ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಹಳದಿ ಲೋಹದ ಬೆಲೆ ಕುಸಿತಕ್ಕೆ ಸಾಕ್ಷಿಯಾಗಿದ್ದು, ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಶೇಕಡಾ 0.23ರಷ್ಟು ಕುಸಿದು 10 ಗ್ರಾಂಗೆ 44,590 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 64,840 ರೂಪಾಯಿಗೆ ತಲುಪಿದೆ.
ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.35ರಷ್ಟು ಮತ್ತು ಬೆಳ್ಳಿ ಬೆಲೆಯು ಶೇಕಡಾ 0.5ರಷ್ಟು ಕುಸಿದಿದೆ. ಈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ ಸುಮಾರು ಒಂದು ವರ್ಷದ ಕನಿಷ್ಠ 44,150 ರೂಪಾಯಿಗೆ ಇಳಿದಿದೆ. ಕಳೆದ ವರ್ಷ ಆಗಸ್ಟ್‌ನ ಗರಿಷ್ಠ 56,200 ರೂಪಾಯಿನಿಂದ 11,500 ರೂಪಾಯಿ ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆ ಇಂದು ಔನ್ಸ್‌ಗೆ 1,726 ಡಾಲರ್‌ನಷ್ಟಿದ್ದು, ಕಳೆದ ವಹಿವಾಟಿನಲ್ಲಿ ಒಂದು ವಾರದ ಕನಿಷ್ಠ 1,721 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಸ್ವಲ್ಪಮಟ್ಟಿಗೆ ಏರಿಕೆಯಾಗಿ 25 ಡಾಲರ್‌ಗಿಂತ ಹೆಚ್ಚಿದ್ದರೆ ಪಲ್ಲಾಡಿಯಮ್ ಶೇಕಡಾ 0.2ರಷ್ಟು ಏರಿಕೆಯಾಗಿ 2,614.51 ಡಾಲರ್‌ಗೆ ತಲುಪಿದೆ.
ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,150 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 48,160 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 400 ರೂಪಾಯಿ ಏರಿಕೆಗೊಂಡು 65,700 ರೂಪಾಯಿ ದಾಖಲಾಗಿದೆ.


Click it and Unblock the Notifications