ಸತತ ಎರಡು ದಿನಗಳ ಕುಸಿತದ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಕೂಡ ಹೆಚ್ಚಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಇಂದು 10 ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆಗೊಂಡು 44,835 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇಕಡಾ 0.34ರಷ್ಟು ಏರಿಕೆಗೊಂಡ 65,190 ರೂಪಾಯಿಗೆ ತಲುಪಿದೆ.
ಎಂಸಿಎಕ್ಸ್ ಚಿನ್ನವು 44700 ರಿಂದ 44600 ಮಟ್ಟದಲ್ಲಿ ಬೆಂಬಲವನ್ನು ಹೊಂದಿದ್ದು, 45000 ರಿಂದ 45100 ಮಟ್ಟದಲ್ಲಿ ಪ್ರತಿರೋಧವನ್ನು ಹೊಂದಿದೆ ಎಂದು ಕ್ಯಾಪಿಟಲ್ವಿಯಾ ಗ್ಲೋಬಲ್ ರಿಸರ್ಚ್ ಲಿಮಿಟೆಡ್‌ನ ಕರೆನ್ಸಿ ಮತ್ತು ಸರಕುಗಳ ಉತ್ಪನ್ನ ವ್ಯವಸ್ಥಾಪಕ ಕ್ಷಿತಿಜ್ ಪುರೋಹಿತ್ ಹೇಳಿದ್ದಾರೆ.

ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ ಶೇಕಡಾ 0.3 ರಷ್ಟು ಏರಿಕೆಯಾಗಿ 1,731.75 ಡಾಲರ್‌ಗೆ ತಲುಪಿದೆ. ಬೆಳ್ಳಿ ಬೆಲೆಯು ಶೇಕಡಾ 0.3ರಷ್ಟು ಹೆಚ್ಚಿದ್ದು 25.16 ಡಾಲರ್ ಮತ್ತು ಪ್ಲಾಟಿನಂ 1,168 ಡಾಲರ್‌ಗೆ ಮುಟ್ಟಿದೆ.
ಈ ತಿಂಗಳ ಆರಂಭದಲ್ಲಿ ಒಂದು ವರ್ಷದ ಕಡಿಮೆ ಮಟ್ಟಕ್ಕೆ ಕುಸಿದ ನಂತರ ಕಳೆದ ಎರಡು ವಾರಗಳಿಂದ ಚಿನ್ನವು ಹೆಚ್ಚು ಏರಿಳಿತ ಕಾಣದೆ ಒಂದೇ ಶ್ರೇಣಿಯಲ್ಲಿ ಉಳಿದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿನ್ನವು 10 ಗ್ರಾಂಗೆ, ದಾಖಲೆಯ 56,200 ರೂಪಾಯಿ ಗರಿಷ್ಠ ಮಟ್ಟವನ್ನು ತಲುಪಿತ್ತು.


Click it and Unblock the Notifications