್ತು ಪ್ರತಿ ಗ್ರಾಂಗೆ ರೂ 92.50 ಆಗಿದೆ. 10 ಗ್ರಾಂ ಬೆಳ್ಳಿಯ ಬೆಲೆ 925 ರೂಪಾಯಿಯಾಗಿದೆ. 100 ಗ್ರಾಂ ಬೆಳ್ಳಿ 9,250 ರುಪಾಯಿಯ ವಹಿವಾಟುವಿದೆ.ಡಿಸೆಂಬರ್ ಆರಂಭದಿಂದಲೂ ಬೆಳ್ಳಿ ಬೆಲೆ ಬಹುತೇಕ ಸ್ಥಿರವಾಗಿದೆ. ಆದರೆ, ಇಂದು ಬೆಳ್ಳಿಯ ಬೆಲೆ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಏರಿಕೆ ಕಂಡಿದೆ ಬೆಳ್ಳಿಯ ದರವೂ ಸ್ವಲ್ಪ ಕಡಿಮೆಯಾಗಿದೆ.
MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?
MCX ಗೋಲ್ಡ್ ಕಳೆದ ವಾರ, ಡಿಸೆಂಬರ್ 27 ರಂದು, ಫೆಬ್ರವರಿ 2025 ರ ಮುಕ್ತಾಯದೊಂದಿಗೆ MCX ಚಿನ್ನದ ಬೆಲೆ 10 ಗ್ರಾಂಗೆ 76,536 ರೂ. ಮಾರ್ಚ್ 2025 ರ ಮುಕ್ತಾಯದೊಂದಿಗೆ ಬೆಳ್ಳಿ ಬೆಲೆಗಳು ಸಹ 10 ಗ್ರಾಂಗೆ 88,882 ರೂ ಇತ್ತು. ಕಳೆದ ವಾರ, ಮೆಹ್ತಾ ಇಕ್ವಿಟೀಸ್‌ನ ಸರಕುಗಳ ವಿಪಿ ರಾಹುಲ್ ಕಲಾಂತ್ರಿ, ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಜಾಗತಿಕ ಇಕ್ವಿಟಿ ಮಾರುಕಟ್ಟೆಗಳಲ್ಲಿನ ಅಸ್ಥಿರತೆಯು ಅಮೂಲ್ಯವಾದ ಲೋಹಗಳ ಸುರಕ್ಷಿತ ಸ್ಥಾನಮಾನವನ್ನು ಹೆಚ್ಚಿಸಿದೆ ಎಂದು ಹೇಳಿದರು.
ದೇಶೀಯ ಮಟ್ಟದಲ್ಲಿ ದುರ್ಬಲವಾದ ರೂಪಾಯಿಯು ಮೌಲ್ಯವು ಮತ್ತಷ್ಟು ಬೆಂಬಲ ಬೆಲೆಗಳನ್ನು ನೀಡಿತು, ಈ ಪ್ರವೃತ್ತಿಯು ಮುಂದುವರಿಯುವ ನಿರೀಕ್ಷೆಯಿದೆ. ಆದಾಗ್ಯೂ, ಯುಎಸ್ 10 ವರ್ಷದ ಬಾಂಡ್ ಇಳುವರಿಯು 7-ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ ಕಾರಣ ಲಾಭಗಳು ಸೀಮಿತವಾಗಿರಬಹುದು.
ಸ್ಪಾಟ್ ಚಿನ್ನದ ಬೆಲೆಗಳು:
ಟ್ರೇಡಿಂಗ್ ಎಕನಾಮಿಕ್ಸ್ ಪ್ರಕಾರ, ಸೋಮವಾರ ರಜಾದಿನದ ವ್ಯಾಪಾರದ ಮಧ್ಯೆ ಚಿನ್ನವು ಪ್ರತಿ ಔನ್ಸ್‌ಗೆ $2,620 ಕ್ಕಿಂತ ಹೆಚ್ಚು ವಹಿವಾಟು ನಡೆಸಿತು, ಹೂಡಿಕೆದಾರರು ಯುಎಸ್ ಫೆಡರಲ್ ರಿಸರ್ವ್‌ನ ಹಣಕಾಸು ನೀತಿಯ ದೃಷ್ಟಿಕೋನ ಮತ್ತು ಅಧ್ಯಕ್ಷ ಚುನಾಯಿತ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಫೆಡ್‌ನ ಹಾಕಿಶ್ ಪ್ರೊಜೆಕ್ಷನ್‌ಗಳು PCE ಹಣದುಬ್ಬರ ದತ್ತಾಂಶದಿಂದ ಸವಾಲು ಮಾಡಲ್ಪಟ್ಟವು, ಹೆಚ್ಚಿನ ಕಡಿತವು ಸಾಧ್ಯ ಎಂದು ಸೂಚಿಸುತ್ತದೆ, ಇದು ಇಳುವರಿ ರಹಿತ ಚಿನ್ನಕ್ಕೆ ಆದ್ಯತೆ ನೀಡಲಾಗಿದೆ.
ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ
| ನಗರ | 22 ಕ್ಯಾರೆಟ್ | 24 ಕ್ಯಾರೆಟ್ |
| ಬೆಂಗಳೂರು | 7,150 | 7,800 |
| ಚೆನ್ನೈ | 7,150 | 7,800 |
| ಮುಂಬೈ | 7,150 | 7,800 |
| ದೆಹಲಿ | 7,165 | 7,815 |
| ಕೋಲ್ಕತಾ | 7,150 | 7,800 |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
| ಬೆಂಗಳೂರು | 9,240 |
| ಚೆನ್ನೈ | 9,990 |
| ಮುಂಬೈ | 9,250 |
| ದೆಹಲಿ | 9,240 |
| ಕೋಲ್ಕತಾ | 9,240 |


Click it and Unblock the Notifications