For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟದಿಂದ 7,000 ರೂಪಾಯಿ ಕಡಿಮೆ

|

ಭಾರತದಲ್ಲಿ ಹಳದಿ ಲೋಹದ ಬೆಲೆ ಕಳೆದ ಹಲವು ವಾರಗಳಲ್ಲಿ ಸಾಕಷ್ಟು ಏರಿಕೆಯ ನಡುವೆ ಕಳೆದ ಎರಡು ದಿನಗಳಲ್ಲಿ ಕೊಂಚ ಇಳಿಕೆ ದಾಖಲಿಸಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.08ರಷ್ಟು ಇಳಿಕೆ ಕಂಡು, 48,953 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ ಶೇಕಡಾ 0.3ರಷ್ಟು ಇಳಿಕೆಯಾಗಿ, 71,308 ರೂಪಾಯಿಗೆ ತಲುಪಿದೆ.

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ ಈ 5 ಅಂಶ ಗಮನದಲ್ಲಿರಲಿಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ ಈ 5 ಅಂಶ ಗಮನದಲ್ಲಿರಲಿ

ಭಾರತದಲ್ಲಿ, ಕಳೆದ ವಾರ ಐದು ತಿಂಗಳ ಗರಿಷ್ಠ 49,800 ರೂಪಾಯಿಗೆ ತಲುಪಿದ ನಂತರ ಚಿನ್ನದ ದರಗಳು ಸಾಕಷ್ಟು ಏರಿಳಿತಗೊಂಡಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿನ್ನವು ದಾಖಲೆಯ ಗರಿಷ್ಠ, 56,200 ರೂಪಾಯಿಗೆ ಏರಿತು. ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಚಿನ್ನದ ಬೆಲೆ 7,000 ರೂಪಾಯಿ ಕಡಿಮೆಯಾಗಿದೆ.

ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟದಿಂದ 7,000 ರೂಪಾಯಿ ಕಡಿಮೆ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪಾಟ್ ಚಿನ್ನ ಶೇಕಡಾ 0.2ರಷ್ಟು ಕುಸಿದು, ಪ್ರತಿ ಔನ್ಸ್‌ಗೆ 1,886.76 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.7ರಷ್ಟು ಇಳಿದು 27.58 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.2ರಷ್ಟು ಏರಿಕೆಗೊಂಡು 1,164.72 ಡಾಲರ್‌ಗೆ ತಲುಪಿದೆ.

ಸದ್ಯ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,120 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 51,270 ರೂಪಾಯಿಗೆ ಮುಟ್ಟಿದೆ. ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 45,800 ರೂಪಾಯಿಗೆ ಏರಿಕೆಗೊಂಡಿದ್ದು, 49,970 ರೂಪಾಯಿಗೆ ತಲುಪಿದೆ.

English summary

Gold Prices Today Down For 2nd Time In 2 Days: Rs 7000 From Record High

Gold and silver rates in India edged lower amid muted global cues. On MCX, gold futures were down 0.08% to Rs 48,953 per 10 gram while silver futures were down 0.3% to Rs 71,308 per kg.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X