ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತವಾಗಿ ಇಳಿಕೆ ಕಾಣುತ್ತಿದ್ದು, ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಎರಡನೇ ದಿನ ಕುಸಿದು 10ಗ್ರಾಂಗೆ 46,865 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ ಶೇ. 0.17ರಷ್ಟು ಹೆಚ್ಚಾಗಿದ್ದು, ಪ್ರತಿ ಕೆಜಿಗೆ 67,845 ರೂಪಾಯಿಗೆ ತಲುಪಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನವು 47,200 ರೂಪಾಯಿಗೆ ಪ್ರತಿರೋಧವನ್ನು ಎದುರಿಸುತ್ತಿದ್ದು, 46,360 ರೂ. ಬೆಂಬಲವನ್ನು ಹೊಂದಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನವು ಔನ್ಸ್‌ಗೆ 1,778.48 ಡಾಲರ್‌ನಷ್ಟು ಸ್ಥಿರವಾಗಿತ್ತು ಮತ್ತು ಸುಮಾರು ಶೇಕಡಾ 0.8ರಷ್ಟು ಲಾಭದ ಹಾದಿಯಲ್ಲಿದೆ. ಯುಎಸ್ ಸೂಚ್ಯಂಕವು 91.787 ಡಾಲರ್‌ಗೆ ಇಳಿದಿದೆ, ಇದು ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನದ ಬೆಲೆಯನ್ನ ಅಗ್ಗವಾಗಿಸುತ್ತದೆ.
ಇತರೆ ಅಮೂಲ್ಯವಾದ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.5ರಷ್ಟು ಏರಿಕೆಯಾಗಿ 26.06 ಡಾಲರ್‌ಗೆ ತಲುಪಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 46,140 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 50,240 ರೂಪಾಯಿ ದಾಖಲಾಗಿದೆ.


Click it and Unblock the Notifications