ಭಾರತೀಯ ಷೇರುಪೇಟೆ ಏರಿಕೆಯ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಭಾರತೀಯ ಮಾರುಕಟ್ಟೆಗಳಲ್ಲಿ ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.22ರಷ್ಟು ಇಳಿಕೆಯಾಗಿ, 48,444 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ದರವು ಪ್ರತಿ ಕೆ.ಜಿ.ಗೆ ಶೇಕಡಾ 0.46ರಷ್ಟು ಇಳಿದು 71,480 ರೂಪಾಯಿಗೆ ತಲುಪಿದೆ.
ಕಳೆದ ವಹಿವಾಟಿನಲ್ಲಿ, ಚಿನ್ನವು ಶೇಕಡಾ 0.26ರಷ್ಟು ಹೆಚ್ಚಾಗಿದೆ ಮತ್ತು 4 ತಿಂಗಳ ಗರಿಷ್ಠ ಮಟ್ಟದ ಸಮೀಪಿಸಿತ್ತು. ಇದರ ಜೊತೆಗೆ ಬೆಳ್ಳಿ ಶೇಕಡಾ 1ಕ್ಕಿಂತ ಹೆಚ್ಚಾಗಿದೆ.

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.3ರಷ್ಟು ಕುಸಿದು 1,876.24 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.7ರಷ್ಟು ಕುಸಿದು 27.60 ಡಾಲರ್, ಪ್ಲ್ಯಾಟಿನಂ ಸ್ಥಿರವಾಗಿ 1,174 ಡಾಲರ್‌ಗೆ ತಲುಪಿದೆ.
2021-22ರ ಸವರನ್ ಗೋಲ್ಡ್ ಬಾಂಡ್ ಎರಡನೇ ಕಂತು ಮೇ 24 ರಿಂದ 28 ರವರೆಗೆ ಚಂದಾದಾರಿಕೆಗಾಗಿ ಮುಕ್ತವಾಗಿದೆ. ಆರ್‌ಬಿಐ ಭಾರತ ಸರ್ಕಾರದ ಪರವಾಗಿ ಬಾಂಡ್‌ಗಳನ್ನು ನೀಡುತ್ತದೆ. ಸಂಚಿಕೆ ಬೆಲೆಯನ್ನು ಪ್ರತಿ ಗ್ರಾಂಗೆ, 4,842 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ಇನ್ನು ಭಾರತದ ರೂಪಾಯಿ ಪ್ರತಿ ಯುಎಸ್ ಡಾಲರ್‌ಗೆ 72.86 ರೂಪಾಯಿಗೆ ಆರಂಭಗೊಂಡಿದೆ. ಮೇ 24 ರಂದು ಪ್ರತಿ ಯುಎಸ್ ಡಾಲರ್‌ಗೆ 72.96 ಕ್ಕೆ ಕೊನೆಗೊಂಡಿತ್ತು.


Click it and Unblock the Notifications