For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ಬೆಳ್ಳಿ ಬೆಲೆಯು ಕುಸಿದಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಜಾಗತಿಕ ಸಕಾರಾತ್ಮಕ ಸೂಚನೆಗಳ ನಡುವೆಯು ದುರ್ಬಲವಾಗಿ ಉಳಿದಿದೆ. ಇಂದು ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ, 48,076 ರೂಪಾಯಿನಷ್ಟಿದ್ದರೆ, ಬೆಳ್ಳಿ ಬೆಲೆಯು ಕೆಜಿಗೆ 68 ರೂಪಾಯಿ ಕುಸಿದಿದೆ.

ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 400 ರೂಪಾಯಿ ಇಳಿಕೆಗೊಂಡಿತ್ತು. ಆದರೆ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಮತಟ್ಟಾಗಿದೆ. ಕೊರೊನಾವೈರಸ್ ಹೊಸ ಡೆಲ್ಟಾ ರೂಪಾಂತರವು ಆರ್ಥಿಕ ಚೇತರಿಕೆಗೆ ಹಾನಿಯುಂಟು ಮಾಡಬಹುದು ಎಂಬ ಆತಂಕದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತಗೊಳ್ಳುತ್ತಿದೆ.

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ಬೆಳ್ಳಿ ಬೆಲೆಯು ಕುಸಿದಿದೆ

ಶುಕ್ರವಾರ (ಜುಲೈ 16) ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 1,812.83 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.6ರಷ್ಟು ಕುಸಿದು 25.50 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.2ರಷ್ಟು ಇಳಿದು 1,100.55 ಡಾಲರ್‌ಗೆ ತಲುಪಿದೆ.

ನವದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ 47,140 ರೂಪಾಯಿ ತಲುಪಿದೆ, ಶುದ್ಧ ಚಿನ್ನ 10 ಗ್ರಾಂ 51,430 ರೂಪಾಯಿಗೆ ಮುಟ್ಟಿದೆ. ಬೆಂಗಳೂರಿನಲ್ಲಿ 22 & 24 ಕ್ಯಾರೆಟ್ ಚಿನ್ನ 10 ಗ್ರಾಂ 48,990 ರೂಪಾಯಿ ದಾಖಲಾಗಿದೆ.

English summary

Gold Prices Remain Weak: A Day After Sharp Fall

Gold and silver prices remained weak today in Indian markets amid lacklustre global cues. On MCX, gold futures were flat at Rs 48,076 per 10 gram
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X