For Quick Alerts
ALLOW NOTIFICATIONS  
For Daily Alerts

8 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ: ದಾಖಲೆಯ ಗರಿಷ್ಠ ಮಟ್ಟದಿಂದ 10,000 ರೂ. ಕಡಿಮೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸತತ ಕುಸಿತದಿಂದಾಗಿ ಆಭರಣ ಪ್ರಿಯರಿಗೆ ಭಾರೀ ಖುಷಿ ತಂದಿದೆ. ಚಿನ್ನವು ಸತತ ನಾಲ್ಕನೇ ದಿನವೂ ಭಾರತೀಯ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದು, 8 ತಿಂಗಳ ಕನಿಷ್ಠ ಮಟ್ಟಕ್ಕೆ ಸಮೀಪಿಸಿದೆ.

ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.12ರಷ್ಟು ಏರಿಕೆ ಕಂಡು, 46,297 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ ಶೇಕಡಾ 0.4ರಷ್ಟು ಇಳಿಕೆಯಾಗಿ, 68,989 ರೂಪಾಯಿಗೆ ತಲುಪಿದೆ.

8 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ

ಜಾಗತಿಕ ಆರ್ಥಿಕ ಚೇತರಿಕೆ ಮತ್ತು ಹೆಚ್ಚುತ್ತಿರುವ ಅಮೆರಿಕಾ ಬಾಂಡ್ ಇಳುವರಿಯ ಭರವಸೆಯ ಮಧ್ಯೆ ಈ ವರ್ಷದ ಆರಂಭದಿಂದಲೂ ಚಿನ್ನದ ಲೋಹವು ಒತ್ತಡದಲ್ಲಿದೆ. ಆಗಸ್ಟ್‌ನ ಗರಿಷ್ಠ 56,200 ರೂಪಾಯಿಗೆ ಹೋಲಿಸಿದರೆ, ಚಿನ್ನವು ಸುಮಾರು ಶೇಕಡಾ 18ರಷ್ಟು ಅಥವಾ ಸುಮಾರು 10,000 ರೂಪಾಯಿ ಕಡಿಮೆಯಾಗಿದೆ.

ಚಿನ್ನದ ಬೆಲೆ ಮತ್ತಷ್ಟು ಕುಸಿತ: ಫೆಬ್ರವರಿ 25ರ ಬೆಲೆ ತಿಳಿದುಕೊಳ್ಳಿಚಿನ್ನದ ಬೆಲೆ ಮತ್ತಷ್ಟು ಕುಸಿತ: ಫೆಬ್ರವರಿ 25ರ ಬೆಲೆ ತಿಳಿದುಕೊಳ್ಳಿ

ಸ್ಪಾಟ್ ಚಿನ್ನವು ಔನ್ಸ್‌ಗೆ 1,770.15 ಡಾಲರ್‌ಗೆ ತಲುಪಿದ್ದರೆ, ಇದುವರೆಗೆ ವಾರದಲ್ಲಿ ಶೇಕಡಾ 0.6% ಕುಸಿತ ಕಂಡಿದೆ. ಅಮೆರಿಕಾ ಚಿನ್ನದ ಭವಿಷ್ಯವು ಶೇಕಡಾ 0.5ರಷ್ಟು ಕುಸಿದು 1,767.10 ಡಾಲರ್‌ಗೆ ತಲುಪಿದೆ.

ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.3ರಷ್ಟು ಏರಿಕೆ ಕಂಡು 27.49 ಡಾಲರ್‌ಗೆ ತಲುಪಿದ್ದರೆ, ಪಲ್ಲಾಡಿಯಮ್ ಸ್ಥಿರವಾಗಿ 2,400.43 ಡಾಲರ್ ಮತ್ತು ಪ್ಲಾಟಿನಂ ಶೇಕಡಾ 0.1ರಷ್ಟು ಏರಿಕೆಯಾಗಿ 1,217.93 ಡಾಲರ್‌ಗೆ ತಲುಪಿದೆ.

English summary

Gold Prices Near 8 Month Lows: Down Rs 10,000 From Record Highs

Gold struggled in Indian markets for the fourth day in a row and remained near 8-month lows.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X