ಭಾರತೀಯ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆಯತ್ತ ಮುಖ ಮಾಡಿವೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.33ರಷ್ಟು ಇಳಿಕೆಯಾಗಿ, 45,767 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಶೇಕಡಾ 0.28ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ, 65,715 ರೂಪಾಯಿ ದಾಖಲಾಗಿದೆ.
ಕಳೆದ ವಹಿವಾಟಿನಲ್ಲಿ ಚಿನ್ನವು 10 ಗ್ರಾಂಗೆ 600 ರೂಪಾಯಿ ಅಥವಾ ಶೇಕಡಾ 1.25ರಷ್ಟು ಏರಿಕೆಗೊಂಡರೆ, ಬೆಳ್ಳಿ ಕೆಜಿಗೆ ಶೇಕಡಾ 2ರಷ್ಟು ಅಥವಾ 1,300 ರೂಪಾಯಿಗೆ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಳೆದ ವಹಿವಾಟುಗಳಲ್ಲಿ ಚಿನ್ನವು ದುರ್ಬಲ ಮಟ್ಟವನ್ನು ತಲುಪಿದ ನಂತರ ಮಂಗಳವಾರ (ಏಪ್ರಿಲ್ 06) ಏರಿಕೆ ಸಾಧಿಸಿತ್ತು. ಆದರೆ ಇಂದು ಹಳದಿ ಲೋಹವು ಕಡಿಮೆ ಮಟ್ಟದಲ್ಲಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿಕೆಯಾಗಿ 1,739.46 ಡಾಲರ್‌ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 1,745.15 ಡಾಲರ್‌ಗೆ ಏರಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಶೇಕಡಾ 0.3ರಷ್ಟು ಕುಸಿದು 25.10 ಡಾಲರ್‌ಗೆ ತಲುಪಿದ್ದರೆ, ಪಲ್ಲಾಡಿಯಮ್ ಶೇಕಡಾ 0.4ರಷ್ಟು ಇಳಿಕೆಯಾಗಿ 2,674.91 ಡಾಲರ್‌ಗೆ ತಲುಪಿದೆ.


Click it and Unblock the Notifications