For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಂದು ಕುಸಿತ: ಬೆಳ್ಳಿ ಬೆಲೆಯು ಇಳಿಕೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ ದುರ್ಬಲಗೊಂಡಿದ್ದು, ಇಳಿಕೆಯತ್ತ ಮುಖ ಮಾಡಿದೆ. ಎಂಸಿಎಕ್ಸ್‌ನಲ್ಲಿ ಕಳೆದ ವಹಿವಾಟಿನಲ್ಲಿ ಚಿನ್ನವು ಒಂದು ತಿಂಗಳ ಗರಿಷ್ಠ, 46,400 ರೂಪಾಯಿಗೆ ಮುಟ್ಟಿದ ನಂತರ, ಶೇಕಡಾ 0.1ರಷ್ಟು ಕಡಿಮೆಯಾಗಿ 46,320 ರೂಪಾಯಿಗೆ ತಲುಪಿದೆ.

ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.34ರಷ್ಟು ಇಳಿದು 66,405 ರೂಪಾಯಿಗೆ ತಲುಪಿದೆ. ರೂಪಾಯಿ ಕುಸಿತದ ನಂತರ ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.9ರಷ್ಟು ಏರಿಕೆಯಾದರೆ, ಬೆಳ್ಳಿ ಶೇಕಡಾ 1.1ನಷ್ಟು ಜಿಗಿದಿದೆ.

ಚಿನ್ನದ ಬೆಲೆ ಇಂದು ಕುಸಿತ: ಬೆಳ್ಳಿ ಬೆಲೆಯು ಇಳಿಕೆ

ಬುಧವಾರ ಚಿನ್ನವು 0.3% ಕುಸಿತದ ನಂತರ ಹಳದಿ ಲೋಹವು ಔನ್ಸ್‌ಗೆ 1,737.02 ಅಮೆರಿಕನ್ ಡಾಲರ್‌ನಷ್ಟಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಬಾಂಡ್‌ಗಳನ್ನು ಖರೀದಿಸುವ ಯೋಜನೆಯನ್ನು ಆರ್‌ಬಿಐ ಘೋಷಿಸಿದ ನಂತರ ಸುಮಾರು ಎರಡು ವರ್ಷಗಳಲ್ಲಿ ರೂಪಾಯಿ ತನ್ನ ಅತಿದೊಡ್ಡ ಏಕದಿನ ಕುಸಿತವನ್ನು ದಾಖಲಿಸಿದೆ.

ಭಾರತವು ತನ್ನ ಹೆಚ್ಚಿನ ಚಿನ್ನದ ಅಗತ್ಯವನ್ನು ಆಮದು ಮಾಡಿಕೊಳ್ಳುತ್ತದೆ. ಮಾರ್ಚ್‌ನಲ್ಲಿ ಭಾರತದ ಚಿನ್ನದ ಆಮದು ಪ್ರಮಾಣ ಶೇ. 471ರಷ್ಟು ಏರಿಕೆಯಾಗಿದ್ದು, ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕ ಕಡಿತಗೊಳಿಸಿದ ಬಳಿಕ ಚಿಲ್ಲರೆ ಖರೀದಿದಾರರು ಮತ್ತು ಆಭರಣ ವ್ಯಾಪಾರಿಗಳು ಹೆಚ್ಚಿನ ಮಟ್ಟದಲ್ಲಿ ಚಿನ್ನದ ಖರೀದಿಗೆ ಮುಗಿಬಿದ್ದಿದ್ದಾರೆ.

English summary

Gold Prices Today Fall After Surging To The One Month High

Gold and silver prices today edged lower in Indian markets, after a sharp upmove in the previous session.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X