ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಸ್ವಲ್ಪ ಹೆಚ್ಚಾಗಿದ್ದು, ಕನಿಷ್ಠ 10 ಗ್ರಾಂಗೆ 47,000 ರೂಪಾಯಿನಷ್ಟಿದ್ದು, ಬೆಳ್ಳಿ ಬೆಲೆಯು ಶೇಕಡಾ 0.46ರಷ್ಟು ಏರಿಕೆಗೊಂಡು 67,823 ರೂಪಾಯಿಗೆ ತಲುಪಿದೆ.
ಎಂಸಿಎಕ್ಸ್‌ನ ಚಿನ್ನವು 47,800 ರೂಪಾಯಿ ಮತ್ತು 46,100 ರೂಪಾಯಿ ಪ್ರತಿರೋಧವನ್ನು ಹೊಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 1,780.06 ಡಾಲರ್‌ಗೆ ತಲುಪಿದೆ.

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆ ಕಂಡು 25.80 ಡಾಲರ್‌ರಷ್ಟಿದ್ದರೆ, ಪ್ಲಾಟಿನಂ ಶೇಕಡಾ 0.1ರಷ್ಟು ಏರಿಕೆ ಕಂಡು 1,080.63 ಡಾಲರ್‌ಗೆ ತಲುಪಿದೆ.
ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,260 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನವು 10 ಗ್ರಾಂ 50,350 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನವು 44,100 ರೂಪಾಯಿ ಹಾಗೂ ಶುದ್ಧ ಚಿನ್ನ 10 ಗ್ರಾಂ 48,110 ರೂಪಾಯಿಗೆ ದಾಖಲಾಗಿದೆ.


Click it and Unblock the Notifications