For Quick Alerts
ALLOW NOTIFICATIONS  
For Daily Alerts

ಚಿನ್ನ, ಬೆಳ್ಳಿ ಬೆಲೆ ಇಳಿಕೆ: ದಾಖಲೆಯ ಮಟ್ಟಕ್ಕಿಂತ ಇನ್ನೂ 7000 ರೂ. ಕಡಿಮೆ

|

ಭಾರತದಲ್ಲಿ ಸತತ ಎರಡನೇ ದಿನವೂ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಗೊಂಡಿದೆ. ಜಾಗತಿಕವಾಗಿ ನಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 49,131 ರೂಪಾಯಿಗೆ ತಲುಪಿದ್ದು, ಬೆಳ್ಳಿ ಬೆಲೆಯು ಕೆಜಿಗೆ ಶೇಕಡಾ 0.3ರಷ್ಟು ಕಡಿಮೆಯಾಗಿ 71,619 ರೂಪಾಯಿಗೆ ತಲುಪಿದೆ.

 

ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಜೂನ್ 08ರ ಬೆಲೆ ಇಲ್ಲಿದೆಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಜೂನ್ 08ರ ಬೆಲೆ ಇಲ್ಲಿದೆ

ಕಳೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಶೇಕಡಾ 0.35ರಷ್ಟು ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 49,550 ರಿಂದ 49,750 ಮಟ್ಟದಲ್ಲಿ ಪ್ರತಿರೋಧವನ್ನು ಎದುರಿಸುತ್ತಿದ್ದು, 48,210ರ ಬೆಂಬಲವನ್ನು ಹೊಂದಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಚಿನ್ನವು ಕಳೆದ ವರ್ಷದ ದಾಖಲೆಯ ಗರಿಷ್ಠ 56,200 ರೂಪಾಯಿಗಳಿಂದ ಇನ್ನೂ 7,000 ರೂಪಾಯಿಗಳಷ್ಟು ಕಡಿಮೆಯಾಗಿದೆ.

 
ಚಿನ್ನದ ಬೆಲೆ ಇಳಿಕೆ: ದಾಖಲೆಯ ಮಟ್ಟಕ್ಕಿಂತ ಇನ್ನೂ 7000 ರೂ. ಕಡಿಮೆ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆ ಸಮತಟ್ಟಾಗಿದ್ದು, ದುರ್ಬಲ ಡಾಲರ್‌ನಿಂದಾಗಿ ಸ್ಪಾಟ್ ಚಿನ್ನವು ಔನ್ಸ್‌ಗೆ 1,900 ಡಾಲರ್‌ ಸಮೀಪದಲ್ಲಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇ. 0.1ರಷ್ಟು ಏರಿಕೆಯಾಗಿ 27.89 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇ. 0.1ರಷ್ಟು ಏರಿಕೆಗೊಂಡು 1,174.02 ಡಾಲರ್‌ಗೆ ತಲುಪಿದೆ.

ಎಸ್‌ಪಿಡಿಆರ್ ಗೋಲ್ಡ್ ಟ್ರಸ್ಟ್ (ವಿಶ್ವದ ಅತಿದೊಡ್ಡ ಚಿನ್ನದ ಬೆಂಬಲಿತ ವಿನಿಮಯ-ವಹಿವಾಟು ನಿಧಿ), ಶುಕ್ರವಾರದಂದು ಶೇ. 0.6ರಷ್ಟು ಕುಸಿದು 1,043.16 ಟನ್‌ಗಳಿಂದ 1,037.33 ಟನ್‌ಗೆ ತಲುಪಿದೆ.

English summary

Gold Prices Slips Rs 7000 From Record Highs: Silver Rates Down

Gold and silver prices in India inched lower today amid flat global rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X