6 ದಿನಗಳ ಬಳಿಕ ಮೊದಲ ಬಾರಿಗೆ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ ಇಳಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಏರಿಕೆಗೊಂಡ ಬಳಿಕ ಗುರುವಾರ ಕೊಂಚ ಕುಸಿತಗೊಂಡಿದೆ. ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು ಶೇಕಡಾ 0.3ರಷ್ಟು ಇಳಿದು 47,776 ರೂಪಾಯಿಗೆ ತಲುಪಿದ್ದರೆರೆ, ಬೆಳ್ಳಿ ಬೆಲೆಯು ಶೇಕಡಾ 0.5ರಷ್ಟು ಇಳಿಕೆಗೊಂಡು ಪ್ರತಿ ಕೆಜಿಗೆ 69,008 ರೂಪಾಯಿಗೆ ತಲುಪಿದೆ.

ಏಷ್ಯನ್ ಇಕ್ವಿಟಿ ಮಾರುಕಟ್ಟೆಗಳು ಇಂದು ಕೆಳಮಟ್ಟದಲ್ಲಿದ್ದು, ಎಸ್ & ಪಿ 500 ಮತ್ತು ನಾಸ್ಡಾಕ್ 100 ಎರಡೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡ ನಂತರ ಯುಎಸ್ ಪ್ಯೂಚರ್ಸ್ ಕುಸಿದಿದೆ.

6 ದಿನಗಳ ಬಳಿಕ ಮೊದಲ ಬಾರಿಗೆ ಕುಸಿದ ಚಿನ್ನದ ಬೆಲೆ

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.2ರಷ್ಟು ಕುಸಿದು 26.07 ಡಾಲರ್‌ಗೆ ಇಳಿದಿದ್ದರೆ, ಪ್ಲಾಟಿನಂ ಶೇಕಡಾ 0.4ರಷ್ಟು ಇಳಿಕೆಗೊಂಡು 1,080.37 ಡಾಲರ್‌ಗೆ ತಲುಪಿದೆ.

ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನ 10 ಗ್ರಾಂ 46,810 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,860 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ 22 & 24 ಕ್ಯಾರೆಟ್ ಚಿನ್ನ ಹೆಚ್ಚಿನ ಬದಲಾವಣೆ ಕಾಣದೆ 44,650 ರೂಪಾಯಿ ಮತ್ತು 48,710 ರೂಪಾಯಿಗೆ ಮುಟ್ಟಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+