For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಸತತ 5ನೇ ದಿನ ಕುಸಿತ: 1 ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ!

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಂದು ಸತತ ಐದನೇ ದಿನ ಕುಸಿತಕ್ಕೆ ಸಾಕ್ಷಿಯಾಗಿದೆ. ಎಂಸಿಎಕ್ಸ್‌ನಲ್ಲಿ ಜೂನ್ ಚಿನ್ನದ ಭವಿಷ್ಯವು ಶೇಕಡಾ 0.3ರಷ್ಟು ಕುಸಿದು ಒಂದು ವರ್ಷದ ಕನಿಷ್ಠ 44,300 ರೂಪಾಯಿಗೆ ತಲುಪಿದೆ.

 

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತಷ್ಟು ಇಳಿಕೆಆಭರಣ ಪ್ರಿಯರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತಷ್ಟು ಇಳಿಕೆ

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಶೇಕಡಾ 0.8ರಷ್ಟು ಇಳಿದು ಪ್ರತಿ ಕೆಜಿಗೆ 62,617 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.5ರಷ್ಟು ಮತ್ತು ಬೆಳ್ಳಿ ಶೇಕಡಾ 1.7ರಷ್ಟು ಕುಸಿದಿದೆ.

 
ಚಿನ್ನದ ಬೆಲೆ ಸತತ 5ನೇ ದಿನ ಕುಸಿತ: 1 ವರ್ಷದ ಕನಿಷ್ಠ ಮಟ್ಟ

ಜಾಗತಿಕ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಇಳಿಕೆಯಾಗಿ 1,683.56 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ 24.01 ಡಾಲರ್‌ಗೆ ಸ್ಥಿರವಾಗಿದ್ದರೆ, ಪ್ಲಾಟಿನಂ ಶೇಕಡಾ 0.5ರಷ್ಟು ಏರಿಕೆಯಾಗಿ 1,160.05 ಡಾಲರ್‌ ಮತ್ತು ಪಲ್ಲಾಡಿಯಮ್ ಶೇಕಡಾ 0.7ರಷ್ಟು ಏರಿಕೆಯಾಗಿ 2,607.04 ಡಾಲರ್‌ಗೆ ತಲುಪಿದೆ.

ಯುಎಸ್ ಬಾಂಡ್ ಇಳುವರಿ ಮಂಗಳವಾರ 15 ತಿಂಗಳ ಗರಿಷ್ಠ ಶೇ. 1.776ಕ್ಕೆ ಏರಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರ ಮೂಲಸೌಕರ್ಯ ಪ್ಯಾಕೇಜ್ ಮತ್ತು ಸಾಲ ವಿತರಣೆಯನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯ ಮೇಲೆ ಯುಎಸ್ ಬಾಂಡ್ ಇಳುವರಿ ಹೆಚ್ಚಾಗಿದೆ.

English summary

Gold Prices Today Down For 5th Day In A Row: Silver Rate Drops

Gold prices fell for fifth day today while silver continued its downtrend in Indian markets, tracking softer global rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X