For Quick Alerts
ALLOW NOTIFICATIONS  
For Daily Alerts

ಭಾರೀ ಏರಿಕೆಗೊಂಡಿದ್ದ ಚಿನ್ನದ ಬೆಲೆ ಇಂದು ಕುಸಿತ: ಬೆಳ್ಳಿ ಬೆಲೆ ಇಳಿಕೆ

|

ಭಾರತೀಯ ಮಾರುಕಟ್ಟೆಯಲ್ಲಿ ಈ ತಿಂಗಳು ಭಾರೀ ಏರಿಕೆ ದಾಖಲಿಸಿದ್ದ ಹಳದಿ ಲೋಹದ ಬೆಲೆ ಇಂದು ಕುಸಿತಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 47,352 ರೂಪಾಯಿಗೆ ಇಳಿದಿದ್ದರೆ, ಬೆಳ್ಳಿ ಬೆಲೆಯು ಶೇಕಡಾ 0.7ರಷ್ಟು ಕುಸಿದು ಪ್ರತಿ ಕೆಜಿಗೆ, 68,223 ರೂಪಾಯಿಗೆ ತಲುಪಿದೆ.

ಈ ತಿಂಗಳ ಆರಂಭದಲ್ಲಿ ಚಿನ್ನದ ದರವು, 10 ಗ್ರಾಂ 44,000 ರೂಪಾಯಿಗೆ ಏರಿಕೆಯಾಗಿದೆ. ಸ್ಪಾಟ್ ಚಿನ್ನವು ಶೇಕಡಾ 0.1ರಷ್ಟು ಏರಿಕೆಗೊಂಡು 1,777 ಡಾಲರ್‌ಗೆ ತಲುಪಿದೆ.

ಭಾರೀ ಏರಿಕೆಗೊಂಡಿದ್ದ ಚಿನ್ನದ ಬೆಲೆ ಇಂದು ಕುಸಿತ

ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.6ರಷ್ಟು ಕುಸಿದು 25.81 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಸ್ಥಿರವಾಗಿ 1,203.61 ಡಾಲರ್‌ನಲ್ಲಿ ಉಳಿದಿದೆ. ಉತ್ಪಾದನೆ ಮತ್ತು ಸೇವೆಗಳನ್ನು ಖರೀದಿಸುವ ಡೇಟಾವನ್ನು ಅಮೆರಿಕಾ ಶುಕ್ರವಾರ ಬಿಡುಗಡೆ ಮಾಡುತ್ತದೆ. ಪರಿಣಾಮ ಚಿನ್ನವು ಔನ್ಸ್‌ಗೆ 1,778.97 ಆಗಿದ್ದು, 0.1% ಏರಿಕೆಯಾಗಿದೆ.

ಕಳೆದ 15 ದಿನಗಳಲ್ಲಿ ಎಂಸಿಎಕ್ಸ್‌ ಸ್ಪಾಟ್‌ ಚಿನ್ನದ ಬೆಲೆ 10 ಗ್ರಾಂಗೆ ಶೇಕಡಾ 6ರಷ್ಟು ಏರಿಕೆಯಾಗಿ 46,648 ರೂಪಾಯಿಗೆ ತಲುಪಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಔನ್ಸ್‌ಗೆ ಶೇಕಡಾ 4ರಷ್ಟು ಏರಿಕೆಗೊಂಡು 1,781 ಅಮೆರಿಕನ್ ಡಾಲರ್‌ಗೆ ತಲುಪಿದೆ.

English summary

Gold Prices Today Down After Big Jump: Silver Rates slump

Gold prices struggled today in Indian markets after posting big gains so far this month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X