ಭಾರತೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕೊಂಚ ಕುಸಿತಗೊಂಡಿವೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.15ರಷ್ಟು ಕುಸಿದು 49,363 ರೂಪಾಯಿಗೆ ತಲುಪಿದೆ. ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.6ರಷ್ಟು ಇಳಿದು 71,832 ರೂಪಾಯಿಗೆ ತಲುಪಿದೆ.
ಕಳೆದ ವಹಿವಾಟಿನಲ್ಲಿ ಚಿನ್ನವು 10 ಗ್ರಾಂಗೆ 4 ತಿಂಗಳ ಗರಿಷ್ಠ 49,700 ರೂಪಾಯಿಗೆ ಏರಿತು. ಜಾಗತಿಕ ಮಟ್ಟದಲ್ಲಿ ಹಳದಿ ಲೋಹದ ಬೆಲೆ ಏರಿಕೆಗೊಂಡ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಚಿನ್ನದ ದರಗಳು ಸುಮಾರು 5,000 ರೂಪಾಯಿ ಏರಿದೆ. ಚಿನ್ನದ ಬೆಲೆ ಕಳೆದ ವರ್ಷದ ದಾಖಲೆಯ ಗರಿಷ್ಠ 56,200 ರೂಪಾಯಿಗೆ ಹೋಲಿಸಿದರೆ ಇನ್ನೂ 7,000 ರೂ.ನಷ್ಟು ಕಡಿಮೆಯಾಗಿದೆ.

ಮಂಗಳವಾರ 5 ತಿಂಗಳ ಗರಿಷ್ಠ 1,916.40 ಡಾಲರ್‌ಗೆ ತಲುಪಿದ ನಂತರ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಕುಸಿದು 1,898.58 ಡಾಲರ್‌ಗೆ ತಲುಪಿದೆ. ಇತರ ಕರೆನ್ಸಿಗಳ ವಿರುದ್ಧವೂ ಡಾಲರ್ ಕುಸಿತಗೊಂಡಿದೆ.
ಚಿನ್ನವು 1915 ಡಾಲರ್ 1925 ಮಟ್ಟದಲ್ಲಿ ಪ್ರತಿರೋಧವನ್ನು ಎದುರಿಸುತ್ತಿದೆ ಹಾಗೂ 1875 ಮತ್ತು ನಂತರ 1810 ಡಾಲರ್ ಬೆಂಬಲವನ್ನು ಹೊಂದಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.
ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಶೇಕಡಾ 0.1ರಷ್ಟು ಕಡಿಮೆ 27.88 ಡಾಲರ್ ಮತ್ತು ಪ್ಲಾಟಿನಂ 1,191 ಡಾಲರ್‌ಗೆ ಸ್ಥಿರವಾಗಿದೆ.


Click it and Unblock the Notifications