For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಸತತ 6ನೇ ದಿನ ಇಳಿಕೆ: 8 ತಿಂಗಳಲ್ಲಿ ಕನಿಷ್ಠಕ್ಕೆ ಕುಸಿತ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯಾಗುತ್ತಿದ್ದು, ಶುಕ್ರವಾರ ಸತತ 6ನೇ ದಿನ ಇಳಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.2ರಷ್ಟು ಇಳಿಕೆಯಾಗಿ 46,145 ಕ್ಕೆ ತಲುಪಿದೆ. ಈ ಮೂಲಕ 8 ತಿಂಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ.

ಚಿನ್ನದ ಬೆಲೆ ಮತ್ತೆ ಕುಸಿತ: ಎಷ್ಟು ರೂಪಾಯಿ ಕಡಿಮೆ ಆಗಿದೆ?ಚಿನ್ನದ ಬೆಲೆ ಮತ್ತೆ ಕುಸಿತ: ಎಷ್ಟು ರೂಪಾಯಿ ಕಡಿಮೆ ಆಗಿದೆ?

ಬೆಳ್ಳಿ ಭವಿಷ್ಯವು ಶೇಕಡಾ 1ರಷ್ಟು ಕುಸಿದು ಕೆಜಿಗೆ 68,479 ರೂಪಾಯಿಗೆ ತಲುಪಿದೆ. 2020 ರಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಆಗಸ್ಟ್‌ನಲ್ಲಿ 56,200 ರೂಪಾಯಿ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಈ ವರ್ಷ ಇಲ್ಲಿಯವರೆಗೆ 10 ಗ್ರಾಂಗೆ ಶೇಕಡಾ 8ರಷ್ಟು ಅಥವಾ 4,000 ರೂಪಾಯಿನಷ್ಟು ಕಡಿಮೆಯಾಗಿದೆ.

ಚಿನ್ನದ ಬೆಲೆ ಸತತ 6ನೇ ದಿನ ಇಳಿಕೆ: 8 ತಿಂಗಳಲ್ಲಿ ಕನಿಷ್ಠಕ್ಕೆ ಕುಸಿತ

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.4ರಷ್ಟು ಕುಸಿದು 1,769.03 ಡಾಲರ್‌ಗೆ ತಲುಪಿದ್ದು, ಈ ವರ್ಷ ಇಲ್ಲಿಯವರೆಗೆ ಸುಮಾರು ಶೇಕಡಾ 3ರಷ್ಟು ಕುಸಿದಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಜಾಗತಿಕ ಮಾರುಕಟ್ಟೆಗಳಲ್ಲಿ ಬೆಳ್ಳಿ ಔನ್ಸ್‌ಗೆ ಶೇಕಡಾ 1.1ರಷ್ಟು ಇಳಿದು 26.71 ಡಾಲರ್‌ಗೆ ತಲುಪಿದೆ. ಈ ವಾರ ಇಲ್ಲಿಯವರೆಗೆ ಇದು ಶೇಕಡಾ 2.5ರಷ್ಟು ಕಡಿಮೆಯಾಗಿದೆ. ಪ್ಲಾಟಿನಂ ಶೇಕಡಾ 2.4ರಷ್ಟು ಕುಸಿದು 1,244.19 ಡಾಲರ್‌ಗೆ ತಲುಪಿದ್ದರೆ, ಪಲ್ಲಾಡಿಯಮ್ ಶೇಕಡಾ 0.7ನಷ್ಟು ಕುಸಿದು 2,334.58 ಡಾಲರ್‌ಗೆ ತಲುಪಿದೆ.

ಬ್ಲೂಮ್‌ಬರ್ಗ್‌ರ ಪ್ರಕಾರ, 2021 ರಲ್ಲಿ ಇದುವರೆಗೆ ಶೇಕಡಾ 7ರಷ್ಟು ಸ್ಪಾಟ್ ಚಿನ್ನದ ಕುಸಿತವು 1991ರ ಬಳಿಕ ಕಂಡುಬಂದ ತೀವ್ರ ಕುಸಿತವಾಗಿದೆ.

English summary

Gold Prices Today Down At 8 Months Low

Gold and silver prices in India continued their decline in Indian markets. Today down 8 month low
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X